ಬೆಂಗಳೂರು: ರೈತರು ಬೆಳೆದ ಹಣ್ಣು, ತರಕಾರಿಗಳನ್ನು ಸಾಗಿಸಲು ಯಾವುದೇ ಪಾಸ್ ಅಗತ್ಯವಿಲ್ಲ. ರೈತರಿಗೆ ನೆರವಾಗಲು ಅಧಿಕಾರಿಗಳನ್ನೊಳಗೊಂಡ ಅಗ್ರಿ ವಾರ್ ರೂಂ ಸ್ಥಾಪಿಸಲಾಗಿದೆ. ಪ್ರತಿ ಜಿಲ್ಲೆಯಲ್ಲಿ ಒಂದು ಶಿತಲೀಕರಣ ಕೇಂದ್ರ ಪ್ರಾರಂಭಿಸಲು ಉದ್ದೇಶಿಸಲಾಗಿದೆ ಎಂದು ತೋಟಗಾರಿಕಾ ಸಚಿವ ಕೆ.ಸಿ.ನಾರಾಯಣಗೌಡ ಹೇಳಿದ್ದಾರೆ.
ದಿಗ್ವಿಜಯ 24-7 ನ್ಯೂಸ್ ಮತ್ತು ವಿಜಯವಾಣಿ ಪೋನ್ ಇನ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅವರು, ರೈತರು ತಮ್ಮ ಉತ್ಪನ್ನ ಮಾರಾಟ ಮಾಡಲು ಹೆದರಬೇಕಾಗಿಲ್ಲ. ಧೈರ್ಯವಾಗಿ ಮಾರುಕಟ್ಟೆಗೆ ಬನ್ನಿ, ಸರ್ಕಾರ ನಿಮ್ಮ ಜತೆಗಿದೆ ಎಂದರು. ತೋಟಗಾರಿಕೆ ಇಲಾಖೆಗೆ 760 ಕೋಟಿ ರೂ. ಅನುದಾನವಿದೆ. ಕೇಂದ್ರ ಸರ್ಕಾರದ ನೆರವು ಬರುವ ನಿರೀಕ್ಷೆಯೂ ಇದೆ ಎಂದು ತಿಳಿಸಿದರು.
ಮಾರುಕಟ್ಟೆಯಲ್ಲಿ ಖರೀದಿ ಬದಲಿಗೆ ಸರ್ಕಾರವೇ ನೇರವಾಗಿ ರೈತರಿಂದ ಕಲ್ಲಂಗಡಿ, ಕರಬೂಜ, ದ್ರಾಕ್ಷಿ, ಪಪ್ಪಾಯ, ಅನಾನಸ್ ಹಣ್ಣುಗಳನ್ನು ಖರೀದಿಸಲಿದೆ. ಸರ್ಕಾರದ ಮಟ್ಟದಲ್ಲೇ ಬೆಲೆ ನಿಗದಿ ಮಾಡಲಿದ್ದು, ಖರೀದಿ ಹಾಗೂ ನಿರ್ವಹಣಾ ವೆಚ್ಚವನ್ನೊಳಗೊಂಡು ಮಾರಾಟ ದರ ನಿಗದಿ ಮಾಡಲಾಗುವುದು ಎಂದರು.
