ಬೆಂಗಳೂರು:ಮುಚ್ಚಳಿಕೆ, ಜಮೀನು ಖರೀದಿ ಮತ್ತಿತರ ವ್ಯವಹಾರಗಳಿಗೆ ಮುದ್ರಾಂಕ ಶುಲ್ಕ ಹೆಚ್ಚಿಸಿರುವ ಸರ್ಕಾರ, ರೈತರ ಮೇಲೆ ದೊಡ್ಡ ಭಾರ ಹೊರಿಸಿದೆ ಎಂದು ವಿಧಾನ ಪರಿಷತ್​ನಲ್ಲಿ ಬಿಜೆಪಿಯ ರುದ್ರಗೌಡ ಕಳವಳ ವ್ಯಕ್ತಪಡಿಸಿದರು.
‘ರೈತರಿಗೆ ಹೊರೆಯಾದ ಮುದ್ರಾಂಕ ಶುಲ್ಕ’ ಶೀರ್ಷಿಕೆಯಡಿ ವಿಜಯವಾಣಿ ಪ್ರಕಟಿಸಿದ ವರದಿಯನ್ನು ವಿಧಾನ ಪರಿಷತ್​ನಲ್ಲಿ ಶೂನ್ಯ ವೇಳೆಯಲ್ಲಿ ಸೋಮವಾರ ಪ್ರಸ್ತಾಪಿಸಿದ ಅವರು, ಮುಚ್ಚಳಿಕೆ, ಅಫಿಡವಿಟ್​ಗೆ ಈ ಮೊದಲು 20 ರೂ. ಶುಲ್ಕವಿದ್ದದ್ದು ಈಗ 100 ರೂ.ಗೆ ಹೆಚ್ಚಿಸಿದ್ದು, ರೈತರ ಜತೆಗೆ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಿದೆ.
ಜಮೀನು ವಹಿವಾಟಿಗೆ ಸಂಬಂಧಿತ ಮುದ್ರಾಂಕ ಶುಲ್ಕವನ್ನೂ ಏರಿಸಲಾಗಿದೆ. ಬರಗಾಲದಲ್ಲಿ ಈ ನಿರ್ಧಾರ ಸರಿಯಾ ದುದಲ್ಲ. ಮುದ್ರಾಂಕ ಶುಲ್ಕ ವಿಚಾರದಲ್ಲಿ ರೈತರಿಗೆ ಪ್ರತ್ಯೇಕ ವ್ಯವಸ್ಥೆ ಜಾರಿಗೆ ತರಬೇಕು ಎಂದು ಹೇಳಿದರು.
ಅಲ್ಲದೆ, ಶುಲ್ಕದ ಹೊರೆ ಇಳಿಸಬೇಕು ಎಂದು ರುದ್ರಗೌಡ ಮನವಿ ಮಾಡಿದಾಗ ಸಂಬಂಧಿಸಿದ ಸಚಿವರಿಂದ ಉತ್ತರ ಕೊಡಿಸುವುದಾಗಿ ಸಭಾನಾಯಕ ಎನ್.ಎಸ್.ಬೋಸರಾಜು ಭರವಸೆ ನೀಡಿದರು.
ದಿನಕ್ಕೆ 2 ಲಕ್ಷ ರೂ. ಸಂಪಾದಿಸುವ ರೋಲ್ಸ್ ರಾಯ್ಸ್ ಕಾರಿಗೆ ಬಿತ್ತು 12 ಲಕ್ಷ ರೂ. ದಂಡ! ಕಾರಣ ಹುಬ್ಬೇರಿಸುವಂತಿದೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 3 =
Remember me
