ಕನ್ನಡದ ನಂ.1 ದಿನಪತ್ರಿಕೆ ‘ವಿಜಯವಾಣಿ’ಯಲ್ಲಿ ಪ್ರಕಟವಾಗಿದ್ದ ವಿಶೇಷ ವರದಿಯೊಂದು ರಷ್ಯಾದ ಗಮನ ಸೆಳೆದಿದೆ. ‘ವಲಸೆ ಬಂದು ಪ್ರಾಣತೆತ್ತ ರಷ್ಯಾ ಹಕ್ಕಿ’ ಶೀರ್ಷಿಕೆಯಡಿ ಗಂಡು ‘ಆಸ್ಪ್ರೆ’ ಹಕ್ಕಿ ಸಾವಿನ ಕುರಿತು ‘ವಿಜಯವಾಣಿ’ 2019ರ ನ.28ರಂದು ವಿಶೇಷ ವರದಿ ಪ್ರಕಟಿಸಿತ್ತು.
ವಲಸೆ ಪಕ್ಷಿಗಳ ಸಾವಿಗೆ ಆಧುನಿಕ ತಂತ್ರಜ್ಞಾನ ಯಾವ ರೀತಿ ಕಾರಣವಾಗಿದೆ ಎಂಬ ಚರ್ಚೆಯನ್ನು ವರದಿ ಹುಟ್ಟುಹಾಕಿತ್ತು. ವಿಜಯವಾಣಿಯ ಈ ವರದಿಯನ್ನು ಆಧರಿಸಿ ರಷ್ಯಾದ ಮೂರು ವೆಬ್​ಸೈಟ್​ಗಳಲ್ಲಿ ಲೇಖನ ಪ್ರಕಟವಾಗಿದ್ದು, ವಿಜಯವಾಣಿ ವರದಿಯ ಚಿತ್ರವನ್ನು ಲಗತ್ತಿಸಿರುವುದು ವಿಶೇಷ.
http://www.trk7.ru/news/103711.html ಮತ್ತು https://krasrab.ru/news/priroda/6346 ವೆಬ್​ಸೈಟ್​ಗಳಲ್ಲಿ ಪ್ರಕಟವಾಗಿರುವ ವರದಿಯಲ್ಲದೆ, ರಷ್ಯನ್ ಫೆಡರೇಷನ್​ನ ಪರಿಸರ ವಿಜ್ಞಾನ ಮತ್ತು ನೈಸರ್ಗಿಕ ಸಂಪನ್ಮೂಲಗಳ ಸಚಿವಾಲಯದಲ್ಲಿ ಬರುವ http://sayanzapoved.ru/o-zapovednyh-skopah-na-stranicah-gazet-indii.htm ವೆಬ್​ಸೈಟ್​ನಲ್ಲೂ ‘ವಿಜಯವಾಣಿ’ ವರದಿಯನ್ನು ಯಥಾವತ್ ಉಲ್ಲೇಖಿಸಲಾಗಿದೆ.
ವೆಬ್​ಸೈಟ್​ನಲ್ಲಿ ಏನಿದೆ?
ಆಧುನಿಕ ತಂತ್ರಜ್ಞಾನ, ಪವನ ಯಂತ್ರಗಳು ಮತ್ತು ವಿದ್ಯುತ್ ಯೋಜನೆಗಳು (ತಂತಿಗಳು) ವಲಸೆ ಮತ್ತು ಸ್ಥಳೀಯ ಹಕ್ಕಿಗಳ ಜೀವಕ್ಕೂ ತೊಂದರೆ ತರುತ್ತಿವೆ. ರಷ್ಯಾದಿಂದ ವಲಸೆ ಬರುವ ಪಕ್ಷಿಗಳಿಗೆ ಆಗುತ್ತಿರುವ ತೊಂದರೆಗಳ ಬಗ್ಗೆಯೂ ವೆಬ್​ಸೈಟ್​ನಲ್ಲಿ ಬರೆಯಲಾಗಿದೆ. ಅಲ್ಲದೆ, ‘ವಲಸೆ ಬಂದು ಮೃತಪಟ್ಟ ಗಂಡು ಆಸ್ಪ್ರೆ ಹಕ್ಕಿಯ ಬಗ್ಗೆ ರಷ್ಯಾದ ಪಕ್ಷಿ ತಜ್ಞರಷ್ಟೇ ಅಲ್ಲದೆ ಭಾರತೀಯ ಮಾಧ್ಯಮಗಳು ವರದಿ ಪ್ರಕಟಿಸಿ ಕಳವಳ ವ್ಯಕ್ತಪಡಿಸಿವೆ. ಪಕ್ಷಿಗಳಿಗೆ ಒದಗಿರುವ ಗಂಭೀರ ಸಮಸ್ಯೆಯ ಬಗ್ಗೆ ಭಾರತದ ಸ್ಥಳೀಯ ಪ್ರಮುಖ ಪತ್ರಿಕೆಯೊಂದು ಗಮನ ಸೆಳೆದಿದೆ’ ಎಂಬುದನ್ನು ವೆಬ್​ಸೈಟ್​ನಲ್ಲಿ ಬರೆದು ‘ವಿಜಯವಾಣಿ’ಯಲ್ಲಿ ಪ್ರಕಟವಾಗಿರುವ ವರದಿಯ ಚಿತ್ರವನ್ನೂ ಹಾಕಿ ಉಲ್ಲೇಖಿಸಿದೆ.
