ಕಳಾಹೀನವಾಗಿದ್ದ ವಸತಿ ಇಲಾಖೆಗೆ ಈಗ ಹುರುಪು ಬಂದಿದೆ. ಅತಿ ಕಡಿಮೆ ಅವಧಿಯಲ್ಲಿ ದೊಡ್ಡ ಗುರಿಯೊಂದನ್ನು ಸಾಧಿಸುವ ಛಲದೊಂದಿಗೆ ಇಲಾಖೆ ಹೊರಟಂತಿದೆ. ಅನುಭವಿ ವಿ.ಸೋಮಣ್ಣ ಎರಡನೇ ಬಾರಿಗೆ ವಸತಿ ಸಚಿವರಾಗಿ ಜವಾಬ್ದಾರಿ ತೆಗೆದುಕೊಂಡ ನಾಲ್ಕೇ ತಿಂಗಳಲ್ಲಿ ಇಲಾಖೆಯಲ್ಲಿ ಸಂಚಲನ ಸೃಷ್ಟಿಯಾಗಿದೆ. ಈ ಹಿಂದೆ ನಡೆದ ಅಕ್ರಮಗಳನ್ನು ಕೊಡವಿ, ಏರುಪೇರುಗಳನ್ನು ಸರಿಪಡಿಸಿ ವ್ಯವಸ್ಥೆಯನ್ನು ಹಳಿಮೇಲೆ ತರಲು 69ರ ಹರೆಯದ ಸೋಮಣ್ಣ, 28ರ ಯುವಕರಂತೆ ಕೆಲಸ ಮಾಡುತ್ತಾ ಚುರುಕುಮುಟ್ಟಿಸಿದ್ದಾರೆ. ಇಲಾಖೆಯಲ್ಲಿ ಆಗಿರುವ, ಆಗಬೇಕಿರುವ ಕೆಲಸಗಳ ಬಗ್ಗೆ ‘ವಿಜಯವಾಣಿ ಫೋನ್- ಇನ್’ನಲ್ಲಿ ಸಚಿವರು ಮನಬಿಚ್ಚಿ ಮಾತನಾಡಿದ್ದಾರೆ.
ಧನಸಹಾಯದ ಭರವಸೆ
ದಾವಣಗೆರೆಯ ಶಾಂತಮ್ಮ ಎಂಬುವವರು, ಕಳೆದ ಕೆಲ ತಿಂಗಳ ಹಿಂದೆ ಪತಿ ತೀರಿಕೊಂಡಿದ್ದು, ಜೀವನ ಸಾಗಿಸುವುದೇ ಕಷ್ಟ ಎನ್ನುವಂತಾಗಿದೆ. ಇಂತಹ ಸಂದರ್ಭದಲ್ಲಿ ಮನೆ ಬಾಡಿಗೆ ಪಾವತಿಸಲಾಗುತ್ತಿಲ್ಲ ಎಂದು ಫೋನ್ ಇನ್ ಕಾರ್ಯಕ್ರಮದಲ್ಲಿ ಸಚಿವರ ಬಳಿ ಅಳಲು ತೋಡಿಕೊಂಡರು. ಅದರಿಂದ ಭಾವುಕರಾದ ಸಚಿವ ವಿ.ಸೋಮಣ್ಣ, ಸ್ಥಳೀಯ ಶಾಸಕರನ್ನು ಭೇಟಿ ಮಾಡಿ ಅರ್ಜಿ ಸಲ್ಲಿಸಲು ಸೂಚಿಸಿದರು. ಜತೆಗೆ, ಸಂಬಂಧಿಕರು ಯಾರಾದರು ಇದ್ದರೆ ಬೆಂಗಳೂರಿನ ತಮ್ಮ ಮನೆಯಲ್ಲಿ ಭೇಟಿಯಾಗಲು ಸೂಚಿಸಿ, ಧನ ಸಹಾಯ ಮಾಡುವುದಾಗಿ ಭರವಸೆ ನೀಡಿದರು.
