ಎಸ್​ಎಸ್​ಎಲ್​ಸಿ, ಪಿಯುಸಿ ಸೇರಿ ಹಲವು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ವಿದ್ಯಾರ್ಥಿ-ಅಭ್ಯರ್ಥಿಗಳ ಪಾಲಿನ ದಾರಿದೀಪವಾಗಿರುವ ‘ವಿಜಯವಾಣಿ ವಿದ್ಯಾರ್ಥಿಮಿತ್ರ’, ಪ್ರತಿ ವರ್ಷದಂತೆ ಈ ಬಾರಿಯೂ ದ್ವಿತೀಯ ಪಿಯುಸಿಯಲ್ಲಿ ಸಾಕಷ್ಟು ವಿದ್ಯಾರ್ಥಿಗಳು ಉತ್ತಮ ಅಂಕ ಗಳಿಸಲು ನೆರವಾಗಿದೆ. ತಮ್ಮ ಈ ಸಾಧನೆಗೆ ಸಹಕಾರಿಯಾದ ‘ವಿದ್ಯಾರ್ಥಿ ಮಿತ್ರ’ನಿಗೆ ವಿದ್ಯಾರ್ಥಿಗಳು ಧನ್ಯವಾದ ಅರ್ಪಿಸಿದ್ದಾರೆ.
ಕರೇಗೌಡರ ಕಲೆಗೆ ನೆರವಾದ ವಿದ್ಯಾರ್ಥಿ ಮಿತ್ರ
ಬಳ್ಳಾರಿ: ವಿಜಯವಾಣಿ ‘ವಿದ್ಯಾರ್ಥಿ ಮಿತ್ರ’ದ ಜತೆಗೆ ಬೋಧಕರ ಸಹಕಾರದಿಂದ 594 ಅಂಕಗಳೊಂದಿಗೆ ಪಿಯು ಕಲಾವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ ಜಿಲ್ಲೆಯ ಕೊಟ್ಟೂರಿನ ಇಂದು ಪಿಯು ಕಾಲೇಜಿನ ಕರೇಗೌಡ ದಾಸನಗೌಡ. ಇವರ ತಂದೆ ಡಿ. ಕೊಟ್ರೇಶ, ತಾಯಿ ಡಿ. ಶಾಂತಮ್ಮ ಕೃಷಿಕರು. ಹೂವಿನ ಹಡಗಲಿಯ ಮಹಾಜನದಹಳ್ಳಿಯಲ್ಲಿ 3 ಎಕರೆ ಜಮೀನಿದ್ದು, ಮೆಕ್ಕೆಜೋಳ-ಸೂರ್ಯಕಾಂತಿ ಬೆಳೆಯುತ್ತಾರೆ. ರಜೆಯಲ್ಲಿ ಕರೇಗೌಡ ಕೂಡ ಕೃಷಿ ಚಟುವಟಿಕೆಯಲ್ಲಿ ತಂದೆ-ತಾಯಿಗೆ ನೆರವಾಗುತ್ತಾರೆ. ಇವರ ಅಕ್ಕ ಶ್ವೇತಾ ಕೊಟ್ಟೂರಿನ ತಹಸಿಲ್ ಕಚೇರಿಯಲ್ಲಿ ಗ್ರಾಮ ಲೆಕ್ಕಾಧಿಕಾರಿಯಾದ್ದರಿಂದ ಕೊಟ್ಟೂರಿನಲ್ಲಿ ಪಿಯುಸಿ ವಿದ್ಯಾಭ್ಯಾಸ ಮಾಡಿದ್ದಾರೆ. ಕರೆಸ್ಪಾಂಡೆನ್ಸ್ ಮೂಲಕ ಬಿಎ ಪ್ರವೇಶ ಪಡೆದು ಕೆಎಎಸ್ ಪರೀಕ್ಷೆ ಬರೆಯುವ ಗುರಿ ಹೊಂದಿದ್ದಾರೆ. ಕಾಲೇಜಿಗೆ ಹೋದರೆ ಕೆಎಎಸ್ ಪರೀಕ್ಷೆ ಬಗ್ಗೆ ಗಮನಹರಿಸಲು ಆಗುವುದಿಲ್ಲ ಎಂಬುದು ಇವರ ಅಭಿಪ್ರಾಯ.
ದ್ವಿತೀಯ ಪಿಯು ಪರೀಕ್ಷೆಯಲ್ಲಿ ಫೇಲ್: ಕಳೆನಾಶಕ ಸೇವಿಸಿ ವಿದ್ಯಾರ್ಥಿನಿ ಆತ್ಮಹತ್ಯೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − 9 =
Remember me