ವಲಸೆ ಹಕ್ಕಿ ವೃತ್ತಾಂತ: ಆಸ್ಪ್ರೆ ಹಕ್ಕಿಗಳ ಸಂತತಿ ಕ್ಷೀಣಿಸುತ್ತಿರುವುದರಿಂದ ಅಧ್ಯಯನದ ಸಲುವಾಗಿ ಎರಡು ಆಸ್ಪ್ರೆ ಹಕ್ಕಿಗಳಿಗೆ ವಿಜ್ಞಾನಿಗಳು ರಷ್ಯಾದ ಸಯಾನೊ-ಶುಶೆನ್ಸಿ್ಕ ಎಂಬಲ್ಲಿ ಸ್ಯಾಟ್​ಲೈಟ್ ಟ್ಯಾಗ್ ತೊಡಿಸಿದ್ದರು. ಅವು ಎಷ್ಟು ದೂರ ವಲಸೆ ಹೋಗುತ್ತವೆ, ಎಲ್ಲಿ ಸಾಗುತ್ತವೆ ಎಂಬುದನ್ನು ಜಿಪಿಎಸ್ ಮೂಲಕ ತಿಳಿಯಬಹುದಿತ್ತು. ಗಂಡಿಗೆ ‘ಸೆರ್ಜಿಕ್’, ಹೆಣ್ಣಿಗೆ ‘ಉಸಿನಾ’ ಎಂದು ನಾಮಕರಣ ಮಾಡಿದ್ದರು.
ಸೆ.14 ರಂದು ಹೊರಟ ‘ಉಸಿನಾ’ ಸೆ.28ರಂದು ರಾಜಸ್ಥಾನದತ್ತ ಬಂದಿತ್ತು. ಸ್ವಲ್ಪ ತಡವಾಗಿ ಹೊರಟ ‘ಸೆರ್ಜಿಕ್’ ಸೆ.20ರಂದು ಪ್ರಯಾಣ ಆರಂಭಿಸಿ ಅ.7ರಂದು ಮಧ್ಯಪ್ರದೇಶದಿಂದ ಕರ್ನಾಟಕದತ್ತ ಬಂದಿತ್ತು. ಗಂಡು ಹಕ್ಕಿಯ ಜಿಪಿಎಸ್ ಟ್ರ್ಯಾಕ್ ಸ್ಥಗಿತಗೊಂಡಿದ್ದರಿಂದ ಆತಂಕಗೊಂಡ ರಷ್ಯಾದ ವಿಜ್ಞಾನಿಗಳು ಅದರ ಜಾಡು ಹಿಡಿದು ಬಂದಾಗ ಬಾಗಲಕೋಟೆ ಜಿಲ್ಲೆ ಇಳಕಲ್​ನಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟಿರುವುದು ಕಂಡುಬಂದಿತ್ತು. ಆ ಪರಿಸರದಲ್ಲಿದ್ದ ಪವನಯಂತ್ರಗಳ (ವಿಂಡ್​ವಿುೕಲ್ಸ್) ವಿದ್ಯುತ್ ತಂತಿಯಿಂದ ಮೃತಪಟ್ಟಿರಬಹುದು ಎಂಬ ಶಂಕೆ ವ್ಯಕ್ತಪಡಿಸಿದ್ದರು. ಈ ಬಗ್ಗೆ ‘ವಿಜಯವಾಣಿ’ ವಿಸõತ ವರದಿ ಪ್ರಕಟಿಸಿತ್ತು.
| ಗುರುಪ್ರಸಾದ್ ತುಂಬಸೋಗೆ ಮೈಸೂರು
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve + twelve =
Remember me
