ಕನ್ನಡದಲ್ಲಿ ಆಂಗ್ಲ ಪದಗಳುಎಷ್ಟೊಂದು ಹಾಸುಹೊಕ್ಕಾಗಿವೆ ಎಂದರೆ ನಮ್ಮ ಮಾತುಗಳಲ್ಲಿ ಅವು ನಮಗೆ ಗೊತ್ತಿಲ್ಲದಂತೆ ನುಸುಳಿಬಿಟ್ಟಿರುತ್ತವೆ. ಬರಹದಲ್ಲೂ ಹಾಗೆಯೇ. ಸುದ್ದಿಯಲ್ಲೂ ಆಂಗ್ಲ ಪದಗಳು ಸಾಕಷ್ಟು ಸಂಖ್ಯೆಯಲ್ಲಿ ಕಂಡು ಬರುತ್ತವೆ. ಇದಕ್ಕೆ ನಮ್ಮ ವಿಜಯವಾಣಿ ಡಾಟ್ ನೆಟ್ (Vijayavani.net) ಸುದ್ದಿತಾಣ ಕೂಡ ಹೊರತಲ್ಲ.
ಸಾಧ್ಯವಾದಷ್ಟೂ ಕನ್ನಡ ಪದಗಳನ್ನೇ ಬಳಸಬೇಕು ಎಂಬುದು ನಮ್ಮ ಉದ್ದೇಶ. ಹಾಗಾಗಿ ನಮ್ಮ ನಲ್ಮೆಯ ಓದುಗರಿಗೆ ಒಂದು ಕೆಲಸ ಕೊಡುತ್ತಿದ್ದೇವೆ. ನಮ್ಮ ಸುದ್ದಿತಾಣದಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ನಿಮಗೆ ಆಂಗ್ಲ ಪದ ಕಾಣಿಸಿದರೆ ನೀವು ಅದನ್ನು ಗುರುತು ಮಾಡಿ ನಮಗೆ ಕಳುಹಿಸಿಕೊಡಿ. ಕನ್ನಡದ ಈ ಕೆಲಸದಲ್ಲಿ ತೊಡಗಿಸಿಕೊಂಡು ಅತ್ಯಧಿಕ ಆಂಗ್ಲ ಪದಗಳನ್ನು ಹುಡುಕಿ ಕಳಿಸಿದ ಅಗ್ರ ಹತ್ತು ಮಂದಿ ಕನ್ನಡಾಭಿಮಾನಿಗಳಿಗೆ ನಮ್ಮ ಕಡೆಯಿಂದ ಬಹುಮಾನ ದೊರೆಯಲಿದೆ. ನೀವು ಹುಡುಕಿದ ಆಂಗ್ಲಪದಗಳಿಗೆ ಸಂಬಂಧಿಸಿದ ಸುದ್ದಿಯ ಲಿಂಕ್ ಕೂಡ ಆ ಪದಗಳೊಂದಿಗೆ ನಮಗೆ ಕಳಿಸಿಕೊಡಬೇಕು‌.
ಈ ಅಭಿಯಾನ ನವೆಂಬರ್ ತಿಂಗಳುದ್ದಕ್ಕೂ ನಡೆಯುತ್ತದೆ. ಆಸಕ್ತರು ಹೀಗೆ ಒಂದು ದಿನದಲ್ಲಿ ಎಷ್ಟು ಸಲ ಬೇಕಾದರೂ ಆಂಗ್ಲ ಪದ ಹುಡುಕಿ ಕಳಿಸಬಹುದು. ಅಭಿಯಾನದುದ್ದಕ್ಕೂ ಎಷ್ಟು ದಿನ ಬೇಕಾದರೂ ಈ ಕೆಲಸದಲ್ಲಿ ತೊಡಗಿಸಿಕೊಳ್ಳಬಹುದು, ಇದಕ್ಕೆ ಮಿತಿ ಇಲ್ಲ. ಕೊನೆಯಲ್ಲಿ ಅತಿ ಹೆಚ್ಚು ಆಂಗ್ಲ ಪದ ಹುಡುಕಿ ಕಳಿಸಿದ ಬಹುಮಾನ ವಿಜೇತರನ್ನು ಘೊಷಿಸಲಾಗುತ್ತದೆ. ನಾಡಿನ ಗಣ್ಯಮಾನ್ಯರೊಬ್ಬರು ವಿಜೇತರನ್ನು ಗೌರವಿಸಲಿದ್ದಾರೆ.
ಬನ್ನಿ ನಮ್ಮ ಈ ಅಭಿಯಾನದಲ್ಲಿ ಭಾಗವಹಿಸಿ. ನಮ್ಮ ಸುದ್ದಿ ತಾಣದ ವಿಳಾಸ–vijayavani.netಮತ್ತುಆಂಗ್ಲ ಪದ ಹುಡುಕಿ ಕಳಿಸಬೇಕಾದWhatsappಸಂಖ್ಯೆ – 88844 31903.
ಏನಿದು ಡ್ರೋನ್​ ಪ್ರತಾಪನ ಹೊಸ ಅವತಾರ? ನೆಟ್ಟಿಗರ ಬಗೆಬಗೆಯ ಕಾಮೆಂಟ್​ ನೋಡಿದ್ರೆ ಬಿದ್ದು ಬಿದ್ದು ನಗ್ತೀರಾ!

ಈ ಪಾಕಿಸ್ತಾನದ ರಜಿನಿಕಾಂತ್​ಗೆ ಸೂಪರ್​ಸ್ಟಾರ್​ ರಜಿನಿಕಾಂತ್​ ನೋಡುವ ಆಸೆ: ಇಲ್ಲಿದೆ ವಿಶೇಷ​ ವಿಡಿಯೋ…

47 ಲಕ್ಷ ರೂ. ಕೊಟ್ಟರೆ ಜೀವಂತ ಸಮಾಧಿ ಮಾಡ್ತಾರಂತೆ​! ಈ ಆಫರ್ ಹಿಂದಿನ ಕಾರಣ ಕೇಳಿದ್ರೆ ನೀವು ಬೆರಗಾಗ್ತೀರಾ​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − 7 =
Remember me
