ಶಿವಮೊಗ್ಗ:ಶಿಕಾರಿಪುರದಲ್ಲಿ ಬಿಜೆಪಿ ಅಭ್ಯರ್ಥಿ ವಿಜಯೇಂದ್ರ ವಿರುದ್ಧ ಎದುರಾಳಿಗಳು ಒಂದಾಗಿದ್ದಾರೆ. ದಿನೇ ದಿನೇ ವಿಜಯೇಂದ್ರ ಎದುರಾಳಿಗಳು ಕಾಂಗ್ರೆಸ್ ಬಂಡಾಯ ಅಭ್ಯರ್ಥಿಗೆ ಬೆಂಬಲ ಘೋಷಿಸುತ್ತಿದ್ದಾರೆ.
ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ನಾಗರಾಜ್ ಗೌಡಗೆ ವ್ಯಾಪಕ ಬೆಂಬಲ ಸಿಕ್ಕಿದ್ದು. ನಾಮಪತ್ರ ವಾಪಸ್ ಪಡೆದು, ಬೆಂಬಲ ನೀಡುವುದಾಗಿ ರಾಘವೇಂದ್ರ ನಾಯಕ್ ಘೋಷಿಸಿದ್ದಾರೆ. ಇವರು ಜಿ.ಪಂ ಮಾಜಿ ಸದಸ್ಯ ನರಸಿಂಗ ನಾಯಕ್ ಪುತ್ರರಾಗಿದ್ದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೂಡ ಹೌದು.
ಇದನ್ನೂ ಓದಿ:ನಮಗೆ ಸಿದ್ದರಾಮಯ್ಯ ಜತೆ ಒಳ ಒಪ್ಪಂದದ ಅವಶ್ಯಕತೆ ಇಲ್ಲ: ಬಿ.ವೈ. ವಿಜಯೇಂದ್ರ
ರಾಘವೇಂದ್ರ ನಾಯಕ್ ಕಾಂಗ್ರೆಸ್ ಪಕ್ಷದ ಟಿಕೆಟ್ ಸಿಗದೇ ಪಕ್ಷೇತರವಾಗಿ ಸ್ಫರ್ಧಿಸಲು ಮುಂದಾಗಿದ್ದರು. ಆದರೆ ಇದೀಗ ವಿಜಯೆಂದ್ರರನ್ನು ಸೋಲಿಸಲು ನಾಮಪತ್ರ ವಾಪಸ್ ಪಡೆಯಲು ನಿರ್ಧಾರ ಮಾಡಿದ್ದಾರೆ. ಈ ಮೂಲಕ ನಾಗರಾಜ್ ಗೌಡಗೆ ರಾಘವೇಂದ್ರ ನಾಯಕ್ ಬೆಷರತ್ ಬೆಂಬಲ ನೀಡಿದ್ದಾರೆ.
ಇದಾದ ಮೇಲೆ, ಜೆಡಿಎಸ್ ಬಳಿಕ ಪಕ್ಷೇತರ ಅಭ್ಯರ್ಥಿಯಿಂದ ನಾಗರಾಜ್ ಗೌಡಗೆ ಬೆಂಬಲ ಸಿಕ್ಕಿದ್ದು. ಶಿಕಾರಿಪುರದಲ್ಲಿ ಅಭ್ಯರ್ಥಿ ಹಾಕದೇ ಜೆಡಿಎಸ್ ಬೆಂಬಲ ವಿಜಯೇಂದ್ರ ವಿರುದ್ಧ ನಿಂತವರಿಗೆ ಸಿಕ್ಕಿದೆ. ಈ ಮೂಲಕ ಎದುರಾಳಿಗಳು ವಿಜಯೇಂದ್ರಗೆ ಪುಲ್ ಟೆನ್ಷನ್ ನೀಡುತ್ತಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty + seven =
Remember me
