ಬೆಂಗಳೂರು:ವಿಧಾನಸಭೆ ಚುನಾವಣೆಯಲ್ಲಿ ಉಂಟಾದ ಸೋಲಿನ ಬಳಿಕ ಮಂಕಾಗಿದ್ದ ಮತ್ತು ಸರ್ಕಾರವನ್ನು ಎದುರಿಸಲು ಸಾಧ್ಯವಾಗದಷ್ಟು ಮುರುಟಿ ಕುಳಿತಿದ್ದ ರಾಜ್ಯ ಬಿಜೆಪಿಯ ನೊಗ ಹೊತ್ತ ಬಿ.ವೈ.ವಿಜಯೇಂದ್ರ ಮೊದಲ ದಿನದಿಂದಲೇ ತಮ್ಮ ಕಾರ್ಯಶೈಲಿಯನ್ನು ನಾಡಿಗೆ ಪರಿಚಯಿಸಿದರು.
ಪಕ್ಷದ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯಾಧ್ಯಕ್ಷ ಸ್ಥಾನ ವಹಿಸಿಕೊಂಡ ಬಳಿಕ ಮಾತನಾಡಿದ ವಿಜಯೇಂದ್ರ, ರಾಷ್ಟ್ರೀಯ ನಾಯಕರು, ಸಂಘ ಪರಿವಾರದ ಪ್ರಮುಖರು, ಕಾರ್ಯಕರ್ತರು ಇಟ್ಟ ವಿಶ್ವಾಸಕ್ಕೆ ಚ್ಯುತಿ ಬಾರದಂತೆ ನಡೆದುಕೊಳ್ಳುತ್ತೇನೆ. ಎಲ್ಲ ಹಿರಿಯ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಸೋಲಿನ ಕಹಿ ಒಪ್ಪಿಕೊಂಡು ಮುಂದಿನ ಜಯಕ್ಕೆ ಹೋರಾಡುತ್ತೇನೆ. ಆ ಜಾತಿ ಈ ಜಾತಿ ಎನ್ನದೇ ರಾಜ್ಯದ ಉದ್ದಗಲಕ್ಕೂ ಪ್ರವಾಸ ಮಾಡಿ, ಎಲ್ಲರನ್ನೂ ಒಗ್ಗೂಡಿಸಿಕೊಂಡು ಸಾಗುತ್ತೇನೆ ಎಂದು ತಿಳಿಸಿ, ಎಲ್ಲರನ್ನೂ ಒಳಗೊಳ್ಳುವ ನಾಯಕನಾಗಲು ಸಹಕಾರ ಯಾಚಿಸಿದರು.
ನಮ್ಮ ಸರ್ಕಾರದ ಮೇಲೆ 40 ಪರ್ಸೆಂಟ್ ಕಮೀಷನ್ ಆರೋಪ ಮಾಡಿದ್ದ ಕಾಂಗ್ರೆಸ್, ಈಗ ಅದನ್ನು ಅನುಷ್ಠಾನ ಮಾಡುತ್ತಿದೆ ಎಂದು ಹರಿಹಾಯ್ದ ವಿಜಯೇಂದ್ರ, ತಾವು ಕಠಿಣ ಎದುರಾಳಿಯಾಗಿರುತ್ತೇನೆ ಎಂದು ಆಡಳಿತ ಪಕ್ಷಕ್ಕೆ ಎಚ್ಚರಿಸಿದರು.
ಬರಕ್ಕೆ ಸ್ಪಂದನೆ ಇಲ್ಲ:ರಾಜ್ಯದಲ್ಲಿ ಭೀಕರ ಬರಗಾಲ ಸರ್ಕಾರ ಸ್ಪಂದಿಸುತ್ತಿಲ್ಲ ಎಂದು ಹರಿಹಾಯ್ದರು. ನಾವೇನು ಆಪರೇಷನ್ ಕಮಲ ಮಾಡಲ್ಲ. ಆಡಳಿತ ಪಕ್ಷದ ಶಾಸಕರೇ ರಸ್ತೆಯಲ್ಲಿ ಓಡಾಡದ ಸ್ಥಿತಿ ನಿರ್ವಣವಾಗಿದೆ. ಶಾಸಕರಿಗೆ ಯಾವುದೇ ಅನುದಾನ ಸಿಗುತ್ತಿಲ್ಲ. ದುಷ್ಟ ಸರ್ಕಾರಕ್ಕೆ ಜನರೇ ಪಾಠ ಕಲಿಸುತ್ತಾರೆ ಎಂದರು.