ರಾಜೀವ್ ಗಾಂಧಿ ವಸತಿ ನಿಗಮದಿಂದ ಹುಣಸಮಾರನಹಳ್ಳಿಯಲ್ಲಿ ನಿರ್ವಣಗೊಳ್ಳಬೇಕಿದ್ದ ಮನೆಗಳ ಕಾಮಗಾರಿ ಸ್ಥಗಿತಗೊಂಡಿದೆ. ಅದಕ್ಕೆ ಮರುಚಾಲನೆ ನೀಡಿ.| ತುಳಸಿದಾಸ್ ಶಾನಭಾಗ್ಬೆಂಗಳೂರುಈಗಾಗಲೆ ವರದಿ ಪರಿಶೀಲಿಸಿದ್ದೇನೆ. ಇನ್ನು 10 ದಿನದಲ್ಲಿ ಸ್ಥಳಕ್ಕೆ ತೆರಳಿ ಅಲ್ಲಿನ ಸ್ಥಿತಿಯನ್ನು ನೋಡುತ್ತೇನೆ. ಶೀಘ್ರದಲ್ಲಿ ಮನೆ ನಿರ್ಮಾಣ ಸೇರಿ ಇನ್ನಿತರ ಕಾಮಗಾರಿ ಆರಂಭಿಸಲಾಗುವುದು.
ಮನೆ ನಿರ್ಮಾಣಕ್ಕೆ ಕೇಂದ್ರ ಸರ್ಕಾರದಿಂದ ಅನುದಾನ ಸಿಗುತ್ತಿದೆ. ಆದರೆ, ರಾಜ್ಯ ಸರ್ಕಾರದಿಂದ ಹಣ ಬಿಡುಗಡೆಯಾಗಿಲ್ಲ.| ಡಿ.ಎಸ್.ರಾಜುಬೆಳ್ತಂಗಡಿಕೇಂದ್ರ ಸರ್ಕಾರ ಕೊಟ್ಟ ಮಾತಿನಂತೆ ವಸತಿ ಯೋಜನೆಗಳಿಗೆ ಬಾಕಿಯಿದ್ದ ಹಣವನ್ನು ನೀಡಿದೆ. ರಾಜ್ಯ ಸರ್ಕಾರದಿಂದ ಹಳ್ಳಿಗಳಲ್ಲಿ ನಿರ್ವಣಗೊಳ್ಳುವ ವಸತಿ ಯೋಜನೆ ಮನೆಗಳಿಗೆ ಹಣ ಬಿಡುಗಡೆ ಮಾಡುವ ಕುರಿತಂತೆ ಕೆಲವೊಂದು ಪರಿಶೀಲನೆ ಮಾಡಲಾಗುತ್ತಿದೆ. ಆನಂತರ ಹಣ ಬಿಡುಗಡೆ ಮಾಡಲಾಗುವುದು.
ಆಶ್ರಯ ಯೋಜನೆಯಡಿ ನಮಗೆ ಮನೆ ಮಂಜೂರಾಗಿದ್ದು, ಅದನ್ನೀಗ ಬೇರೆಯವರು ಆಕ್ರಮಿಸಿದ್ದಾರೆ. ಈ ಬಗ್ಗೆ ಅಧಿಕಾರಿಗಳನ್ನು ಕೇಳಿದರೆ ಸರಿಯಾಗಿ ಪ್ರತಿಕ್ರಿಯಿಸುತ್ತಿಲ್ಲ.| ಲಕ್ಷ್ಮಣಕೊಪ್ಪಳಈ ಬಗ್ಗೆ ಪರಿಶೀಲನೆಗೆ ಸ್ಥಳೀಯ ಅಧಿಕಾರಿಗಳಿಗೆ ಸೂಚಿಸುತ್ತೇನೆ. ಅಕ್ರಮ ಕಬಳಿಕೆ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು.
