ಬೆಂಗಳೂರು:ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಸಿಕ್ಕಿ ಒಂದೂವರೆ ದಶಕ ಸಮೀಪಿಸುತ್ತಿದ್ದರೂ ಸ್ವಾಯತ್ತೆ ಸೇರಿ ಅನೇಕ ಸೌಲಭ್ಯ ದೊರಕದ ಕುರಿತು ಸಂಸತ್​ನಲ್ಲಿ ದನಿಯೆತ್ತಿ ಪರಿಹಾರ ಕಲ್ಪಿಸಿ ಎಂದು ರಾಜ್ಯವನ್ನು ಪ್ರತಿನಿಧಿಸುವ ಸಂಸದರು, ರಾಜ್ಯಸಭಾ ಸದಸ್ಯರು ಹಾಗೂ ಕೇಂದ್ರ ಸಚಿವರಿಗೆ ಕನ್ನಡ ಸಾಹಿತ್ಯ ಪರಿಷತ್ತು ಪತ್ರ ಬರೆದು ಆಗ್ರಹಿಸಿದೆ. ಕನ್ನಡ ಶಾಸ್ತ್ರೀಯ ಉನ್ನತಾಧ್ಯಯನ ಕೇಂದ್ರಕ್ಕೆ ಸ್ವಾಯತ್ತತೆ ಸಿಗಲು ರಾಜ್ಯದ ಜನಪ್ರತಿನಿಧಿಗಳು ಸಾಕಷ್ಟು ಪ್ರಯತ್ನ ನಡೆಸಿಲ್ಲ ಎಂದು ‘ಕನ್ನಡಕ್ಕೆ ಶಾಸ್ತ್ರೀಯ ಅವಮಾನ’ ಶೀರ್ಷಿಕೆಯಲ್ಲಿ ಜ.19ರಂದು ‘ವಿಜಯವಾಣಿ’ ವಿಶೇಷ ವರದಿ ಪ್ರಕಟಿಸಿತ್ತು.
ಇದೀಗ ಕಸಾಪ ಅಧ್ಯಕ್ಷ ಮಹೇಶ್ ಜೋಶಿ ಅವರು ಎಲ್ಲ ಸಂಸದರಿಗೆ ಪತ್ರ ಬರೆದಿದ್ದು, ಭಾರತೀಯ ಭಾಷೆಯೊಂದಕ್ಕೆ ಶಾಸ್ತ್ರೀಯ ಸ್ಥಾನಮಾನ ದಕ್ಕಿದರೆ ಕೇಂದ್ರ ಸರ್ಕಾರ ಅದಕ್ಕೆ ಕೆಲವು ವಿಶೇಷ ಸೌಲಭ್ಯಗಳನ್ನು ಒದಗಿಸಬೇಕಾಗುತ್ತದೆ. ಕನ್ನಡಕ್ಕೆ 13 ವರ್ಷದಲ್ಲಿ ದೊರೆತಿರುವ ಅನುದಾನ ಉನ್ನತ ಅಧ್ಯಯನ ಕೇಂದ್ರದ ಯೋಜನಾ ನಿರ್ದೇಶಕರು, ಆಡಳಿತ ಸಿಬ್ಬಂದಿ ಮತ್ತು 15 ಮಂದಿ ಸಂಶೋಧಕರ ಸಂಬಳ ಸಾರಿಗೆಗೂ ಸಾಕಾಗುತ್ತಿಲ್ಲ. ತಮಿಳುನಾಡಿನ ರಾಜಕಾರಣಿಗಳ ವ್ಯವಸ್ಥಿತ ಪ್ರಯತ್ನದಿಂದಾಗಿ ಉನ್ನತ ಶಾಸ್ತ್ರೀಯ ತಮಿಳು ಅಧ್ಯಯನ ಕೇಂದ್ರ ಮೈಸೂರಿನಿಂದ ತಮಿಳುನಾಡಿಗೆ ವರ್ಗಾವಣೆಗೊಂಡು ಸ್ವಾಯತ್ತ ಸಂಸ್ಥೆಯಾಗಿ ಅಸ್ತಿತ್ವಕ್ಕೆ ಬಂದಿದೆ. ಹಾಗಾಗಿ ಅದು ಹೆಚ್ಚು ಅನುದಾನ ಪಡೆಯಲು ಸಾಧ್ಯವಾಗಿದೆ.
ಮೈಸೂರಿನ ಭಾರತೀಯ ಭಾಷೆಗಳ ಕೇಂದ್ರ ಸಂಸ್ಥೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಶಾಸ್ತ್ರೀಯ ಕನ್ನಡ ಉನ್ನತ ಅಧ್ಯಯನ ಕೇಂದ್ರವನ್ನು ಪ್ರತ್ಯೇಕಿಸಬೇಕು. ಮೈಸೂರು ವಿವಿ ನೀಡಿರುವ ನಿವೇಶನದಲ್ಲಿ ಸುಸಜ್ಜಿತ ಕಟ್ಟಡ ನಿರ್ವಣವಾಗಬೇಕು. ಸಂಸ್ಕೃತ ಮತ್ತು ತಮಿಳಿಗೆ ನೀಡಿರುವಷ್ಟೇ ಅನುದಾನವನ್ನು ಕನ್ನಡಕ್ಕೂ ನೀಡಬೇಕು. ಈ ಕುರಿತು ಸದನದಲ್ಲಿ ಧ್ವನಿಯೆತ್ತಬೇಕು. ಖುದ್ದಾಗಿ ಕೇಂದ್ರ ಶಿಕ್ಷಣ ಸಚಿವ ಧರ್ವೇಂದ್ರ ಪ್ರಧಾನ್​ರನ್ನು ಭೇಟಿಯಾಗಿ ಕನ್ನಡಕ್ಕೆ ಆಗಿರುವ ಅನ್ಯಾಯ ಸರಿಪಡಿಸಲು ಕೋರಬೇಕೆಂದು ಒತ್ತಾಯಿಸಿದ್ದಾರೆ.
ವಿಜಯವಾಣಿ ವಿಜಯೋತ್ಸವ ವಿಜೇತರಿಗೆ ಬಹುಮಾನಗಳ ವಿತರಣೆ: ಕಾರು, ಬೈಕ್, ಫ್ರಿಜ್​ ಸೇರಿ ಹಲವು ಉಡುಗೊರೆ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 4 =
Remember me
