|ರುದ್ರಣ್ಣ ಹತಿರ್ಕೋಟೆಬೆಂಗಳೂರುರಾಜಸ್ಥಾನದ ಬಳಿಕ ಬರಪೀಡಿತ ಪ್ರದೇಶವಾಗುವತ್ತ ಹೆಜ್ಜೆ ಇಟ್ಟಿರುವ ಕರ್ನಾಟಕದಲ್ಲಿ ಭವಿಷ್ಯದ ದಿನಗಳು ಭೀಕರ ಕ್ಷಾಮಕ್ಕೆ ಸಾಯಾಗಬಹುದೆಂಬ ಆತಂಕದ ಹಿನ್ನೆಲೆಯಲ್ಲಿ ಅಂತರ್ಜಲ ವೃದ್ಧಿಸುವ ಸಂಕಲ್ಪದೊಂದಿಗೆ ಸರ್ಕಾರ ಜಲನಿಧಿ ಯೋಜನೆ ರೂಪಿಸಿದೆ.
ಖಾತೆಯಲ್ಲಿ ಹಣವಿದ್ದರಷ್ಟೇ ಎಟಿಎಂನಲ್ಲಿ ಪಡೆಯಲು ಸಾಧ್ಯ, ರಕ್ತನಿಧಿಯಲ್ಲಿ ಶೇಖರಣೆ ಇದ್ದರಷ್ಟೇ ರಕ್ತ ಸಿಗುತ್ತದೆ. ಇದೇ ರೀತಿ, ಅಂತರ್ಜಲ ಮರುಪೂರಣವಾದರೆ ಮಾತ್ರ ಮುಂದಿನ ಪೀಳಿಗೆಗೂ ನೀರು ಲಭ್ಯವಾಗುತ್ತದೆ. ರಾಜ್ಯದಲ್ಲಿ ಕೃಷಿಗೆ ಶೇ.67 ಅಂತರ್ಜಲವೇ ಆಧಾರ. ಆದರೆ ವರ್ಷದಿಂದ ವರ್ಷಕ್ಕೆ ಅಂತರ್ಜಲ ಕುಸಿಯುತ್ತಿರುವುದು ಆತಂಕವನ್ನು ಇಮ್ಮಡಿಗೊಳಿಸಿದೆ.
ರೈತರ ಆದಾಯ ದುಪ್ಪಟ್ಟುಗೊಳಿಸುವುದು ಸರ್ಕಾರದ ಉದ್ದೇಶ. ಅದಕ್ಕಾಗಿಯೇ ಸೆಕೆಂಡರಿ ಕೃಷಿ ನಿರ್ದೇಶನಾಲಯ ರೂಪಿಸಿದೆ. ಕೃಷಿ ಚಟುವಟಿಕೆ ಹೆಚ್ಚಲು ನೀರು ಪ್ರಮುಖವಾಗಿದೆ. ರಾಜ್ಯದ ಕೃಷಿ ಭೂಮಿಯಲ್ಲಿ ಶೇ.35 ಕೆಂಪುಮಣ್ಣು, ಶೇ.21 ಜಂಬು ಇಟ್ಟಿಗೆ ಪ್ರದೇಶವಿದೆ. ಇಂತಹ ಕಡೆ ನೀರು ಇಂಗುವುದಿಲ್ಲ. ಹೀಗಾಗಿ ಉಳಿದೆಡೆ ನೀರು ಇಂಗಿಸುವ ಸಲುವಾಗಿ ಜಲನಿಧಿ ರೂಪುಗೊಳ್ಳುತ್ತಿದೆ.
ಗುರಿ ಏನು?ಮುಂದಿನ ಐದು ವರ್ಷಗಳಲ್ಲಿ 35 ಸಾವಿರ ಕೋಟಿ ಲೀಟರ್​ ನೀರನ್ನು ಅಂತರ್ಜಲದಲ್ಲಿ ಸಂಗ್ರಹಿಸುವ ಮೂಲಕ ಮಳೆ ನೀರು ವ್ಯರ್ಥವಾಗಿ ಹರಿದು ಪೋಲಾಗುವುದನ್ನು ತಪ್ಪಿಸುವುದು ಜಲನಿಧಿಯ ಉದ್ದೇಶವಾಗಿದೆ.
