ಅರ್ಜಿ ಆಹ್ವಾನದ ವೇಳೆ ಇಲ್ಲದ ನಿಯಮವು ನೇಮಕಾತಿ ದಾಖಲೆ ಪರಿಶೀಲನೆ ವೇಳೆ ಪ್ರಸ್ತಾಪವಾಗುತ್ತಿರುವುದು ಮಧ್ಯಮ ಹಂತದ ಆರೋಗ್ಯ ಪೂರೈಕೆದಾರ ಹುದ್ದೆ ಆಕಾಂಕ್ಷಿಗಳಿಗೆ ಸಂಕಷ್ಟ ತಂದೊಡ್ಡಿದೆ. ಮೆರಿಟ್-ರೋಸ್ಟರ್ ಆಧಾರದ ಮೇಲೆ ಕಲ್ಯಾಣ ಕರ್ನಾಟಕದಲ್ಲಿ ಇತರ ಜಿಲ್ಲೆಗಳ ಅರ್ಹ ಅಭ್ಯರ್ಥಿಗಳನ್ನು ನೇಮಕಾತಿ ಮಾಡಿಕೊಳ್ಳಲು ಅವಕಾಶವಿದ್ದರೂ ಅಧಿಕಾರಿಗಳು ನೇಮಕಾತಿ ಪ್ರಕ್ರಿಯೆಗೆ ತಡೆಯೊಡ್ಡಿದ್ದು, ಈ ಕುರಿತು ಅವಕಾಶ ವಂಚಿತ ಅಭ್ಯರ್ಥಿಗಳು ‘ವಿಜಯವಾಣಿ ಸಹಾಯವಾಣಿ’ಗೆ ಕರೆ ಮಾಡಿ ಅಳಲು ತೋಡಿಕೊಂಡಿದ್ದಾರೆ. ವಿಜಯಪುರ ವರದಿಗಾರಹೀರಾನಾಯ್ಕ ಟಿ.ಸಮಸ್ಯೆ ಕುರಿತು ಮಾಡಿರುವ ವಿಸ್ತೃತ ವರದಿ ಇಲ್ಲಿದೆ.
ವಿಜಯಪುರ:ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಗುತ್ತಿಗೆ ಆಧಾರದಲ್ಲಿ ಮಧ್ಯಮ ಹಂತದ ಆರೋಗ್ಯ ಪೂರೈಕೆದಾರ (ಎಂಎಲ್​ಎಚ್​ಸಿ) ಹುದ್ದೆಗೆ ಅರ್ಜಿ ಆಹ್ವಾನಿಸಿದ್ದ ವೇಳೆ ಇಲ್ಲದ ಮೀಸಲಾತಿ ನಿಯಮ ನೇಮಕಾತಿ ಹಂತದಲ್ಲಿ ಮೌಖಿಕವಾಗಿ ಪ್ರಸ್ತಾಪವಾಗುತ್ತಿದ್ದು, ನಮಗೆ ಅನ್ಯಾಯವಾಗುತ್ತಿದೆ ಎಂದು ಅರ್ಹ ಅಭ್ಯರ್ಥಿಗಳು ಅಳಲು ತೋಡಿಕೊಂಡಿದ್ದಾರೆ.
ಬೀದರ್, ಬಳ್ಳಾರಿ, ಮೈಸೂರು(ಟಿ. ನರಸೀಪುರ ಮಾತ್ರ), ಕೊಪ್ಪಳ, ಯಾದಗಿರಿ, ಕಲಬುರಗಿ, ರಾಯಚೂರು, ಬಾಗಲಕೋಟೆ, ಕೋಲಾರ ಜಿಲ್ಲೆಗಳಲ್ಲಿ ಖಾಲಿ ಇರುವ 552 ಎಂಎಲ್​ಎಚ್​ಸಿ ಹುದ್ದೆಗಳ ಭರ್ತಿಗೆ ಆರೋಗ್ಯ ಇಲಾಖೆ 2019ರ ನ.18ರಂದು ಬಿಎಸ್ಸಿ ನರ್ಸಿಂಗ್ ಮುಗಿಸಿದ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿತ್ತು.
ಈ ವೇಳೆ ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಸೂಕ್ತ ಅಭ್ಯರ್ಥಿಗಳು ಲಭ್ಯವಾಗದಿದ್ದಲ್ಲಿ ರೋಸ್ಟರ್ ನಿಯಮಾನುಸಾರ ಇತರ ಅಭ್ಯರ್ಥಿಗಳನ್ನು ನೇಮಕಾತಿಗೆ ಪರಿಗಣಿಸಲಾಗುತ್ತದೆ ಎಂದಿತ್ತು. ಅದರಂತೆ ರಾಜ್ಯಾದ್ಯಂತ 4200 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರು. ಡಿ.21ರಂದು ಆನ್​ಲೈನ್ ಪರೀಕ್ಷೆ ನಡೆದು, ಫಲಿತಾಂಶವೂ ಪ್ರಕಟಗೊಂಡಿದೆ.