ಕಡಿಮೆ ಆದಾಯದಲ್ಲಿ ಜೀವನ ಸಾಗಿಸುತ್ತಿರುವ ಅರ್ಚರಿಗೆ ಈವರೆಗೆ ವಸತಿ ಇಲಾಖೆಯಿಂದ ಯಾವುದೇ ಯೋಜನೆ ರೂಪಿಸಿಲ್ಲ. ಅವರಿಗೆ ಮನೆ ನೀಡುವುದಕ್ಕೆ ಕ್ರಮ ಕೈಗೊಳ್ಳಿ.| ಎಂ.ಜಿ.ಸಿದ್ದಲಿಂಗಯ್ಯಹೊನ್ನಾಳಿಆರ್ಥಿಕ ದುರ್ಬಲವಾಗಿರುವ ಅರ್ಚಕರು ವಸತಿ ಯೋಜನೆಗಳಿಗೆ ಅರ್ಜಿ ಸಲ್ಲಿಸಿದರೆ, ಅದನ್ನು ವಿಶೇಷವಾಗಿ ಪರಿಗಣಿಸಲಾಗುವುದು.
ಘಟಪ್ರಭಾ ನದಿ ಪ್ರವಾಹದಿಂದಾಗಿ ಇಡೀ ಮನೆ ಬಿದ್ದು ಹೋಗಿದೆ. ಅಧಿಕಾರಿಗಳು ಅದನ್ನು ಸಿ ಕೆಟಗರಿಗೆ ಸೇರಿಸಿ ಕಡಿಮೆ ಅನುದಾನ ನೀಡಲು ಮುಂದಾಗಿದ್ದಾರೆ.| ಮಂಡಪ್ಪ ಅರಸಪ್ಪಮೂಡಲಗಿಮನೆ ಪೂರ್ತಿ ಬಿದ್ದಿದ್ದರೆ, ಎ ಕೆಟಗರಿಗೆ ಸೇರಿಸುವಂತೆ ಸೂಚಿಸಲಾಗುವುದು.
ಹುಬ್ಬಳ್ಳಿ ವಿಮಾನ ನಿಲ್ದಾಣ ಅಭಿವೃದ್ಧಿಗಾಗಿ 118 ಮನೆಗಳನ್ನು ಸ್ವಾಧೀನಕ್ಕೆ ಪಡೆಯಲಾಗಿತ್ತು. ಅದಕ್ಕೆ ಬದಲಾಗಿ ಪರ್ಯಾಯ ಮನೆ ನೀಡುವುದಾಗಿ ಹೇಳಿದ್ದರು. ಈವರೆಗೆ ಪರಿಹಾರ ದೊರೆತಿಲ್ಲ.| ವೆಂಕಟೇಶ್ಹುಬ್ಬಳ್ಳಿಈ ಸಂಬಂಧ ಪರ್ಯಾಯ ಮನೆ ನಿರ್ವಿುಸಿ ಕೊಡಲು 18 ಎಕರೆ ಜಾಗ ಗುರುತಿಸಲಾಗಿದೆ. ಬಾಕಿ ಪ್ರಕ್ರಿಯೆ ಮುಗಿಸಿ, ಮನೆ ನಿರ್ಮಾಣ ಆರಂಭಿಸಲಾಗುವುದು.
ಲೋಕೋಪಯೋಗಿ ಇಲಾಖೆ ಯೋಜನೆಗಾಗಿ 5 ವರ್ಷದ ಹಿಂದೆ ಮನೆಯನ್ನು ಸ್ವಾಧೀನಕ್ಕೆ ತೆಗೆದುಕೊಂಡರು. ಅದಕ್ಕೆ ಪರ್ಯಾಯವಾಗಿ ಮನೆ ನೀಡುತ್ತೇವೆಂದು ಈವರೆಗೆ ಕೊಟ್ಟಿಲ್ಲ.| ವಿಜಯಕುಮಾರಿಮಳವಳ್ಳಿಈ ಕುರಿತು ಸ್ಥಳೀಯ ಶಾಸಕರು, ಅಧಿಕಾರಿಗಳ ಜತೆ ರ್ಚಚಿಸುವೆ. ಪರಿಹಾರ ಕೊಡಿಸಲು ಕ್ರಮವಹಿಸುವೆ.