ಏನಾಗಿದೆ ಸಮಸ್ಯೆ?ರಾಜ್ಯದ 19 ವರ್ಷಗಳ ಇತಿಹಾಸದಲ್ಲಿ 15 ವರ್ಷ ಬರಕ್ಕೆ ತುತ್ತಾಗಿದೆ. ಡೈನಮಿಕ್​ ಗ್ರೌಂಡ್​ ವಾಟರ್​ ರಿಸೋರ್ಸ್​ ಅಸೋಸಿಯೇಷನ್​ ಆ್​ ಇಂಡಿಯಾದ ಸಮೀೆಯಲ್ಲಿ 77 ತಾಲೂಕುಗಳಲ್ಲಿ ಅಂತರ್ಜಲ ಬಳಕೆ ಹೆಚ್ಚಾಗಿರುವುದು ಬೆಳಕಿಗೆ ಬಂದಿದೆ. ಅದರಲ್ಲೂ 8 ಜಿಲ್ಲೆಗಳಲ್ಲಿ ಶೇ.77 ಅಂತರ್ಜಲ ಕುಸಿದಿದೆ. 13 ಜಿಲ್ಲೆಗಳಲ್ಲಿ ಬರ ಇದೆ.
ರಾಜ್ಯದಲ್ಲಿ 2001ರಲ್ಲಿ ಬರಪೀಡಿತ ತಾಲೂಕುಗಳ ಸಂಖ್ಯೆ 105 ಇದ್ದದ್ದು 2011ಕ್ಕೆ 115 ತಾಲೂಕುಗಳಿಗೆ ತಲುಪಿದೆ. ರಾಜ್ಯದಲ್ಲಿ ಶೇ.41 ಜನ ತೀವ್ರ ಬರಪೀಡಿತ ಪ್ರದೇಶದಲ್ಲಿ ವಾಸಿಸುತ್ತಿದ್ದು ಗುಳೇ ಹೋಗುತ್ತಿದ್ದಾರೆ.
ಏನಿದು ಜಲನಿಧಿ?ಮಳೆ ನೀರು ಕೊಯ್ಲು ಯೋಜನೆ ವಿಸತ ಭಾಗವೇ ಜಲನಿಧಿ. ದಿಬ್ಬದಿಂದ ಕಣಿವೆಯ ತನಕ ನೀರು ಹರಿದು ಹೋಗದಂತೆ ತಡೆಯುವ ಮೂಲಕ ಇಂಗಿಸುವುದು ಒಟ್ಟಾರೆ ಉದ್ದೇಶವಾಗಿದೆ. ಅದಕ್ಕಾಗಿ ಕೇಂದ್ರ ಸರ್ಕಾರ, ವಿಶ್ವಬ್ಯಾಂಕ್​ ಹಾಗೂ ರಾಜ್ಯ ಸರ್ಕಾರದ ಹಣಕಾಸಿನ ನೆರವು ಬಳಸಿಕೊಳ್ಳಲಾಗುತ್ತದೆ.
ಎಷ್ಟು ಸಂಗ್ರಹ ಗುರಿ?ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ, ಇತರ ಯೋಜನೆ ಮೂಲಕ 5700 ನೀರು ಸಂಗ್ರಹಣಾ ವಿನ್ಯಾಸಗಳನ್ನು ಮುಂದಿನ 5 ವರ್ಷಗಳ ಅವಧಿಯಲ್ಲಿ ನಿಮಿರ್ಸಿ 21,570 ಕೋಟಿ ಲೀಟರ್​, ವಿಶ್ವಬ್ಯಾಂಕ್​ನ ರಿವಾರ್ಡ್​ ಯೋಜನೆಯಲ್ಲಿ 2000 ನೀರು ಸಂಗ್ರಹಣೆಯ ಯೋಜನೆಗಳಲ್ಲಿ 8600 ಕೋಟಿ ಲೀಟರ್​ ಹಾಗೂ ನರೇಗಾ ಯೋಜನೆಯಲ್ಲಿ 8767 ಕೃಷಿಹೊಂಡಗಳ ಮೂಲಕ 5093 ಕೋಟಿ ಲೀಟರ್​ ನೀರು ಸಂಗ್ರಹಣೆ ಮಾಡುವ ಬೃಹತ್​ ಗುರಿ ಹಾಕಿಕೊಳ್ಳಲಾಗಿದೆ.