ಇದೀಗ ಕಲ್ಯಾಣ ಕರ್ನಾಟಕದ ನಿಗದಿತ ಎಲ್ಲ ಹುದ್ದೆಗೂ ಅರ್ಹ ಅಭ್ಯರ್ಥಿಗಳು ಲಭ್ಯರಿಲ್ಲ. ಅರ್ಜಿ ಆಹ್ವಾನ ವೇಳೆಯ ಆದೇಶದಂತೆ ಬೇರೆ ಜಿಲ್ಲೆ ಅಭ್ಯರ್ಥಿಗಳಿಗೆ ಅವಕಾಶ ನೀಡಬೇಕು. ಆದರೆ ಇದೀಗ ಕಲ್ಯಾಣ ಕರ್ನಾಟಕ ಅಭ್ಯರ್ಥಿಗಳು ದೊರೆಯದಿದ್ದರೂ ಬೇರೆ ಜಿಲ್ಲೆ ಅಭ್ಯರ್ಥಿಗಳನ್ನು ಖಾಲಿ ಹುದ್ದೆಗಳಿಗೆ ಆಯ್ಕೆ ಮಾಡಿಕೊಳ್ಳಬಾರದು ಎಂಬ ಆದೇಶ ಮೌಖಿಕವಾಗಿ ಇಲಾಖೆಯಿಂದ ಲಭಿಸಿರುವುದು ಅರ್ಹ ಅಭ್ಯರ್ಥಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಏನಿದು ಗೊಂದಲ?: ಯಾದಗಿರಿ ಜಿಲ್ಲೆಯ ನೇಮಕಾತಿ ಪ್ರಕ್ರಿಯೆ ಅವಲೋಕಿಸಿದರೆ ಅರ್ಹರಿಗಾಗುತ್ತಿರುವ ಅನ್ಯಾಯ ಅರಿವಿಗೆ ಬರುತ್ತದೆ. ಜಿಲ್ಲೆಯಲ್ಲಿ 47 ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದ್ದು, ಅದರಲ್ಲಿ 38 ಹುದ್ದೆ ಕಲ್ಯಾಣ ಕರ್ನಾಟಕದ ಅಭ್ಯರ್ಥಿಗಳು ಹಾಗೂ ಇತರ 9 ಹುದ್ದೆಗೆ ರೋಸ್ಟರ್ ನಿಯಮಾನುಸಾರ ಇತರ ಜಿಲ್ಲೆ ಅಭ್ಯರ್ಥಿಗಳನ್ನು ಭರ್ತಿ ಮಾಡಿಕೊಳ್ಳಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿತ್ತು.
ಫಲಿತಾಂಶ ಬಳಿಕ ಪ್ರಕಟಿಸಿರುವ ಅರ್ಹ ಅಭ್ಯರ್ಥಿಗಳ ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ ಕ.ಕರ್ನಾಟಕದ 38 ಹುದ್ದೆಗೆ 16 ಮಂದಿ ಮಾತ್ರ ಅರ್ಹತೆ ಪಡೆದಿದ್ದು, ಅವರ ಮೂಲ ದಾಖಲೆ ಪರಿಶೀಲನೆ ಮಾಡಲಾಗಿದೆ. ಇನ್ನು 22 ಹುದ್ದೆಗೆ ನಿಯಮಾನುಸಾರ ಬೇರೆ ಜಿಲ್ಲೆಯ ಅಭ್ಯರ್ಥಿಗಳನ್ನು ಪರಿಗಣಿಸಬಹುದಾದರೂ ಅಧಿಕಾರಿಗಳು ಗಮನಹರಿಸುತ್ತಿಲ್ಲ. ರೋಸ್ಟರ್ ಅನುಸಾರ ಇತರ ಜಿಲ್ಲೆಯವರಿಗೆ ಮೀಸಲಾದ 9 ಹುದ್ದೆಗೂ ಅರ್ಹರ ದಾಖಲೆ ಪರಿಶೀಲನೆ ನಡೆಸುತ್ತಿಲ್ಲ ಎಂಬುದು ಅಭ್ಯರ್ಥಿಗಳು ಅಳಲು.
ಮಧ್ಯಮ ಹಂತದ ಆರೋಗ್ಯ ಪೂರೈಕೆದಾರ ಹುದ್ದೆಗೆ ನಾವು ಅರ್ಹತೆ ಪಡೆದಿದ್ದರೂ ಮೂಲ ದಾಖಲೆ ಪರಿಶೀಲನೆ ವೇಳೆ ನಮ್ಮನ್ನು ಪರಿಗಣಿಸಿಲ್ಲ. ಈ ಬಗ್ಗೆ ಆರೋಗ್ಯ ಸಚಿವರು ಗಮನಹರಿಸಿ ಸಮಸ್ಯೆ ಬಗೆಹರಿಸಬೇಕು.
| ಸೈಫನ್ ಶೇಖ್ ನೊಂದ ಅಭ್ಯರ್ಥಿ, ವಿಜಯಪುರ
ಈ ವಿಚಾರ ಇನ್ನೂ ನನ್ನ ಗಮನಕ್ಕೆ ಬಂದಿಲ್ಲ. ಹೀಗಾಗಿ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ರ್ಚಚಿಸಿ ಕ್ರಮ ಕೈಗೊಳ್ಳಲಾಗುವುದು.
| ಬಿ.ಶ್ರೀರಾಮುಲು ಆರೋಗ್ಯ ಸಚಿವ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven − three =
Remember me