ತಕ್ಷಣದಿಂದಲೇ ಚಟುವಟಿಕೆ, ಮಠಗಳಿಗೆ ಭೇಟಿ:ಬಿಜೆಪಿ ರಾಜ್ಯಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಮರು ಕ್ಷಣವೇ ತಮ್ಮ ಕಾರ್ಯಚಟುವಟಿಕೆ ಆರಂಭಿಸಿರುವ ವಿಜಯೇಂದ್ರ, ತಮ್ಮ ತಂದೆಯ ಹಾದಿಯಲ್ಲಿ ಸಾಗುವ ಸುಳಿವು ನೀಡಿದ್ದಾರೆ. ಗುರುವಾರ ಪಕ್ಷದ ಹಿರಿಯ ನಾಯಕ ಜಿ.ಎಚ್.ತಿಪ್ಪಾರೆಡ್ಡಿ ಅವರನ್ನು ಭೇಟಿ ಮಾಡಲಿದ್ದಾರೆ. ಬಳಿಕ ಮುರುಘರಾಜೇಂದ್ರ ಮಠ, ಕೃಷ್ಣ ಯಾದವನಂದ ಮಠ, ಮಾದರ ಚನ್ನಯ್ಯ ಮಠ, ಶ್ರೀ ಸಿದ್ದರಾಮೇಶ್ವರ ಸಂಸ್ಥಾನ ಭೋವಿ ಗುರುಪೀಠ, ಸಿರಿಗೆರೆ ಬ್ರಹನ್ಮಠ, ಚಿನ್ಮೂಲಾದ್ರಿ ಭಗೀರಥ ಗುರುಪೀಠ, ಸಾಣೆಹಳ್ಳಿ ತರಳಬಾಳು ಬೃಹನ್ಮಠ ಶಾಖಾ ಮಠ, ಕುಂಚಿಟಿಗ ಮಹಾ ಸಂಸ್ಥಾನ, ಕನಕ ಗುರುಪೀಠಕ್ಕೆ ಭೇಟಿ ನೀಡಲಿದ್ದಾರೆ.
ಕುಟುಂಬದಲ್ಲಿ ಸಡಗರ:ವಿಜಯೇಂದ್ರ ಕುಟುಂಬದಲ್ಲಿ ಸಂತಸ ಮನೆಮಾಡಿದೆ. ನಮ್ಮ ತಂದೆ ಆ ಕಾಲದಲ್ಲೇ ಪಕ್ಷ ಸಂಘಟನೆಗಾಗಿ ಹೋರಾಟ ಮಾಡಿದ್ದರು. ಈಗ ನನ್ನ ಸಹೋದರನಿಗೆ ಪಕ್ಷದ ನಾಯಕರು ಜವಾಬ್ದಾರಿ ನೀಡಿರುವುದು ಖುಷಿ ತಂದಿದೆ ಎಂದು ಬೆಂಗಳೂರಿನಲ್ಲಿ ಅವರ ಸಹೋದರಿ ಅರುಣಾದೇವಿ ಸಂತಸ ವ್ಯಕ್ತಪಡಿಸಿದರು.
ಬೆಂಗಳೂರು: ಎಲ್ಲರೂ ಒಗ್ಗಟ್ಟಾಗಿ ನಡೆದರೆ ಲೋಕಸಭೆ ಚುನಾವಣೆಯಲ್ಲಿ 28 ಸ್ಥಾನಗಳನ್ನು ಗೆಲ್ಲಬಹುದು. ವಿಜಯೇಂದ್ರ ಎಲ್ಲರನ್ನೂ ಒಟ್ಟಾಗಿ ಕರೆದುಕೊಂಡು ಹೋಗುವ ವಿಶ್ವಾಸ ಇದೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಸೂಕ್ತ ಸಮಯದಲ್ಲಿ ವಿಜಯೇಂದ್ರ ಅಧ್ಯಕ್ಷರಾಗಿ ಪದಗ್ರಹಣ ಮಾಡಿದ್ದಾರೆ. ವಿಧಾನಸಭೆ ಚುನಾವಣೆ ನಂತರ ಬಿಜೆಪಿಗೆ ದೊಡ್ಡ ಶಕ್ತಿ, ಉತ್ಸಾಹ ಬಂದಿದೆ. ಕ್ರಿಕೆಟ್ ವಿಶ್ವಕಪ್​ನಲ್ಲಿ ಭಾರತ ಗೆಲ್ಲುವ ರೀತಿಯಲ್ಲೇ ವಿಜಯೇಂದ್ರ ಸಾರಥ್ಯದಲ್ಲಿ ಬಿಜೆಪಿ 28 ಲೋಕಸಭಾ ಕ್ಷೇತ್ರ ಪಡೆದುಕೊಳ್ಳುವ ವಿಶ್ವಾಸವಿದೆ. ವಿಜಯೇಂದ್ರಗೆ ಯಶಸ್ಸು ಸಿಗಲಿ ಎಂದು ಹಾರೈಸುತ್ತೇನೆ ಎಂದರು.
