ತುಮಕೂರು:ಕಳೆದೊಂದು ತಿಂಗಳಿನಿಂದ ಶಿರಾ ಉಪಸಮರದಲ್ಲಿ ಹಗಲಿರುಳು ತೊಡಗಿಸಿಕೊಂಡಿದ್ದ ಸಿಎಂ ಯಡಿಯೂರಪ್ಪ ಅವರ ಪುತ್ರ ಬಿ.ವೈ.ವಿಜಯೇಂದ್ರ ಸೋಮವಾರ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡುವ ಮೂಲಕ ರಿಲ್ಯಾಕ್ಸ್ ಮೂಡ್‌ನಲ್ಲಿದ್ದಂತೆ ಕಂಡುಬಂದರು.
ಉಪಚುನಾವಣಾ ಕಾರ್ಯಭಾರದಿಂದ ಸೋಮವಾರ ಸ್ವಲ್ಪ ಬಿಡುವು ಪಡೆದ ವಿಜಯೇಂದ್ರ ಮತ್ತು ಟೀಂ, ತುಮಕೂರು ತಾಲೂಕಿನ ಮಂದರಗಿರಿ ಜೈನ ಬಸದಿ ಬೆಟ್ಟಕ್ಕೆ ಭೇಟಿ ನೀಡಿತು. ನಂತರ ನಗರದ ರಾಮಕೃಷ್ಣ ಆಶ್ರಮ, ಸಾಯಿಬಾಬ ಮಂದಿರಕ್ಕೆ ಭೇಟಿ ನೀಡಿದ ವಿಜಯೇಂದ್ರ ಮೊಗದಲ್ಲಿ ಯುದ್ಧ ಗೆದ್ದಷ್ಟೇ ನಗುವಿತ್ತು.
ಟೆಂಪಲ್ ರನ್ ವೇಳೆ ವಿಜಯೇಂದ್ರಗೆ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ, ನಗರ ಶಾಸಕ ಜಿ.ಬಿ. ಜ್ಯೋತಿಗಣೇಶ್, ಹಾಸನ ಶಾಸಕ ಪ್ರೀತಂಗೌಡ, ಜಿಲ್ಲಾಧ್ಯಕ್ಷ ಬಿ.ಸುರೇಶ್‌ಗೌಡ, ತಮ್ಮೇಶ್ ಗೌಡ ಮತ್ತಿತರರು ಸಾಥ್ ನೀಡಿದರು.
ಫಾರ್ಮ್ ಹೌಸನಲ್ಲೇ ವಾಸ್ತವ್ಯ!:ಶಿರಾ ಕ್ಷೇತ್ರಕ್ಕೆ ಹೊಂದಿಕೊಂಡಿರುವ ಬೆಳ್ಳಾವಿಯ ಫಾರ್ಮ್ ಹೌಸ್‌ನಲ್ಲೇ ವಿಜಯೇಂದ್ರ ವಾಸ್ತವ್ಯ ಹೂಡಿದ್ದು, ಮತದಾನ ಮುಗಿಯೋವರೆಗೆ ಕ್ಷಣಕ್ಷಣದ ಮಾಹಿತಿಯನ್ನು ಪಡೆಯಲಿದ್ದಾರೆ. ತಮಗೆ ವಹಿಸಿರುವ ಜವಾಬ್ದಾರಿಯನ್ನು ಪೂರ್ಣಗೊಳಿಸಿ ವಿಜಯೇಂದ್ರ ಹೊರಡಲಿದ್ದಾರೆ. ಬಿಜೆಪಿಯ ವಾರ್‌ರೂಂನಲ್ಲಿ ರಾತ್ರಿವರೆಗೆ ಚುನಾವಣಾ ಕಾರ್ಯತಂತ್ರ ಮುಂದುವರಿದಿದ್ದವು.
VIDEO| ಸಮಾವೇಶದಲ್ಲೇ ಕುಸಿದುಬಿದ್ದ ಜೆಡಿಎಸ್ ಅಭ್ಯರ್ಥಿ ಅಮ್ಮಾಜಮ್ಮ!

ನಾನು ಕಳೆದುಕೊಂಡ ಅರಿಶಿನ-ಕುಂಕುಮವನ್ನು ಮತದ ರೂಪದಲ್ಲಿ ಭಿಕ್ಷೆ ನೀಡಿ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 + eight =
Remember me