ಅಪಾರ್ಟ್​ವೆುಂಟ್​ಗಳಿಗೆ ಹಣ್ಣು: ಬೆಂಗಳೂರಿನಲ್ಲಿಯೇ 225 ಹಾಗೂ ಇತರೆಡೆ 257 ಹಾಪ್​ಕಾಮ್ಸ್​ಗಳಿದ್ದು, ಪ್ರತಿದಿನ 2 ಕೋಟಿ ರೂ. ವಹಿವಾಟು ನಡೆಯುತ್ತಿದೆ. ಬೆಂಗಳೂರಿನಲ್ಲಿ ಅಪಾರ್ಟ್​ವೆುಂಟ್​ಗಳಿಗೆ ಎಲ್ಲ ಉತ್ಪನ್ನಗಳನ್ನು ಹಾಪ್​ಕಾಮ್್ಸ ಮೂಲಕ ನೇರವಾಗಿ ಸರಬರಾಜು ಮಾಡಲು ಯೋಜಿಸಲಾಗಿದೆ. ಶುಕ್ರವಾರದಿಂದಲೇ ಈ ಯೋಜನೆಗೆ ಚಾಲನೆ ನೀಡಲಾಗುವುದು. ಅಪಾರ್ಟ್​ವೆುಂಟ್​ಗಳ ಬಳಿ ಹೊಸದಾಗಿ 250 ಸ್ಟಾಲ್​ಗಳನ್ನು ಪ್ರಾರಂಭ ಮಾಡಲು ಉದ್ದೇಶಿಸಲಾಗಿದೆ ಎಂದು ಹೇಳಿದರು.
ಎಷ್ಟೆಷ್ಟು ಉತ್ಪನ್ನ?: 4588 ಹೆಕ್ಟೇರ್​ನಲ್ಲಿ ಕಲ್ಲಂಗಡಿ ಬೆಳೆಯಲಾಗಿದ್ದು, 1.4 ಲಕ್ಷ ಟನ್ ಉತ್ಪಾದನೆ ನಿರೀಕ್ಷೆ ಮಾಡಲಾಗಿದೆ. 9168 ಹೆಕ್ಟೇರ್​ನಲ್ಲಿ ಟೊಮೊಟೊ ಬೆಳೆದಿದ್ದು, 2.85 ಲಕ್ಷ ಟನ್ ಉತ್ಪಾದನೆ ಆಗಬಹುದು. 22,758 ಹೆಕ್ಟೇರ್​ನಲ್ಲಿ ದ್ರಾಕ್ಷಿ ಬೆಳೆಯಿದ್ದು, 5.69 ಲಕ್ಷ ಟನ್ ಇಳುವರಿ ಬರಲಿದೆ. 1.72 ಹೆಕ್ಟೇರ್​ನಲ್ಲಿ 8.6 ಲಕ್ಷ ಟನ್ ಮಾವು ಉತ್ಪಾದನೆ ಬರುವ ನಿರೀಕ್ಷೆ ಇದೆ. ಈ ಬಗ್ಗೆ ಯಾವ ಕ್ರಮ ಕೈಗೊಳ್ಳಬೇಕೆಂಬ ಬಗ್ಗೆ ಅಧಿಕಾರಿಗಳ ಜತೆ ಸಭೆ ತೀರ್ವನಿಸಲಾಗುವುದು ಎಂದು ಸಚಿವರು ತಿಳಿಸಿದರು.
ಏನೇನು ಕ್ರಮಗಳು?
ಅಂತಾರಾಜ್ಯಗಳಿಗೆ ಹಣ್ಣು, ತರಕಾರಿ ಸಾಗಿಸಲು ಇದ್ದ ಸಮಸ್ಯೆ ಬಗೆಹರಿಸಿ ಕೇರಳ ಹೊರತುಪಡಿಸಿ ಇನ್ನುಳಿದಂತೆ ಮುಕ್ತ ಖರೀದಿ ಮತ್ತು ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿದೆ. ಹಾಪ್​ಕಾಮ್್ಸ, ರೈತ ಉತ್ಪಾದನಾ ಕಂಪನಿಗಳು, ಸ್ಥಳೀಯ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಸ್ಥಳೀಯ ವ್ಯಾಪಾರಕ್ಕೆ ಅವಕಾಶ ನೀಡಲಾಗಿದೆ ಎಂದು ನಾರಾಯಣಗೌಡ ಹೇಳಿದರು.
ವಾರ್ ರೂಂ
ರೈತರಿಗಾಗಿ ರಚಿಸಲಾಗಿರುವ ಅಗ್ರಿ ವಾರ್ ರೂಂ ಅನ್ನು ಅಧಿಕಾರಿಗಳ ತಂಡ ನಿರ್ವಹಣೆ ಮಾಡಲಿದೆ. ದೂರವಾಣಿ ನಂಬರ್- 080 22210237/ 22212818ಗೆ ಕರೆ ಮಾಡಬಹುದಾಗಿದೆ.