ಭಾಲ್ಕಿಯಲ್ಲಿ ವಸತಿ ಇಲಾಖೆಯಿಂದ ನಿರ್ವಿುಸಲಾದ 9,700 ಮನೆಗಳಲ್ಲಿ ಬಹುತೇಕ ಅನರ್ಹರಿಗೆ ನೀಡಲಾಗಿದೆ. ಇದರಲ್ಲಿ 91 ಕೊಟಿ ರೂ. ಹಗರಣ ನಡೆದಿದ್ದು, ಈ ಕುರಿತ ತನಿಖೆ ಏನಾಯಿತು?| ಕನಕದಾಸಭಾಲ್ಕಿಹಗರಣ ಸಂಬಂಧ ತನಿಖೆ ಪ್ರಗತಿಯಲ್ಲಿದೆ. ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲಾಗುವುದು.
ಕಲಬುರಗಿಯಲ್ಲಿನ ವಸತಿ ಯೋಜನೆಯಲ್ಲಿ ಮನೆ ಪಡೆಯುವುದಕ್ಕಾಗಿ ಈಗಾಗಲೆ ಅರ್ಜಿ ಸಲ್ಲಿಸಿದ್ದೇನೆ. ಆದರೆ, ಯಾವುದೇ ಪ್ರಯೋಜನವಾಗಿಲ್ಲ.|ರಾಧಾಕಲಬುರಗಿಸ್ಥಳೀಯ ಶಾಸಕರಲ್ಲಿ ಮತ್ತೊಮ್ಮೆ ಅರ್ಜಿ ಕೊಡಿ. ಅದನ್ನು ಪರಿಶೀಲಿಸಲಾಗುವುದು.
ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದೇನೆ. ತಿಂಗಳ ಆದಾಯ ಮನೆ ಬಾಡಿಗೆ ಕಟ್ಟಲೇ ವ್ಯಯವಾಗುತ್ತಿದೆ. ವಸತಿ ಯೋಜನೆಯಲ್ಲಿ ಮನೆ ನೀಡಿ.| ಚಂದ್ರುಹುಬ್ಬಳ್ಳಿಹುಬ್ಬಳ್ಳಿಯಲ್ಲಿ ಈಗಾಗಲೆ 3 ಸಾವಿರ ಮನೆ ನಿರ್ಮಾಣ ಕಾರ್ಯ ನಡೆಯುತ್ತಿದೆ. ಅದರ ಜತೆಗೆ ಹೊಸದಾಗಿ 3,600 ಮನೆ ನಿರ್ವಣಕ್ಕೆ ಶೀಘ್ರ ಟೆಂಡರ್ ಕರೆಯಲಾಗುವುದು. ನೀವು ಅರ್ಹರಾಗಿದ್ದರೆ, ಮನೆ ಕೊಡಿಸಲಾಗುತ್ತದೆ.
ಆರ್ಥಿಕವಾಗಿ ಹಿಂದುಳಿದಿದ್ದು, ಬಾಡಿಗೆ ಮನೆಯಲ್ಲಿ ವಾಸವಿದ್ದೇವೆ. ವಸತಿ ಇಲಾಖೆ ನೀಡುವ ಮನೆಯನ್ನು ಕೊಡಿಸಿ.|ವಿದ್ಯಾಮೈಸೂರುಮೈಸೂರು ಜಿಲ್ಲಾ ವ್ಯಾಪ್ತಿಯಲ್ಲಿ ಇಲಾಖೆಯಿಂದ 3 ಸಾವಿರ ಮನೆ ನಿರ್ಮಾಣ ಮಾಡಲಾಗಿದೆ, ಅದರ ಜತೆಗೆ ಇನ್ನೂ 4,500 ಮನೆ ನಿರ್ವಣಕ್ಕೆ ಕ್ರಿಯಾಯೋಜನೆ ರೂಪಿಸಲಾಗಿದೆ. ಶಾಸಕರಲ್ಲಿ ಅರ್ಜಿ ಕೊಡಿ. ಅದನ್ನು ಪರಿಗಣಿಸಿ ಮನೆ ನೀಡಲು ಕ್ರಮ ಕೈಗೊಳ್ಳಲಾಗುವುದು.
