ಬೆಂಗಳೂರು:ಬುಧವಾರ ರಾಜ್ಯಾದ್ಯಂತ ದ್ವಿತೀಯ ಪಿಯು ಪರೀಕ್ಷೆ ಆರಂಭವಾಗಲಿದ್ದು, ಒಟ್ಟಾರೆ ಈ ಬಾರಿ 1,016 ಪರೀಕ್ಷಾ ಕೇಂದ್ರಗಳಲ್ಲಿ 6,80,049 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಲಿದ್ದಾರೆ. ಈ ಪೈಕಿ 2, 16,930 ವಿದ್ಯಾರ್ಥಿಗಳು ವಿಜ್ಞಾನ ವಿಭಾಗ, 2,61,674 ವಾಣಿಜ್ಯ ವಿಭಾಗ ಮತ್ತು 2,01,445 ಕಲಾ ವಿಭಾಗದ ವಿದ್ಯಾರ್ಥಿಗಳಿದ್ದಾರೆ. ಒಟ್ಟಾರೆ ವಿದ್ಯಾರ್ಥಿಗಳಲ್ಲಿ 3,41,618 ಬಾಲಕಿಯರಿದ್ದರೆ, ಬಾಲಕರ ಸಂಖ್ಯೆ 3,38,431 ಎಂದು ಪಿಯು ಇಲಾಖೆ ಪ್ರಕಟಣೆ ತಿಳಿಸಿದೆ. ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘ ಕಪ್ಪುಪಟ್ಟಿ ಧರಿಸಿ ಪರೀಕ್ಷೆ ನಡೆಸಿಕೊಡಲು ನಿರ್ಧರಿಸಿದೆ.
5000 ವಿದ್ಯಾರ್ಥಿಗಳು ವಂಚಿತ:ಈ ವರ್ಷ ಕನಿಷ್ಠ ಹಾಜರಾತಿ ಇಲ್ಲದ 4,993 ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯುವ ಅವಕಾಶವನ್ನು ಇಲಾಖೆ ರದ್ದು ಮಾಡಿದೆ. 2019ರಲ್ಲಿ 2,500 ಮತ್ತು 2018ರಲ್ಲಿ 3,500 ವಿದ್ಯಾರ್ಥಿಗಳು ಅರ್ಹತೆ ಕಳೆದುಕೊಂಡಿದ್ದರು.
ಮೊದಲ ಹಂತದಲ್ಲಿ ಕನಿಷ್ಠ ಹಾಜರಾತಿ ಇಲ್ಲದಿರುವ ವಿದ್ಯಾರ್ಥಿಗಳಿಗೆ ಕಾಲೇಜಿನ ಆಡಳಿತ ಮಂಡಳಿಯವರೇ ಆನ್​ಲೈನ್ ಮೂಲಕ ವಿದ್ಯಾರ್ಥಿಗಳ ಮಾಹಿತಿ ಕಳುಹಿಸಿ ಕನಿಷ್ಠ ಹಾಜರಾತಿ ಇಲ್ಲ ಎಂಬುದನ್ನು ಸ್ಪಷ್ಟ ಪಡಿಸಿವೆ. ಈ ಹಿನ್ನೆಲೆಯಲ್ಲಿ ಇಲಾಖೆಯು ಪ್ರವೇಶ ಪತ್ರ ಮುದ್ರಿಸುವ ಗೋಜಿಗೆ ಹೋಗಿಲ್ಲ.
ಕರ್ನಾಟಕ ಶಿಕ್ಷಣ ಕಾಯ್ದೆ 2006, ಸಕ್ಷೆನ್ 21ರ ಪ್ರಕಾರ ಪ್ರತಿ ವಿಷಯದಲ್ಲೂ ಕನಿಷ್ಠ ಶೇ.75 ಹಾಜರಾತಿ ಹೊಂದಿದ ವಿದ್ಯಾರ್ಥಿಗಳಿಗಷ್ಟೇ ಪ್ರವೇಶ ಪತ್ರ ನೀಡಿ ಪರೀಕ್ಷೆ ಬರೆಯಲು ಅನುಮತಿ ನೀಡಲಾಗುತ್ತದೆ. ಈ ರೀತಿ ಗೈರು ಹಾಜರಾತಿಯಿಂದ ಪರೀಕ್ಷೆ ಪ್ರವೇಶ ಕಳೆದುಕೊಂಡ ವಿದ್ಯಾರ್ಥಿಗಳು ಮುಂಬರುವ ಮರು ಪರೀಕ್ಷೆಗೂ ಹಾಜರಾಗುವಂತಿಲ್ಲ.