ಬೆಟ್ಟದಷ್ಟು ಸವಾಲು:ಉಪ ಚುನಾವಣೆಗಳಲ್ಲಿ ತಮ್ಮ ಸಾಮರ್ಥ್ಯ ತೋರಿಸಿ ರಾಷ್ಟ್ರೀಯ ನಾಯಕರ ಗಮನ ಸೆಳೆದಿದ್ದ ಬಿ.ವೈ ವಿಜಯೇಂದ್ರ ಮುಂದೆ ಬೆಟ್ಟದಷ್ಟು ಸವಾಲಿದೆ. ಲೋಕಸಭಾ ಚುನಾವಣೆಗೆ ಸಂಘಟನೆಯನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯತಂತ್ರ ರೂಪಿಸ ಬೇಕಾಗಿದೆ. ರಾಜ್ಯದುದ್ದಗಲಕ್ಕೂ ತಮ್ಮ ನೆಟ್​ವರ್ಕ್ ಸಕ್ರಿಯಗೊಳಿ, ವರಿಷ್ಠರ ಜತೆ ಉತ್ತಮ ಸಂಪರ್ಕ ಇಟ್ಟುಕೊಂಡು ಸಮರ್ಥ ಪದಾಧಿಕಾರಿಗಳ ನೇಮಕ ಮಾಡಿಕೊಳ್ಳಬೇಕಾಗಿದೆ.
ಹಲವಾರು ತಿಂಗಳಿಂದ ಸೋಲಿನ ನಂತರ ಹೊಸ ಆಯ್ಕೆ ನಿರೀಕ್ಷೆಯಲ್ಲಿದ್ದೆವು. ಕಳೆದದ್ದನ್ನು ಕಳೆದ ಜಾಗದಲ್ಲೇ ಹುಡುಕಬೇಕು. ಒಟ್ಟಿಗೆ ತೆದುಕೊಂಡು ಹೋಗಬೇಕಾದ ವಿಶ್ವಾಸದ ರಾಜಕಾರಣ ಮಾಡಬೇಕಿದೆ. ಉಗುಳುವುದಕ್ಕಿಂತ ನುಂಗಿಕೊಳ್ಳುವ ಕೆಲಸಮಾಡಬೇಕು. ವಿಜಯೇಂದ್ರಗೆ ಆ ಸಾಮರ್ಥ್ಯ ಇದೆ.
| ಸದಾನಂದಗೌಡ, ಸಂಸದ
ಮತ್ತೆ ಮೋದಿ ಪ್ರಧಾನಿಯಾಗಲು ಕರ್ನಾಟಕದಲ್ಲಿ 28 ಸ್ಥಾನ ಗೆಲ್ಲೋಣ. ಒಟ್ಟಾಗಿ ಕೆಲಸ ಮಾಡೋಣ. ಇಡೀ ರಾಜ್ಯ ಅಚ್ಚರಿಪಡುವ ಫಲಿತಾಂಶ ತರೋಣ.
| ಕೆ.ಎಸ್.ಈಶ್ವರಪ್ಪ, ಮಾಜಿ ಡಿಸಿಎಂ
ವಿಧಾನಸಭೆ ಸೋಲಾದ ಹಿನ್ನೆಲೆಯಲ್ಲಿ ಕಾರ್ಯಕರ್ತರು ಉತ್ಸಾಹ ಇರಲಿಲ್ಲ. ಈಗ ಹೊರ ಬಂದು ಸಂಭ್ರಮಿಸುತ್ತಿ ದ್ದಾರೆ. ಹಿನ್ನಡೆಗೆ ಹಲವು ಕಾರಣ ಇರಬಹುದು. ಲೋಕಸಭಾ ಚುನಾವಣೆಯಲ್ಲಿ 28ಸ್ಥಾನ ಗೆಲ್ಲಬೇಕು.
| ಗೋವಿಂದ ಕಾರಜೋಳ, ಮಾಜಿ ಡಿಸಿಎಂ
ಬೆಂಗಳೂರು:ವಿಧಾನಸಭಾ ಚುನಾವಣೆಯಲ್ಲಿ ಹೀನಾಯವಾಗಿ ಸೋತು ಜಡಸ್ಥಿತಿಯಲ್ಲಿದ್ದ ಬಿಜೆಪಿ ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸು ಕಾಣುತ್ತಿದೆ. ಪಕ್ಷದ ನೂತನ ರಾಜ್ಯಾದ್ಯಕ್ಷ ವಿಜಯೇಂದ್ರ ಹೋದಲ್ಲೆಲ್ಲ ಪಕ್ಷದ ಕಾರ್ಯಕರ್ತರಲ್ಲಿ ಹೊಸ ಚೈತನ್ಯ ಕಂಡು ಬರುತ್ತಿದೆ. ಮಂಗಳವಾರ ರಾತ್ರಿಯಿಂದಲೇ ಪಕ್ಷದ ಕಚೇರಿಯಲ್ಲಿ ಹೋಮ, ಹವನ, ವಿವಿಧ ಪೂಜೆಗಳನ್ನು ಹಮ್ಮಿಕೊಳ್ಳಲಾಗಿತ್ತು.