ಎಷ್ಟು ವೆಚ್ಚ?ಯೋಜನೆಗೆ 1432 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ. ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಲ್ಲಿ 642.26 ಕೋಟಿ ರೂ., ರಿವಾರ್ಡ್​ ಯೋಜನೆಯಲ್ಲಿ 600 ಕೋಟಿ ರೂ., ನರೇಗಾದಲ್ಲಿ 190 ಕೋಟಿ ರೂ. ಬಳಸಲಾಗುತ್ತದೆ ಎಂದು ಜಲಾನಯನ ಇಲಾಖೆಯ ಅಧಿಕಾರಿಗಳು ವಿವರಿಸುತ್ತಾರೆ.
ಏನೇನು ಮಾಡಲಾಗುತ್ತದೆ?*ಜಮೀನಿನಲ್ಲಿ 3000 ಲೀಟರ್​ ಶೇಖರಣೆ ಸಾಮರ್ಥ್ಯದ ಬದು ನಿರ್ಮಾಣ*ಕೃಷಿ ಅರಣ್ಯ ಬೆಳೆಸುವುದು*ಬದುವಿನ ಮೇಲೆ ನ್ಯೂಟ್ರಿಷಿನಲ್​ ಗಾರ್ಡನ್​ ನಿರ್ಮಾಣ*ಮಳೆ ನೀರು ಹಿಡಿದಿಡಲು ಚೆಕ್​ ಡ್ಯಾಂ ಹಾಗೂ ನಾಲಾ ಬದು ನಿರ್ಮಾಣ*ನೀರು ಹರಿದು ಮಣ್ಣು ಕೊಚ್ಚಿ ಹೋಗುವುದನ್ನು ತಪ್ಪಿಸಲು ಕಲ್ಲಿನ ತಡೆಗೋಡೆ*ಬದುವಿನಲ್ಲಿ ಹುಲ್ಲು ಬೆಳೆಸುವುದು*ಭೂಮಿ ಇಲ್ಲದವರಿಗೆ ಸ್ವಸಹಾಯ ಸಂಗಳ ರಚನೆ, ಟೇಲರಿಂಗ್​, ಅಡಕೆ ಹಾಳೆ, ಅಣಬೆ ಬೇಸಾಯದ ತರಬೇತಿ
ಮಣ್ಣು ಎಷ್ಟು ನಷ್ಟ?ಬೆಳಗಾವಿ, ಉತ್ತರ ಕನ್ನಡ, ತುಮಕೂರು, ಶಿವಮೊಗ್ಗ, ರಾಯಚೂರು, ಕಲಬುರಗಿ, ಚಿತ್ರದುರ್ಗ, ವಿಜಯಪುರ, ಬಾಗಲಕೋಟೆ ಹಾಗೂ ಬಳ್ಳಾರಿ ಜಿಲ್ಲೆಗಳಲ್ಲಿ ಮಣ್ಣಿನ ಸಂರಕ್ಷಣೆ ಬಗ್ಗೆ ಅಧ್ಯಯನ ನಡೆದಿದೆ. ವರ್ಷಕ್ಕೆ 1 ಹೆಕ್ಟೇರ್​ನಲ್ಲಿ 10 ಮಿಲಿ ಗ್ರಾಮ್​ನಷ್ಟು ಮಣ್ಣು ಕೊಚ್ಚಿ ಹೋಗುತ್ತದೆ. ಒಂದು ಇಂಚಿನಷ್ಟು ಮಣ್ಣು ಉತ್ಪಾದನೆಗೆ 700 ವರ್ಷ ತೆಗೆದುಕೊಂಡರೆ, ಅದು ನೈಸಗಿರ್ಕವಾಗಿ ಲವತ್ತತೆ ಪಡೆಯಲು 3 ಸಾವಿರ ವರ್ಷ ಬೇಕಾಗುತ್ತದೆ. ಆದ್ದರಿಂದ ಮಣ್ಣನ್ನು ಕಾಪಾಡುವುದು ಮುಖ್ಯವಾಗಿದೆ. ಜಲನಿಧಿಯಲ್ಲಿ ಆ ಉದ್ದೇಶವೂ ಇದೆ.