ಈ ಹಿಂದೆ ಕುಡಚಿಗೆ ಬಂದಾಗ ಮನೆ ನೀಡುತ್ತೇನೆ ಎಂದು ಹೇಳಿದ್ದೀರಿ. ಆದರೆ, ಹೇಗೆ ಪಡೆಯಬೇಕೆಂಬುದು ತಿಳಿಯುತ್ತಿಲ್ಲ?|ಶಬ್ಬಿರ್ಕುಡಚಿನಿಮಗೆ ಮನೆ ನೀಡುವ ಕುರಿತು ಸ್ಥಳೀಯ ಶಾಸಕ ರಾಜೀವ್​ರೊಂದಿಗೆ ಈಗಾಗಲೆ ಮಾತನಾಡಿದ್ದೇನೆ. ಅವರನ್ನು ಭೇಟಿಯಾಗಿ ಅರ್ಜಿ ಕೊಡಿ.
ಪ್ರವಾಹದಿಂದಾಗಿ ಮನೆ ಬಿದ್ದ ನಂತರ ಮನೆ ಮರುನಿರ್ವಣಕ್ಕೆ ಅನುದಾನ ನೀಡುತ್ತೇವೆಂದರು. ಮೊದಲ ಕಂತಿನ 1 ಲಕ್ಷ ರೂ. ನೀಡಲಾಗಿದೆ. ಉಳಿದ ಹಣ ಕೊಟ್ಟಿಲ್ಲ.|ಪಾಲಾಕ್ಷಪಿರಿಯಾಪಟ್ಟಣವಿಜಿಲ್ ಆಪ್​ನಲ್ಲಿ ಮನೆಯ ಚಿತ್ರ ಕಳುಹಿಸಿದ್ದರೆ, ಅದನ್ನು ಪರಿಶೀಲಿಸಲು ಅಧಿಕಾರಿಗಳಿಗೆ ಸೂಚಿಸುತ್ತೇನೆ. ಉಳಿದ ಹಣ ಶೀಘ್ರದಲ್ಲಿ ನೀಡಲು ಕ್ರಮ ಕೈಗೊಳ್ಳಲಾಗುವುದು.
ಲಾಕ್​ಡೌನ್​ನಿಂದಾಗಿ ಕೆಲಸವಿಲ್ಲದಂತಾಗಿದೆ. ಅದರಿಂದ ಮನೆ ಬಾಡಿಗೆ ಪಾವತಿಸಲಾಗುತ್ತಿಲ್ಲ. ಮನೆ ಖಾಲಿ ಮಾಡುವ ಪರಿಸ್ಥಿತಿ ಎದುರಾಗಿದೆ. ಇಲಾಖೆಯಿಂದ ಮನೆ ಕೊಡಿಸಿದರೆ ಜೀವನ ಸಾಗಿಸಬಹುದು.|ಕುಸುಮಾಗೋವಿಂದರಾಜನಗರಸ್ಥಳೀಯ ಕಾಪೋರೇಟರ್ ಉಮೇಶ್​ಶೆಟ್ಟಿ ಅವರನ್ನು ಭೇಟಿಯಾಗಿ ಅರ್ಜಿ ಕೊಡಿ. ವಸತಿ ಇಲಾಖೆ ಅಥವಾ ಬಿಬಿಎಂಪಿಯಿಂದ ಮನೆ ನಿರ್ವಣಕ್ಕೆ ಧನಸಹಾಯ ಮಾಡಿಸಲಾಗುವುದು.
ಬಿಎಸ್​ವೈ ನನ್ನ ಮನೆ ಯೋಜನೆ ಅಡಿಯಲ್ಲಿ ಮನೆ ನಿರ್ಮಾಣ ಕಾರ್ಯ ಪ್ರಗತಿ ಕಂಡಿಲ್ಲ.|ಮಹಲಿಂಗಪ್ಪವಿಜಯನಗರಹುಣಸಮಾರನಹಳ್ಳಿ, ತಾಳಗುಪ್ಪ ಸೇರಿ ಇನ್ನಿತರ ಕಡೆಗಳಲ್ಲಿ ಬಿಎಸ್​ವೈ ನನ್ನ ಮನೆ ಯೋಜನೆ ಶೀಘ್ರ ಆರಂಭಕ್ಕೆ ಎಲ್ಲ ರೀತಿ ಕ್ರಮ ಕೈಗೊಳ್ಳಲಾಗುತ್ತಿದೆ. ಆ ಕುರಿತು ಅಗತ್ಯವಿರುವ ಸಿದ್ಧತೆ ಮಾಡಿಕೊಳ್ಳಲಾಗಿದೆ.