ಶಿಕಾರಿಪುರ ಜನತೆಗೆ ಕೃತಜ್ಞತೆ: ಶಿಕಾರಿಪುರ ತಾಲೂಕಿನ ಜನತೆ ಆಶೀರ್ವಾದಿಂದ ಮೊದಲ ಬಾರಿಗೆ ನಾನು ಜನ ಪ್ರತಿನಿಧಿಯಾಗಿ ಆಯ್ಕೆಯಾಗಿ ಶಾಸಕನಾಗಿ, ಈಗ ಅಧ್ಯಕ್ಷ ಸ್ಥಾನವನ್ನು ಏರಿದ್ದೇನೆ. ಈ ಮಹತ್ವದ ಸ್ಥಾನ ಸಿಗಲು ಕಾರಣರಾದ ಶಿಕಾರಿಪುರದ ಮತದಾರರಿಗೆ ಮತ್ತು ಪಕ್ಷ ಸಂಘಟನೆ ಮಾಡಿದ ಹಿರಿಯರಿಗೆ ಈ ವೇಳೆ ಕೃತಜ್ಞತೆ ಸಲ್ಲಿಸಿದರು.
ಅಭಿನಂದನೆಗಳ ಸುರಿಮಳೆ:ಬೆಳಗ್ಗೆ ಡಾಲರ್ಸ್ ಕಾಲೋನಿ ಧವಳಗಿರಿ ನಿವಾಸದಲ್ಲಿ ವಿಶೇಷ ಪೂಜೆ ಸಲ್ಲಿಸಿ ನಂತರ ಯಡಿಯೂರಪ್ಪ ಅವರ ಆಶೀರ್ವಾದ ಪಡೆದು ಪಕ್ಷದ ಕಚೇರಿಗೆ ವಿಜಯೇಂದ್ರ ಆಗಮಿಸಿದರು. ಈ ವೇಳೆ ಹಿರಿಯ ನಾಯಕರು, ಕಾರ್ಯಕರ್ತರು ಹೂಗುಚ್ಛ ನೀಡಿ ಅಭಿನಂದನೆಗಳ ಸುರಿಮಳೆ ಗೈದರು. ಮೆರವಣಿಯ ಮೂಲಕ ಅವರನ್ನು ಕರೆತಂದಾಗ ಕಾರ್ಯಕರ್ತರ ಉತ್ಸಾಹ ಮೇರೆ ಮೀರಿತ್ತು.
ಕಾರ್ಯಕ್ರಮಕ್ಕೆ ಗೈರಾದವರು:ವಿಜಯೇಂದ್ರ ಅಧಿಕಾರ ಸ್ವೀಕಾರ ಕಾರ್ಯಕ್ರಮದಿಂದ ಕೆಲವು ನಾಯಕರು ದೂರ ಉಳಿದರು. ಇವರಲ್ಲಿ ಮಾಜಿ ಸಚಿವ ಸಿ.ಟಿ.ರವಿ ಪಂಚರಾಜ್ಯ ಚುನಾವಣೆ ಪ್ರಚಾರದ ನೆಪ ಹೇಳಿ ಅಂತರ ಕಾಯ್ದುಕೊಂಡರೆ, ವಿ.ಸೋಮಣ್ಣ, ರಮೇಶ್ ಜಾರಕಿಹೊಳಿ, ಬಸನಗೌಡ ಪಾಟೀಲ್ ಯತ್ನಾಳ್, ಅರವಿಂದ್ ಬೆಲ್ಲದ್ ಗೈರಾದ ಪ್ರಮುಖರು. ಸಿ.ಟಿ ರವಿ ಹಾಗೂ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಕಾರ್ಯಕ್ರಮವನ್ನು ಲೈವ್​ನಲ್ಲಿ ವೀಕ್ಷಿಸಿದರು.
ಶಮಿಗೆ ಏಳು ವಿಕೆಟ್: ಏನಿದು ಅಚ್ಚರಿ.. ಆತನೊಬ್ಬ ನಿನ್ನೆ ಕಂಡ ಕನಸು ಇಂದು ನಿಜವಾಯ್ತು!

ತಕ್ಷಣದಿಂದಲೇ ಜಾರಿಗೆ ಬರುವಂತೆ ಆರ್​ಬಿಐನಿಂದ ಮಹತ್ವದ ಸೂಚನೆ: ಸಾಲ ನೀಡದಂತೆ ನಿರ್ದೇಶನ; ಯಾರಿಗೆ, ಯಾಕೆ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × two =
Remember me