ಆದಾಯ ದ್ವಿಗುಣ ಹೇಗೆ?ಬರಗಾಲಕ್ಕೆ ತುತ್ತಾಗುವುದರಿಂದ ರೈತರು ಸಂಕಷ್ಟಕ್ಕೆ ಒಳಗಾಗುತ್ತಾರೆ. ಆದ್ದರಿಂದ ರೈತರ ಸಾಲ ಮೂರು ಪಟ್ಟು ಜಾಸ್ತಿಯಾಗುತ್ತಿದೆ. ಆದಾಯ ಕಡಿಮೆಯಾಗುತ್ತಿದೆ. ಅಂತರ್ಜಲ ಮರುಪೂರಣವಾದರೆ ನಿರಂತರ ಬೇಸಾಯಕ್ಕೆ ಅನುಕೂಲವಾಗುತ್ತದೆ. ಅದರಿಂದ ಆದಾಯ ಸಹ ಹೆಚ್ಚಾಗಲು ಸಹಕಾರಿ.
ಏನೇನು ಉಪಯೋಗ?*ಬರಗಾಲಕ್ಕೆ ತುತ್ತಾಗುವುದನ್ನು ತಪ್ಪಿಸಬಹುದು*ರೈತರ ಗುಳೆ ನಿಲ್ಲಿಸಬಹುದು*ನಿರಂತರ ಕೃಷಿ ಚಟುವಟಿಕೆಗಳು*ಅಂತಾರಾಜ್ಯ ಜಲ ವಿವಾದಗಳಿಗೆ ಬ್ರೇಕ್​*ಮಣ್ಣಿನ ಸಂರಕ್ಷಣೆ ಹಾಗೂ ಆರೋಗ್ಯ ಕಾಪಾಡುವುದು*ಕಾಡನ್ನು ಬೆಳೆಸುವ ಮೂಲಕ ಪರಿಸರ ಸಮತೋಲನ*ರೈತರಿಗೆ ಪರ್ಯಾಯ ಜೀವನೋಪಾಯಕ್ಕೂ ಅನುಕೂಲ
ಹೆಚ್ಚು ಬರಗಾಲಬೆಳಗಾವಿ, ಬಳ್ಳಾರಿ, ಬೀದರ್​, ವಿಜಯಪುರ, ಚಿಕ್ಕಮಗಳೂರು, ಚಿತ್ರದುರ್ಗ, ಧಾರವಾಡ, ಕಲಬುರಗಿ, ಕೋಲಾರ, ಹಾಸನ, ಹಾವೇರಿ, ರಾಮನಗರ ಹಾಗೂ ತುಮಕೂರು
ಸರ್ಕಾರ ರೈತರ ಆದಾಯ ದ್ವಿಗುಣಕ್ಕೆ ಪೂರಕವಾಗಿ ಅನೇಕ ಕಾರ್ಯಕ್ರಮ ರೂಪಿಸುತ್ತಿದೆ. ಅದರಲ್ಲಿ ಅಂತರ್ಜಲ ವೃದ್ಧಿಯ ಮೂಲಕ ಕೃಷಿ ಚಟುವಟಿಕೆ ಹೆಚ್ಚು ಮಾಡುವುದು ಉದ್ದೇಶ. ಅದಕ್ಕಾಗಿಯೇ ವಿಶೇಷವಾಗಿ ಜಲನಿಧಿ ಕಾರ್ಯಕ್ರಮ ರೂಪಿಸಲಾಗಿದೆ. ಮುಂದಿನ ಪೀಳಿಗೆಗೂ ನೀರನ್ನು ಸಂರಸಿಡುವ ಉದ್ದೇಶವೂ ಇದರಲ್ಲಿದೆ.|ಬಿ.ಸಿ. ಪಾಟೀಲ್​,ಕೃಷಿ ಸಚಿವ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 2 =
Remember me