ರೇಷ್ಮೆ ಮಾರುಕಟ್ಟೆ
ರೇಷ್ಮೆ ಮಾರುಕಟ್ಟೆ ಬಂದ್ ಆಗಿದ್ದರಿಂದ ಬೆಲೆ ಕುಸಿದಿತ್ತು. ಈಗ ಕನಕಪುರ, ರಾಮನಗರ, ಶಿಡ್ಲಘಟ್ಟ, ಕೊಳ್ಳೇಗಾಲ ಸೇರಿ 41 ರೇಷ್ಮೆ ಮಾರುಕಟ್ಟೆ ಪ್ರಾರಂಭಿಸಿರುವ ಕಾರಣ ಪ್ರತಿ ಕೆಜಿಗೆ 50 ರೂ. ಸರಾಸರಿ ಏರಿಕೆ ಆಗಿದ್ದು 300 ರೂ. ದಾಟಿದೆ. ಸರ್ಕಾರದ ಸೂಚನೆಗಳನ್ನು ಪಾಲಿಸಿ ಕರ್ತವ್ಯಕ್ಕೆ ಹಾಜರಾಗದ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಈಗ ಯಾವ ರೈತರಿಗೂ ರೇಷ್ಮೆ ಗೂಡುಗಳನ್ನು ಮಾರಾಟ ಮಾಡಲು
ಸಮಸ್ಯೆ ಇಲ್ಲ ಎಂದು ನಾರಾಯಣಗೌಡ, ಮಾರುಕಟ್ಟೆಯಲ್ಲಿ ಕೊರೊನಾ ವೈರಸ್ ಹರಡದಂತೆ ತೆಗೆದುಕೊಂಡಿರುವ ಕ್ರಮದ ಬಗ್ಗೆಯೂ ವಿವರಿಸಿದರು. ರೇಷ್ಮೆ ದರಗಳು ಕುಸಿದರೆ ಮಾತ್ರ ಕರ್ನಾಟಕ ಸಿಲ್ಕ್ ಮಾರ್ಕೆಟಿಂಗ್ ಬೋರ್ಡ್ ಖರೀದಿಗೆ ಮಧ್ಯಪ್ರವೇಶ ಮಾಡಲಿದೆ. ರೇಷ್ಮೆಗಾಗಿಯೇ ಸಹಾಯವಾಣಿಯಲ್ಲಿ ಒಬ್ಬ ನೋಡಲ್ ಅಧಿಕಾರಿ ನೇಮಕ ಮಾಡಲಾಗುವುದು ಎಂದರು.
ನೌಕರರಿಗೆ ಎಚ್ಚರಿಕೆ
ಕರೊನಾ ನೆಪದಲ್ಲಿ ಸುಮ್ಮನೆ ಕೆಲಸಕ್ಕೆ ಗೈರು ಹಾಜರಾಗಿರುವ ನೌಕರರು ಎರಡು ದಿನದಲ್ಲಿ ಕರ್ತವ್ಯಕ್ಕೆ ಹಾಜರಾಗಬೇಕು. ಇಲ್ಲದಿದ್ದರೆ, ಅಂತಹವರ ಮೇಲೆ ಮುಲಾಜಿಲ್ಲದೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಸಚಿವ ನಾರಾಯಣಗೌಡ ಎಚ್ಚರಿಕೆ ನೀಡಿದರು.
ಸೋಂಕು ಹರಡುವಿಕೆ ಕೇಂದ್ರ ಬಿಂದುಗಳಲ್ಲಿ ಸಾಮೂಹಿಕ ರಕ್ತಪರೀಕ್ಷೆ ನಡೆಸಿ: ಐಸಿಎಂಆರ್​ ಸಲಹೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − 6 =
Remember me