ವಾಜಪೇಯಿ ವಸತಿ ಯೋಜನೆ ಅಡಿಯಲ್ಲಿ ಮನೆ ನೀಡುವುದಾಗಿ 2008ರಲ್ಲಿ ಅರ್ಜಿ ಪಡೆಯಲಾಗಿತ್ತು. ಆನಂತರ ಯಾವುದೇ ಪ್ರಕ್ರಿಯೆ ನಡೆದಿಲ್ಲ.|ಕೃಷ್ಣಾಗಂಗಾವತಿಗಂಗಾವತಿ ಸೇರಿ ಬಹುತೇಕ ತಾಲೂಕು ಕೇಂದ್ರಗಳಲ್ಲಿ ಮನೆ ನಿರ್ವಣಕ್ಕೆ ಯೋಜನೆ ರೂಪಿಸಲಾಗುತ್ತಿದೆ. ಮನೆ ನಿರ್ಮಾಣ ಪೂರ್ಣಗೊಂಡ ನಂತರ ಮನೆ ನೀಡಲಾಗುವುದು.
ಸ್ವಂತ ನಿವೇಶನವಿದೆ. ಮನೆ ನಿರ್ವಣಕ್ಕೆ ಇಲಾಖೆಯಿಂದ ಧನಸಹಾಯ ನೀಡುವುದಕ್ಕಾಗಿ 15 ವರ್ಷಗಳ ಹಿಂದೆಯೇ ಅರ್ಜಿ ಸಲ್ಲಿಸಿದ್ದೇನೆ.|ಆನಂದ ಬಡಿಗೇರ್ಕೊಪ್ಪಳಮತ್ತೊಮ್ಮೆ ಅರ್ಜಿ ಸಲ್ಲಿಸಿ. ಅರ್ಹರಾಗಿದ್ದರೆ ನೆರವು ನೀಡಲಾಗುವುದು.
ಪ್ರವಾಹದಿಂದ ಮನೆ ಬಿದ್ದು ಹೋಗಿದ್ದು, ಈಗ ಮನೆ ನಿರ್ಮಾಣ ಮಾಡಿಕೊಳ್ಳಲಾಗಿದೆ. ಆದರೆ, ಇಲಾಖೆಯಿಂದ ಪರಿಹಾರ ದೊರೆತಿಲ್ಲ.| ರಮೇಶ್​ಬಾಬುಶಿರಾರಾಜ್ಯದಲ್ಲಿನ 1.27 ಲಕ್ಷ ಮನೆಗಳಿಗೆ ನೀಡಬೇಕಾದ ಸಹಾಯಧನವನ್ನು ಇನ್ನು 3 ತಿಂಗಳಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ನಿಮ್ಮ ಹೆಸರು ಪಟ್ಟಿಯಲ್ಲಿದ್ದರೆ, ಹಣ ದೊರೆಯಲಿದೆ.
ಖಾಸಗಿ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದು, ಮಾಸಿಕ 4 ಸಾವಿರ ವೇತನ ಬರುತ್ತಿದೆ. ಅದು ಮನೆ ಬಾಡಿಗೆ ಪಾವತಿಸಲೇ ವ್ಯಯವಾಗುತ್ತಿದೆ. ನಮ್ಮ ಬಳಿ ನಿವೇಶನವಿದೆ, ಮನೆ ನಿರ್ವಣಕ್ಕೆ ಇಲಾಖೆಯಿಂದ ಧನಸಹಾಯ ಮಾಡಿ.|ಸುಜಾತಾವಿಜಯಪುರಶಿಕ್ಷಕರಿಗೆ ನೆರವಾಗುವುದು ನಮ್ಮ ಕರ್ತವ್ಯ. ನಿಮ್ಮ ಸ್ಥಿತಿ ಪರಿಶೀಲಿಸಿ, ಇಲಾಖೆಯಿಂದ ಸಹಾಯಧನ ನೀಡಲು ಕ್ರಮ ಕೈಗೊಳ್ಳಲಾಗುವುದು.
