ಬೆಂಗಳೂರು:ಕಂದಾಯ ಬಾಕಿ ಪಾವತಿಸಿದ ರೈತರಿಗೆ ಜಮೀನಿನ ಮಾಲೀಕತ್ವ ಪುನರ್ ಸ್ಥಾಪಿಸುವುದಕ್ಕಾಗಿ ಪಹಣಿಯಲ್ಲಿ ನಮೂದಿತ ‘ಸರ್ಕಾರಿ ಬೀಳುಭೂಮಿ‘ ತಿದ್ದುಪಡಿ ಕೋರಿ ಅರ್ಜಿ ಸಲ್ಲಿಸುವುದಕ್ಕೆ ಕಾಲಾವಕಾಶ ವಿಸ್ತರಿಸಲು ಸರ್ಕಾರ ಮುಂದಾಗಿದೆ. ‘ರೈತರಿಗೆ ಬೀಳಿನಿಂದ ಮುಕ್ತಿ’ ಶೀರ್ಷಿಕೆಯಡಿ ಬುಧವಾರ ವಿಜಯವಾಣಿಯಲ್ಲಿ ವರದಿ ಪ್ರಕಟವಾದ ಬೆನ್ನಲ್ಲೇ ಕಾಲಾವಕಾಶ ವಿಸ್ತರಣೆಗೆ ಕ್ರಮ ಕೈಗೊಳ್ಳುವುದಾಗಿ ಕಂದಾಯ ಸಚಿವ ಆರ್.ಅಶೋಕ್ ವಿಧಾನಸಭೆಯಲ್ಲಿ ಭರವಸೆ ನೀಡಿದ್ದಾರೆ. ಪ್ರಶ್ನೋತ್ತರ ಕಲಾಪದಲ್ಲಿ ಜೆಡಿಎಸ್​ನ ಕೆ.ಟಿ.ಶ್ರೀಕಂಠೇಗೌಡ ಅವರು ‘ವಿಜಯವಾಣಿ’ಯಲ್ಲಿ ಪ್ರಕಟಿತವಾದ ವರದಿ ಉಲ್ಲೇಖಿಸಿ, ಗ್ರಾಮ ಲೆಕ್ಕಾಧಿಕಾರಿಗಳ ಸ್ವಾರ್ಥಕ್ಕೆ ರೈತರು ಕಷ್ಟ ಅನುಭವಿಸುತ್ತಿದ್ದು, ಸರ್ಕಾರದ ಬೊಕ್ಕಸಕ್ಕೂ ನಷ್ಟವಾಗುತ್ತಿದೆ ಎಂದು ದೂರಿದರು. ಇದಕ್ಕೆ ಉತ್ತರಿಸಿದ ಅಶೋಕ್ ನಿಯಮದ ಪ್ರಕಾರ 3 ವರ್ಷ ಕಂದಾಯ ಕಟ್ಟದಿದ್ದರೆ ಜಿಲ್ಲಾಧಿಕಾರಿ ಮುಟ್ಟುಗೋಲು ಹಾಕಿಕೊಳ್ಳುತ್ತಾರೆ. ಬಾಕಿ ಕಂದಾಯ, ವಸೂಲಿ ವ್ಯವಹರಣೆ ವೆಚ್ಚ ಭರಿಸಿದ ರೈತರ ಮಾಲೀಕತ್ವ ಮರು ಸ್ಥಾಪನೆಯಾಗಲಿದೆ. ನಿಗದಿತ ಅವಧಿಯಲ್ಲಿ ಅರ್ಜಿ ಸಲ್ಲಿಸಿದವರ ಆರ್​ಟಿಸಿಯಲ್ಲಿ ತಿದ್ದುಪಡಿಗೆ ಕ್ರಮವಹಿಸಲಾಗುತ್ತಿದೆ. ಈ ಅವಕಾಶದಿಂದ ವಂಚಿತ ರೈತರು ಅರ್ಜಿ ಸಲ್ಲಿಸುವುದಕ್ಕೆ ಅವಕಾಶ ನೀಡಲೆಂದು ಅಧಿಕಾರಿಗಳ ಜತೆಗೆ ರ್ಚಚಿಸಿ ಕಾಲಮಿತಿ ವಿಸ್ತರಣೆ ಆದೇಶ ಹೊರಡಿಸಲಾಗುವುದು ಎಂದರು.
