ಬೆಂಗಳೂರು: ಕರೊನಾ ಭೀತಿ ನಡುವೆಯೂ ನಗರದಲ್ಲಿ ಪೊಲೀಸರು ಕೈಗೊಂಡಿರುವ ಕಾರ್ಯಕ್ಕೆ ಜನರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.
ದಿಗ್ವಿಜಯ 247 ನ್ಯೂಸ್ ಹಾಗೂ ವಿಜಯವಾಣಿ ಶನಿವಾರ ಆಯೋಜಿಸಿದ್ದ ಫೋನ್-ಇನ್ ಕಾರ್ಯಕ್ರಮದಲ್ಲಿ ಪೂರ್ವ ವಿಭಾಗದ ಡಿಸಿಪಿ ಡಾ.ಎಸ್.ಡಿ. ಶರಣಪ್ಪ, ಈಶಾನ್ಯ ವಿಭಾಗದ ಡಿಸಿಪಿ ಡಾ.ಭೀಮಾ ಶಂಕರ್ ಎಸ್.ಗುಳೇದ್, ಪಶ್ಚಿಮ ವಿಭಾಗದ ಡಿಸಿಪಿ ರಮೇಶ್ ಬಾನೋತ್ ಸಾರ್ವಜನಿಕರ ಪ್ರಶ್ನೆಗೆ ಉತ್ತರಿಸಿದರು.
ಕರೆ ಮಾಡಿದ ಹಲವರು ಕರೊನಾ ಸಂದರ್ಭದಲ್ಲಿ ಸಾರ್ವಜನಿಕರ ಹಿತಕ್ಕಾಗಿ ಹಗಲಿರುಳೆನ್ನದೆ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸರ ಕಾರ್ಯವೈಖರಿಗೆ ಪ್ರಶಂಸೆ ವ್ಯಕ್ತಪಡಿಸಿದರೆ, ಇನ್ನು ಕೆಲವರು ಲಾಕ್​ಡೌನ್ ಸಂದರ್ಭದಲ್ಲಿ ತಮಗಿದ್ದ ಗೊಂದಲ ಬಗೆಹರಿಸಿಕೊಂಡರು. ಏ.20ರ ಬಳಿಕ ಲಾಕ್​ಡೌನ್ ಸಡಿಲಗೊಳ್ಳುವ ಸಾಧ್ಯತೆ ಯಿದೆ. ಕರೊನಾ ವಿರುದ್ಧ ಎಲ್ಲರೂ ಹೋರಾಡಬೇಕಾದ ಅಗತ್ಯವಿದೆ. ತುರ್ತಾಗಿ ಆಸ್ಪತ್ರೆಗೆ ಹೋಗುವವರಿಗೆ ಆಯಾ ಠಾಣೆಗಳಲ್ಲಿ 12 ಗಂಟೆ ಅವಧಿಗೆ ಪಾಸ್​ಗಳನ್ನು ನೀಡಲಾಗುತ್ತದೆ. ಇದನ್ನು ಸದ್ಬಳಕೆ ಮಾಡಿಕೊಳ್ಳಬಹುದು ಎಂದು ಡಿಸಿಪಿಗಳು ಜನರಿಗೆ ತಿಳಿಸಿದರು.
ಪ್ರಶ್ನೋತ್ತರ
ನಾವು ಇಂದಿರಾನಗರದ ಪಿ.ಜಿ.ಯಲ್ಲಿ ವಾಸಿಸುತ್ತಿದ್ದೇವೆ. ಮನೆ ಮಾಲೀಕರು ಬಾಡಿಗೆ ಕೊಡುವಂತೆ ಒತ್ತಾಯಿಸುತ್ತಿದ್ದಾರೆ. ನಾವು ಏನು ಮಾಡಬೇಕು ?
| ಸೌಮ್ಯಾ ಇಂದಿರಾನಗರ
ಇಂದಿರಾನಗರ ಠಾಣೆಗೆ ತೆರಳಿ ಈ ಬಗ್ಗೆ ದೂರು ನೀಡಿದರೆ ಪೊಲೀಸರು ತನಿಖೆ ನಡೆಸಿ, ಮುಂದಿನ ಕ್ರಮ ಕೈಗೊಳ್ಳುತ್ತಾರೆ.