ಕಳೆದ ವರ್ಷ ಪ್ರವಾಹದಲ್ಲಿ ಪ್ರವಾಹದಲ್ಲಿ ಮನೆ ಬಿದ್ದು ಹೋಗಿದೆ. ಅದರ ಮರು ನಿರ್ವಣಕ್ಕೆ ಈವರೆಗೆ ಕೇವಲ 5 ಸಾವಿರ ರೂ. ನೀಡಲಾಗಿದೆ.|ಶಿವರಾಜ್ಹಿರಿಯೂರುಮನೆ ನಿರ್ವಣಕ್ಕೆ ಮೊದಲ ಕಂತಾಗಿ 50ರಿಂದ 75 ಸಾವಿರ ರೂ. ನೀಡಲಾಗುತ್ತದೆ. ಆದರೆ, 5 ಸಾವಿರ ರೂ. ನೀಡಿರುವುದು ತಪ್ಪು.  ಈ ಬಗ್ಗೆ ಪರಿಶೀಲಿಸುತ್ತೇನೆ.
ಪೌರಕಾರ್ವಿುಕರಿಗೆ ಮನೆ ನಿರ್ಮಾಣ ಮಾಡಲು ರಾಜೀವ ಗಾಂಧಿ ವಸತಿ ನಿಗಮದಿಂದ ದಲಿತ ಸಂಘಟನೆಗಳಿಗೆ ಜಾಗ ನೀಡಲಾಗಿದೆ. ಇದು ಎಷ್ಟು ಸಮಂಜಸ.|ರಮೇಶ್ಬಸವೇಶ್ವರನಗರಸಂಘಟನೆಯೊಂದಕ್ಕೆ ಜಾಗ ನೀಡುವ ಯಾವುದೇ ಪ್ರಕ್ರಿಯೆಯೂ ಇಲ್ಲ. ನಿಮ್ಮಲ್ಲಿ ತಪು್ಪ ಮಾಹಿತಿಯಿದೆ. ಆದರೂ, ಈ ಬಗ್ಗೆ ಪರಿಶೀಲಿಸಲಾಗುವುದು.
ಪತಿ ಆಟೋ ಚಾಲಕರಾಗಿದ್ದು, ಆರ್ಥಿಕವಾಗಿ ಸಾಕಷ್ಟು ಹಿಂದುಳಿದಿದ್ದೇವೆ. ಇಲಾಖೆಯಿಂದ ಮನೆ ಕೊಡಿಸಿ.|ತೇಜಸ್ವಿನಿಮೂಡಲಪಾಳ್ಯರಾಜೀವಗಾಂಧಿ ವಸತಿ ನಿಗಮದಿಂದ 1 ಲಕ್ಷ ಮನೆ ನಿರ್ವಿುಸಲಾಗುತ್ತಿದ್ದು, ಅರ್ಹರಾಗಿದ್ದರೆ ಮನೆ ಕೊಡಿಸಲಾಗುವುದು.
ಕ್ಷೌರಿಕರಾಗಿದ್ದು ನಮಗೆ ಯಾವುದೇ ಹೆಚ್ಚಿನ ಆದಾಯವಿಲ್ಲ. ಹೀಗಾಗಿ ಸ್ವಂತ ಮನೆ ಮಾಡಿಕೊಳ್ಳಲಾಗುತ್ತಿಲ್ಲ. ಹೀಗಾಗಿ ಇಲಾಖೆಯಿಂದ ಮನೆ ಕೊಡಿಸಿ.|ಶ್ರೀಶೈಲ ಹಡಪದವಿಜಯಪುರಈ ಕುರಿತು ನೇರವಾಗಿ ನನಗೆ ಅರ್ಜಿ ಕಳುಹಿಸಿ. ಅಧಿಕಾರಿಗಳೊಂದಿಗೆ ರ್ಚಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು.