ಮನೆ ಬಾಗಿಲಿಗೇ ದಾಖಲೆ:ಭೂದಾಖಲೆ, ಆದಾಯ ಪ್ರಮಾಣಪತ್ರ ಸೇರಿ ಪ್ರಮುಖ ದಾಖಲೆಗಳುಳ್ಳ ಕವರ್ ಅನ್ನು ನೇರ ರೈತರ ಮನೆ ಬಾಗಿಲಿಗೆ ಉಚಿತವಾಗಿ ವಿತರಿಸುವ ಕಾರ್ಯಕ್ರಮ ಮಾ.12ರಂದು ನಿಗದಿಯಾಗಿದೆ. ಸಿಎಂ ಬಸವರಾಜ ಬೊಮ್ಮಾಯಿ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದು, ರಾಜ್ಯದ 45 ಲಕ್ಷ ರೈತರಿಗೆ ಏಕಕಾಲಕ್ಕೆ ಈ ಸೇವೆ ಒದಗಿಸಲಾಗುವುದು.
ಹೊಸದಾಗಿ 800 ಭೂಮಾಪಕರನ್ನು ನೇಮಿಸಿಕೊಳ್ಳಲಾಗಿದೆ. ಇದರೊಂದಿಗೆ 800 ಪರವಾನಗಿ ಪಡೆದ ಭೂಮಾಪಕರ ನೇಮಕಕ್ಕೆ ನಿರ್ಧರಿಸಲಾಗಿದೆ ಎಂದು ಜೆಡಿಎಸ್​ನ ಗೋವಿಂದರಾಜು ಕೇಳಿದ ಮತ್ತೊಂದು ಪ್ರಶ್ನೆಗೆ ಉತ್ತರವಾಗಿ ಆರ್.ಅಶೋಕ್ ತಿಳಿಸಿದರು.
ಇಲಾಖೆಯಿಂದ ರೈತರಿಗೆ ನೀಡಿದ ಆರ್​ಟಿಸಿ, ಮ್ಯುಟೇಷನ್ ಇನ್ನಿತರ ಸೇವೆಗಳ ಮೂಲಕ 2017-18 ರಿಂದ 2022ರ ಜ.28ರವರೆಗೆ 173.09 ಕೋಟಿ ರೂ. ಆದಾಯ ಸರ್ಕಾರಕ್ಕೆ ಜಮೆಯಾಗಿದೆ. ವೆಚ್ಚ ಹೆಚ್ಚಿದ್ದರೂ ರೈತರಿಗೆ ಅನುಕೂಲವಾಗಲೆಂದು ನಾಲ್ಕು ಪುಟಗಳ ಪಹಣಿಗೆ 15 ರೂ/, ಪ್ರತಿ ಹೆಚ್ಚುವರಿ ಪುಟಕ್ಕೆ ಎರಡು ರೂ, ಮ್ಯುಟೇಷನ್​ಗೆ 25 ರೂ. ಶುಲ್ಕ ವಿಧಿಸಿದ್ದು, ಕಡಿಮೆ ದರವಿದೆ ಎಂದು ಸಮರ್ಥಿಸಿಕೊಂಡರು.
ವಿನೂತನ ಕಾರ್ಯಕ್ರಮ:ರೈತರಿಗೆ ಮತ್ತೊಂದು ಅಗತ್ಯದ ದಾಖಲೆಯಾದ 11ಇ ನಕ್ಷೆ ವಿಷಯದಲ್ಲಿ ಸರ್ಕಾರ ಮಹತ್ವದ ಹೆಜ್ಜೆಯಿಟ್ಟಿದೆ. ಅಧಿಕಾರಿಗಳು 11ಇ ನಕ್ಷೆಯಡಿ ಜಮೀನಿನ ಗಡಿ ಗುರುತಿಸಿ ಕೊಡಲಿದ್ದು, ನಂತರ ಆಯಾ ರೈತರೇ ತಮ್ಮ ಜಮೀನು ಭಾಗ ಮಾಡಿಕೊಳ್ಳುವುದಕ್ಕೆ ಅವಕಾಶ ಕೊಡುವ ವಿನೂತನ ಕಾರ್ಯಕ್ರಮ ಜಾರಿಗೊಳಿಸಲಿದ್ದು, ಇದಕ್ಕಾಗಿ ಸಾಫ್ಟವೇರ್ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಆರ್.ಅಶೋಕ್ ತಿಳಿಸಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 1 =
Remember me
