ವಿಜಯಪುರ:ವಿಜಯವಾಣಿ ಪತ್ರಿಕೆಯ ವಿಜಯಪುರ ಜಿಲ್ಲಾ ವರದಿಗಾರರಾದ ಶರಣು ಪಾಟೀಲ (ಯಂಕಂಚಿ) ಭಾನುವಾರ ನಿಧನರಾಗಿದ್ದಾರೆ.
ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂಬಿ ಪಾಟೀಲ್‌ ಅವರು ಟ್ವೀಟ್​ ಮಾಡುವ ಮೂಲಕವಾಗಿ ಕಂಬನಿ ಮೀಡಿದಿದ್ದಾರೆ.ವಿಜಯವಾಣಿ ಪತ್ರಿಕೆಯ ವಿಜಯಪುರ ಜಿಲ್ಲಾ ವರದಿಗಾರರಾದ ಶರಣು ಪಾಟೀಲ (ಯಂಕಂಚಿ) ಭಾನುವಾರ ನಿಧನರಾದ ಸುದ್ದಿ ತಿಳಿದು ದುಃಖವಾಯಿತು. ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ, ಮೃತರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಟ್ವೀಟ್​​ ಮಾಡಿದ್ದಾರೆ.
ಕ್ರೈಂ ಪತ್ರಿಕೋದ್ಯಮದಲ್ಲಿ ವಿಶಿಷ್ಟ ಛಾಪು ಒತ್ತಿದ್ದ, ಅತ್ಯದ್ಭುತವಾದ ಬರವಣಿಗೆ-ನಿರೂಪಣಾ ಶೈಲಿ ಹೊಂದಿದ್ದ ಶರಣು ಪಾಟೀಲ್ ಕೆಲವು ದಿನಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದರು ಎನ್ನಲಾಗಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ವಿಜಯವಾಣಿ ಪತ್ರಿಕೆಯ ವಿಜಯಪುರ ಜಿಲ್ಲಾ ವರದಿಗಾರರಾದ ಶರಣು ಪಾಟೀಲ (ಯಂಕಂಚಿ) ಭಾನುವಾರ ನಿಧನರಾದ ಸುದ್ದಿ ತಿಳಿದು ದುಃಖವಾಯಿತು. ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ, ಮೃತರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ.pic.twitter.com/IKgwfOYHyO
ಮೂಲತಃ ವಿಜಯಪುರದವರಾಗಿದ್ದ ಶರಣು ಪಾಟೀಲ್ ಈ ಹಿಂದಿನ ಈ ಟಿವಿಯಲ್ಲಿ ಕೆಲಸ ಮಾಡಿದ್ದರು. ನಂತರ ಪತ್ರಿಕೆಗಳಲ್ಲಿ ಕೆಲಸ ಮಾಡಿ ಮತ್ತೆ ಈಟಿವಿ-ಭಾರತ್​​ನಲ್ಲಿ ಕ್ರೈಂ ರಿಪೋರ್ಟರ್ ಆಗಿದ್ದರು. ಝೀ ಟಿವಿಯಲ್ಲು ಅವರು ಕೆಲಸ ಮಾಡಿದ್ದರು.
ಕ್ರೈಂ ಪತ್ರಿಕೋದ್ಯಮದಲ್ಲಿ ಶರಣು ಪಾಟೀಲ್ ಒಳ್ಳೆ ಹೆಸರು ಮಾಡಿದ್ರು, ಅನೇಕ ಸ್ಫೋಟಕ ಎನ್ನುವಂತ ಸುದ್ದಿಗಳು ಅವರ ಕಾರ್ಯಾವಧಿ ವೇಳೆ ಮಾದ್ಯಮಗಳಲ್ಲಿ ಪ್ರಕಟವಾಗಿದ್ದವು. ಆದರೆ ಇತ್ತೀಚಿನ ವರ್ಷಗಳಲ್ಲಿ ಅವರನ್ನು ಕಾಡಲಾರಂಭಿಸಿದ್ದ ಅನಾರೋಗ್ಯದಿಂದಾಗಿ ತುಂಬಾ ಮಂಕಾಗಿದ್ದರು.
ಶರಣುಪಾಟೀಲ್ ನಿಧನಕ್ಕೆ ವಿಜಯಪುರದ ಪತ್ರಕರ್ತರ ಬಳಗ ಶೋಕ-ಸಂತಾಪ ಸೂಚಿಸಿದೆ. ಬೆಂಗಳೂರಿನಲ್ಲಿ ಅವರೊಂದಿಗೆ ಕೆಲಸ ಮಾಡುತ್ತಿದ್ದ ಸ್ನೇಹಿತರು ಸಂತಾಪ ಸೂಚಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − 4 =
Remember me