ಪ್ರವಾಹದಿಂದ ಮನೆ ಬಿದ್ದಿದ್ದು, ಇಲಾಖೆ ನೆರವಿನಿಂದ ಮನೆ ಮರುನಿರ್ವಿುಸಲಾಗಿದೆ. ಆದರೆ, ಈವರೆಗೆ 2 ಕಂತಿನ ಸಹಾಯಧನ ಬಂದಿದೆ. 3ನೇ ಹಂತಿನ ಅನುದಾನ ಬರಬೇಕಿದೆ.| ವಿನೋದಗೌಡ ಪಾಟೀಲ್ಭೈಲಹೊಂಗಲಶೀಘ್ರದಲ್ಲಿ 3ನೇ ಕಂತಿನ ಹಣ ಬಿಡುಗಡೆ ಮಾಡಲಾಗುವುದು.
ಲಾಕ್​ಡೌನ್ ಸ್ಥಿತಿಯಲ್ಲಿ ಕ್ಷೌರಿಕರಿಗೆ ನೆರವಾಗಲು ಸರ್ಕಾರ ಘೋಷಿಸಿರುವ 5 ಸಾವಿರ ರೂ. ಸಹಾಯಧನ ಪಡೆಯುವುದು ಹೇಗೆ?|ಕೃಷ್ಣಹೊಸಪೇಟೆತಹಶೀಲ್ದಾರ್ ಕಚೇರಿಗೆ ಹೋಗಿ ಅರ್ಜಿ ಸಲ್ಲಿಸಬೇಕು. ಅಲ್ಲಿ ಕೇಳಲಾಗುವ ದಾಖಲೆಗಳನ್ನು ನೀಡಿ ಅರ್ಜಿ ಸಲ್ಲಿಸಿದರೆ, ಹಣ ನಿಮ್ಮ ಖಾತೆಗೆ ಪಾವತಿಯಾಗಲಿದೆ.
ಮೆಕ್ಯಾನಿಕಲ್ ಇಂಜಿನಿಯರಿಂಗ್ ವ್ಯಾಸಂಗ ಮಾಡಿದ್ದೇನೆ. ಎಲ್ಲಿಯೂ ಉದ್ಯೋಗ ದೊರಕುತ್ತಿಲ್ಲ.|ಸುಶಾನ್ಬಸವೇಶ್ವರನಗರಇಲಾಖೆ ವ್ಯಾಪ್ತಿಯ ನಿಗಮ, ಮಂಡಳಿಯಲ್ಲಿ ಅವಕಾಶವಿದ್ದರೆ ಕೆಲಸ ನೀಡಲಾಗುವುದು. ಈ ಕುರಿತು ನನ್ನನ್ನು ಭೇಟಿ ಮಾಡಿ ಅರ್ಜಿ ಕೊಡಿ.
ಕರ್ನಾಟಕ ವಸತಿ ನಿಗಮದಿಂದ ಮನೆ ನೀಡುತ್ತೇವೆಂದು ನಕಲಿ ದಾಖಲೆ ಸೃಷ್ಟಿಸಿ ಹಣ ಪಡೆದಿದ್ದರು. ಆದರೀಗ, ಹಣವೂ ಇಲ್ಲ, ಮನೆಯನ್ನು ಕೊಟ್ಟಿಲ್ಲ.| ಶಿವಾನಂದ ವಾಲೀಕರ್ಸೇಡಂಕೆಲ ಅಧಿಕಾರಿಗಳು ಈ ರೀತಿಯ ಅಕ್ರಮ ಎಸಗಿರುವುದು ಗಮನಕ್ಕೆ ಬಂದಿದೆ. ಈ ಕುರಿತು ತನಿಖೆ ನಡೆಸಲಾಗುವುದು.
ಚೀನಾ ರಾಷ್ಟ್ರಗೀತೆ ಅಮಾನ್ಯ ​: ಮಸೂದೆ ಅಂಗೀಕರಿಸಿದ ಹಾಂಕಾಂಗ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 + 17 =
Remember me
