ಬೆಂಗಳೂರು: ಪಡಿತರ ವಿತರಣೆ, ಪಡಿತರ ಚೀಟಿ ಯಾವುದೇ ಸಮಸ್ಯೆ ಇರಲಿ ಗಮನಕ್ಕೆ ತಂದರೆ ಕೂಡಲೇ ಇತ್ಯರ್ಥಗೊಳಿಸುವುದಾಗಿ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಗೋಪಾಲಯ್ಯ ಅವರು ಶುಕ್ರವಾರ ರಾಜ್ಯದ ಜನತೆಗೆ ಭರವಸೆ ನೀಡಿದ್ದಾರೆ.
ಇದನ್ನೂ ಓದಿ:ಐಸಿಎಸ್​ಇ ಮತ್ತು ಐಎಸ್​ಸಿ ಪರೀಕ್ಷೆಗಳ ವೇಳಾಪಟ್ಟಿ ಪ್ರಕಟ
ಅವರು ವಿಜಯವಾಣಿ ಫೋನ್ ಇನ್ ಕಾರ್ಯಕ್ರಮದಲ್ಲಿ ಭಾಗಿಯಾಗಿ ಓದುಗರ ಕರೆಗೆ ಸ್ಪಂದಿಸುತ್ತ ಮಾತನಾಡಿದರು. ರಾಜ್ಯದ ನಾನಾ ಭಾಗಗಳಿಂದ ಓದುಗರು ಕರೆಮಾಡುತ್ತಿದ್ದು ಬಹುತೇಕರು ಪಡಿತರ ಚೀಟಿ ಮತ್ತು ಪಡಿತರ ವ್ಯವಸ್ಥೆಯ ಲೋಪದೋಷಗಳ ಬಗ್ಗೆ ಸಚಿವರ ಗಮನ ಸೆಳೆದರು.
ಇದನ್ನೂ ಓದಿ:VIDEO| ಕೆನಡಾ ಮೂಲದ ಕನ್ನಡಿಗನಿಂದ ಕರೊನಾಗೆ ಔಷಧಿ: ವಿಶ್ವದ ಗಮನ ಸೆಳೆದ ಸಂಶೋಧನೆ!
ದೊಡ್ಡಬಳ್ಳಾಪುರದ ಚಂದ್ರಶೇಖರ್ ಎಂಬುವವರು ಕರೆ ಮಾಡಿ, ಎರಡು ವರ್ಷಗಳ ಹಿಂದೆ ಪಡಿತರ ಚೀಟಿಗೆ ಆನ್​ಲೈನ್ ಮೂಲಕ ಅರ್ಜಿ ಸಲ್ಲಿಸಿದ್ದರೂ ಇದುವರೆಗೂ ಪಡಿತರ ಚೀಟಿ ಸಿಕ್ಕಿಲ್ಲ ಎಂದು ಅಳಲು ತೋಡಿಕೊಂಡರು. ಇದಕ್ಕೆ ಸ್ಪಂದಿಸಿದ ಸಚಿವರು ಕೂಡಲೇ ಅವರ ಫೋನ್ ನಂಬರ್ ತೆಗೆದುಕೊಂಡು ಅಧಿಕಾರಿಗಳಿಗೆ ನೀಡಿ ಸಮಸ್ಯೆ ಬಗೆ ಹರಿಸುವಂತೆ ಸೂಚಿಸಿದರು. ಅಲ್ಲದೆ, ಸರ್ಕಾರ ಘೋಷಿಸಿದಂತೆ ಮುಂಗಡವಾಗಿಯೇ ಚಂದ್ರಶೇಖರ್ ಅವರಿಗೆ ಸಿಗಬೇಕಾಗಿರುವ ಪಡಿತರ ಎಷ್ಟೆಂದು ನೋಡಿ ವಿತರಿಸಲು ಕ್ರಮ ತೆಗೆದುಕೊಳ್ಳಲಾಗುವುದು. ಪಡಿತರ ಚೀಟಿ ಒದಗಿಸುವುದಕ್ಕೂ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸಚಿವ ಗೋಪಾಲಯ್ಯ ಅವರು ಭರವಸೆ ನೀಡಿದರು.
https://www.facebook.com/VVani4U/videos/276494543536436/
ಮಾರುಕಟ್ಟೆ ಇಲ್ಲದೆ ಬೆಳೆದ ಕೋಸು ನಾಶಪಡಿಸಿ ಕಣ್ಣೀರಿಟ್ಟ ರೈತ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:17 − seventeen =
Remember me