ವಿದ್ಯಾರಣ್ಯಪುರದಲ್ಲಿರುವ ಮಗನ ಮನೆಗೆ ಬಂದಿದ್ದೇನೆ. ಊರಿನಲ್ಲಿ ನನಗೆ ಹೊಲ, ಗದ್ದೆ ಇದೆ. ಈಗ ಮನೆಗೆ ಹೋಗದಿದ್ದರೆ ಬೆಳೆ ಹಾನಿಯಾಗುತ್ತದೆ. ಊರಿಗೆ ಹೋಗಲು ಅವಕಾಶ ನೀಡುವಿರಾ?
| ಉಮಾಶಂಕರ್ ವಿದ್ಯಾರಣ್ಯಪುರ
ಏ.20ರ ವರೆಗೂ ಊರಿಗೆ ಹೋಗಲು ಅವಕಾಶವಿಲ್ಲ. ನಿಮ್ಮ ನೆರೆಹೊರೆಯವರು, ಸ್ನೇಹಿತರಿಗೆ ಸ್ವಲ್ಪ ಸಮಯ ಹೊಲ ನೋಡಿಕೊಳ್ಳುವಂತೆ ಮನವಿ ಮಾಡಿಕೊಳ್ಳಬಹುದು.
ಕೇಬಲ್ ಆಪರೇಟರ್​ಗಳ ವಾಹನಗಳನ್ನು ವಶಕ್ಕೆ ಪಡೆಯುತ್ತಿರುವುದರಿಂದ ಅವರಿಗೆ ಸೂಕ್ತ ರೀತಿಯಲ್ಲಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ.
| ಸುಬ್ರಹ್ಮಣ್ಯ ಆಗ್ನೇಯ ವಿಭಾಗ
ಗೂಡ್ಸ್ ಹಾಗೂ ಇನ್ನೀತರ ಅಗತ್ಯ ಸೇವೆಗೆ ಕೆಎಸ್​ಪಿ ಕ್ಲೀಯರ್ ಪಾಸ್ ಇದೆ. ಇದನ್ನು ಬಳಿಸಿಕೊಳ್ಳಬಹುದು.
ನನ್ನ ಬೈಕ್ ಪಡೆಯಲು ಸ್ನೇಹಿತನ ಬೈಕ್​ನಲ್ಲಿ ಠಾಣೆಗೆ ತೆರಳಿದಾಗ ಆ ಬೈಕ್​ನ್ನೂ ವಶಕ್ಕೆ ಪಡೆದಿದ್ದಾರೆ. ಬೈಕ್ ಹಿಂಪಡೆದುಕೊಳ್ಳುವುದು ಹೇಗೆ?
| ಹರೀಶ್ ನಾಗರಬಾವಿ
ಲಾಕ್​ಡೌನ್ ಮುಕ್ತಾಯಗೊಳ್ಳುವವರೆಗೂ ಅನಗತ್ಯವಾಗಿ ರಸ್ತೆಯಲ್ಲಿ ತಿರುಗಾಡಿದರೆ ಅಂತಹ ವಾಹನಗಳನ್ನು ವಶಕ್ಕೆ ಪಡೆಯಲಾಗುತ್ತದೆ. ಲಾಕ್​ಡೌನ್ ಮುಗಿದ ಬಳಿಕ ವಾಹನ ಹಿಂತಿರುಗಿಸಲಾಗುವುದು.
2014ರ ಮೊದಲು ಕರೊನಾ ಕಾಡಿದ್ದಿದ್ದರೆ ಏನಾಗಬಹುದಿತ್ತು?


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five + 3 =
Remember me