ಮುಂದಿನ 2020ನೇ ಸಾಲಿನ ವಾರ್ಷಿಕ ಮುಖ್ಯ ಪರೀಕ್ಷೆ ಅಂದರೆ ಒಂದು ವರ್ಷದವರೆಗೂ ಪರೀಕ್ಷೆ ಬರೆಯುವ ಅವಕಾಶವನ್ನೇ ಕಳೆದುಕೊಂಡಿದ್ದಾರೆ. ಈ ಮೊದಲು ಕನಿಷ್ಠ ಹಾಜರಾತಿ ಹೊಂದಿರದ ವಿದ್ಯಾರ್ಥಿಗಳು ವೈದ್ಯಕೀಯ ಪ್ರಮಾಣ ಪತ್ರ ನೀಡಿ ಹಾಜರಾತಿ ಪಡೆದುಕೊಳ್ಳುತ್ತಿದ್ದರು. ಕನಿಷ್ಠ ಶೇ.5 ಹಾಜರಾತಿ ನೀಡುವ ಅಧಿಕಾರ ಪ್ರಾಂಶುಪಾಲರಿಗೆ ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕರಿಗಿತ್ತು.
ಆದರೆ, ಇದನ್ನೇ ಅಸ್ತ್ರವಾಗಿ ಬಳಕೆ ಮಾಡಿಕೊಂಡ ಕೆಲವು ವಿದ್ಯಾರ್ಥಿಗಳು ನಕಲಿ ವೈದ್ಯಕೀಯ ಪ್ರಮಾಣ ಪತ್ರ ನೀಡಿ ಪರೀಕ್ಷೆಗೆ ಬರೆಯಲು ಅವಕಾಶ ಪಡೆದುಕೊಳ್ಳುತ್ತಿದ್ದರು. ಹಾಗಾಗಿ ಸುಪ್ರೀಂಕೋರ್ಟ್ ಕನಿಷ್ಠ ಶೇ.75 ಹಾಜರಾತಿ ಹೊಂದಿರುವ ವಿದ್ಯಾರ್ಥಿಗಳಿಗಷ್ಟೇ ಪರೀಕ್ಷೆ ಬರೆಯಲು ಅನುಮತಿ ನೀಡಬೇಕು ಎಂದು ಆದೇಶ ಹೊರಡಿಸಿತು. ಇದರಿಂದ ಪರೀಕ್ಷೆ ಬರೆಯಲು ಅನ್ಯಮಾರ್ಗ ಅನುಸರಿಸುತ್ತಿದ್ದ ವಿದ್ಯಾರ್ಥಿಗಳ ದಾರಿಗೆ ಬ್ರೇಕ್ ಬಿದ್ದಿತ್ತು.
ಸಾಮುದ್ರ ಫೌಂಡೇಷನ್ ಟಿಪ್ಸ್
ವಿದ್ಯಾರ್ಥಿ ಜೀವನದ ಬಹು ಮುಖ್ಯ ಘಟ್ಟವಾದ ದ್ವಿತೀಯ ಪಿಯು ಪರೀಕ್ಷೆಗೆ ಹಾಜರಾಗುತ್ತಿರುವ ಎಲ್ಲ ವಿದ್ಯಾರ್ಥಿಗಳಿಗೆ ಶುಭಾಶಯಗಳು. ನಿಮ್ಮೆಲ್ಲರ ಅಗಣಿತ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿ. ಭವಿಷ್ಯ ಉಜ್ವಲವಾಗಲಿ ಎಂದು ಹಾರೈಸುತ್ತೇನೆ.
| ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ
ವಿದ್ಯಾರ್ಥಿಗಳು ಮಾಡಿದ ತಪ್ಪಿಗೆ ಇಲಾಖೆ ಏನು ಮಾಡಲು ಸಾಧ್ಯವಿಲ್ಲ. ವಿದ್ಯಾರ್ಥಿಗಳು ಜವಾಬ್ದಾರಿ ಅರಿತು ತರಗತಿಗೆ ಹಾಜರಾಗಬೇಕು.
|ಕನಗವಲ್ಲಿ ನಿರ್ದೇಶಕರು, ಪದವಿ ಪೂರ್ವ ಶಿಕ್ಷಣ ಇಲಾಖೆ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 − 9 =
Remember me
