ನಾಗಮಂಗಲ:ಡಾ.ಬಾಲಗಂಗಾಧರನಾಥ ಸ್ವಾಮೀಜಿ ಅವರ ಜಯಂತ್ಯುತ್ಸವ ಮತ್ತು ಸಂಸ್ಮರಣೋತ್ಸವ ಅಂಗವಾಗಿ ಕನ್ನಡದ ನಂ. 1 ದಿನಪತ್ರಿಕೆ ‘ವಿಜಯವಾಣಿ’ ಹೊರತಂದಿರುವ ‘ಶ್ರೀ ಜ್ವಾಲಾಪೀಠ’ ವಿಶೇಷ ಸಂಚಿಕೆಯನ್ನು ಸಾವಿರಾರು ಭಕ್ತರು ಹಾಗೂ ವಿದ್ಯಾರ್ಥಿಗಳ ಸಮ್ಮುಖದಲ್ಲಿ ಪೀಠಾಧ್ಯಕ್ಷರಾದ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಮತ್ತಿತರ ಗಣ್ಯರು ಸೋಮವಾರ ಬಿಡುಗಡೆ ಮಾಡಿದರು.
ತಾಲೂಕಿನ ಆದಿಚುಂಚನಗಿರಿ ಮಹಾಸಂಸ್ಥಾನ ಮಠದಲ್ಲಿ ಆಯೋಜಿಸಿದ್ದ ಡಾ.ಬಾಲಗಂಗಾಧರನಾಥ ಸ್ವಾಮೀಜಿ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಬಿಡುಗಡೆಯಾದ 100 ಪುಟಗಳ ವಿಶೇಷ ಸಂಚಿಕೆಯ ಬಗ್ಗೆ ಗಣ್ಯರು ಶ್ಲಾಘನೆ ವ್ಯಕ್ತಪಡಿಸಿದರು.
ಡಾ.ನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿ, ‘ವಿಜಯವಾಣಿ’ ಪತ್ರಿಕೆ ಶ್ರೀಕ್ಷೇತ್ರಕ್ಕೆ ಸಂಬಂಧಿಸಿದಂತೆ 100 ಪುಟಗಳಲ್ಲಿ ವಿಶೇಷ ಸಂಚಿಕೆ ಹೊರತಂದಿರುವುದು ಸಂತಸದ ವಿಚಾರ. ಇನ್ನು ವಿಶೇಷ ಸಂಚಿಕೆಗೆ ‘ಶ್ರೀ ಜ್ವಾಲಾಪೀಠ’ ಎಂಬ ಒಳ್ಳೆಯ ಶೀರ್ಷಿಕೆ ಇಟ್ಟಿರುವುದು ಕ್ಷೇತ್ರದ ಇಡೀ ಇತಿಹಾಸಕ್ಕೆ ಒಂದು ಮುಕುಟವಾಗಿದೆ ಎಂದರು.
ಶ್ರೀಮಠದ ಸುಮಾರು 1,800 ವರ್ಷಗಳ ಇತಿಹಾಸದಲ್ಲಿ ಜ್ವಾಲಾಪೀಠಕ್ಕೆ ವಿಶೇಷ ಸ್ಥಾನವಿದೆ. ವರ್ಷಕ್ಕೆ ಮೂರು ಬಾರಿ ಅಂದರೆ ಶಿವರಾತ್ರಿ, ನವರಾತ್ರಿ ಮತ್ತು ಜಾತ್ರೋತ್ಸವದಲ್ಲಿ ಪೀಠಾಧೀಶರು ಪೀಠವನ್ನು ಅಲಂಕರಿಸುತ್ತಾರೆ. ಇಂತಹ ಸಂದರ್ಭದಲ್ಲಿ ದರ್ಶನ ಪಡೆದರೆ ಒಳಿತಾಗಲಿದೆ ಎಂದು ತಿಳಿಸಿದರು.
ಪೂಜ್ಯ ಡಾ.ಬಾಲಗಂಗಾಧರನಾಥ ಸ್ವಾಮೀಜಿ ಅವರು ದೈಹಿಕವಾಗಿ ನಮ್ಮನ್ನು ಅಗಲಿರಬಹುದು. ಆದರೆ ಮಾನಸಿಕವಾಗಿ ಎಂದಿಗೂ ನಮ್ಮ ಜತೆಗಿರುತ್ತಾರೆ. ಅವರ ಆದರ್ಶ, ನಡೆದುಬಂದ ದಾರಿ ಅನುಕರಣೀಯ ಎಂದರು. ವಿಜಯವಾಣಿ ಸಂಪಾದಕ ಕೆ.ಎನ್. ಚನ್ನೇಗೌಡ ಮಾತನಾಡಿ, ಆದಿಚುಂಚನಗಿರಿ ಮಠದ ಇತಿಹಾಸ ಹಾಗೂ ಕ್ಷೇತ್ರದ ವೈಶಿಷ್ಟ್ಯ ಕುರಿತು ಡಾ.ಬಾಲಗಂಗಾಧರನಾಥ ಸ್ವಾಮೀಜಿ ಅವರ ಜಯಂತ್ಯುತ್ಸವದ ದಿನದಂದು ವಿಶೇಷ ಸಂಚಿಕೆ ತರಲಾಗಿದೆ. ಈ ಕೆಲಸ ಯಶಸ್ವಿಯಾಗಲು ಸಹಕರಿಸಿದ ಎಲ್ಲರಿಗೂ ಹೃದಯಪೂರ್ವಕ ಧನ್ಯವಾದ ಅರ್ಪಿಸುತ್ತೇನೆ ಎಂದರು.
ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ. ನಾರಾಯಣಗೌಡ, ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮಾನಂದನಾಥ ಸ್ವಾಮೀಜಿ, ಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿ, ಶಾಸಕರಾದ ಸುರೇಶ್​ಗೌಡ, ಸಿ.ಎಸ್. ಪುಟ್ಟರಾಜು, ಸ್ವರೂಪಾನಂದ ಸ್ವಾಮೀಜಿ, ಶಿವಲಿಂಗಸ್ವಾಮೀಜಿ, ಆದಿಚುಂಚನಗಿರಿ ವಿವಿ ಉಪಕುಲಪತಿ ಡಾ.ಚಂದ್ರಶೇಖರ್ ಶೆಟ್ಟಿ, ವಿಜಯವಾಣಿ ಮೈಸೂರು ಬ್ಯೂರೋ ಮುಖ್ಯಸ್ಥ ಸಿ.ಕೆ. ಮಹೇಂದ್ರ ಮತ್ತಿತರರಿದ್ದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 + eleven =
Remember me
