ಬೆಂಗಳೂರು:ಕನ್ನಡ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಹೊಸತನದ ಹರಿಹಾರ ಎನಿಸಿಕೊಂಡಿರುವ ‘ವಿಜಯವಾಣಿ’ ಪತ್ರಿಕೆ ಮಕ್ಕಳ ದಿನಾಚರಣೆ ನಿಮಿತ್ತ ವಿಜಯವಾಣಿ ವೆಬ್​ಸೈಟ್ ( vijayavani.net)ನಲ್ಲಿ ಆಯೋಜಿಸಿದ್ದ ‘ಮಗು ನೀ ನಗು ಫೋಟೋ ಫೆಸ್ಟ್ -2019’ರ ವಿಜೇತ ಮಕ್ಕಳಿಗೆ ಪ್ರಮಾಣಪತ್ರ ಮತ್ತು ಬಹುಮಾನ ವಿತರಿಸಲಾಯಿತು.
ಬೆಂಗಳೂರಿನವಿಜಯವಾಣಿಕಚೇರಿಯಲ್ಲಿ ಈಚೆಗೆ ನಡೆದ ಸರಳ ಕಾರ್ಯಕ್ರಮದಲ್ಲಿ ವಿಆರ್​ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ.ವಿಜಯ ಸಂಕೇಶ್ವರ ಮತ್ತು ಹಿರಿಯ ನಟ ದೊಡ್ಡಣ್ಣ ಬಹುಮಾನ ವಿತರಿಸಿದರು. ಫೋಟೋ ಸ್ಪರ್ಧೆಯಲ್ಲಿ ಅತಿ ಹೆಚ್ಚು ಮೆಚ್ಚುಗೆ ಗಳಿಸಿ ಪ್ರಥಮ ಸ್ಥಾನದಲ್ಲಿದ್ದ ಮದ್ದೂರಿನ ವಿನೀತ್ ಹಾಗೂ 4ನೇ ಸ್ಥಾನದಲ್ಲಿದ್ದ ಬೆಂಗಳೂರಿನ ಪರಿಣಿತಾ ಪ್ರಮಾಣಪತ್ರ ಮತ್ತು ಬಹುಮಾನ ಸ್ವೀಕರಿಸಿದರು. ಹಿರಿಯ ನ್ಯಾಯವಾದಿ ರೇವಣಸಿದ್ದಯ್ಯ ಉಪಸ್ಥಿತರಿದ್ದರು.
ಇನ್ನುಳಿದಂತೆ, ರಾಣೇಬೆನ್ನೂರಿನ ಕೃತಿ ಕುಲೇನೂರು, ಹುಬ್ಬಳ್ಳಿಯ ದಿಷಿಕಾ ವಚನ ಗಾಯಕ್ವಾಡ್ ಅವರಿಗೆ ಹುಬ್ಬಳ್ಳಿ ಕಚೇರಿಯಲ್ಲಿ, ಬಂಟ್ವಾಳದ ಸಮನ್ವಿ, ಮೂಡಬಿದಿರೆಯ ಅನ್ವಿ, ಕಾರ್ಕಳದ ಹರ್ಷಿಲ್ ದೇವಾಡಿಗ, ಮೂಡಬಿದಿರೆಯ ಅವಿಕ್ಷಾ ಶೆಟ್ಟಿ, ಉಡುಪಿಯ ರಿಷಿಕಾ, ಬೆಳ್ತಂಗಡಿಯ ಮಹಾನಿಗೌಡ ಅವರಿಗೆ ಮಂಗಳೂರು ಕಚೇರಿಯಲ್ಲಿ, ಶಾನ್ವಿ ಪಿರಿಯಾಪಟ್ಟಣ ಅವರಿಗೆ ಮೈಸೂರಿನ ಕಚೇರಿಯಲ್ಲಿ ಪ್ರಮಾಣಪತ್ರ ಮತ್ತು ಬಹುಮಾನ ವಿತರಿಸಲಾಗುತ್ತಿದೆ.
ಮಗು ನೀ ನಗು ಫೋಟೋ ಫೆಸ್ಟ್-2019 ಸ್ಪರ್ಧೆಯು ನವೆಂಬರ್ 14ರಿಂದ 23ರ ತನಕ ನಡೆಯಿತು. ಪ್ರತಿನಿತ್ಯ ಸಾವಿರಾರು ಓದುಗರು ತಮ್ಮ ಮಕ್ಕಳ ಫೋಟೋ ಅಪ್ಲೋಡ್ ಮಾಡಿ ಅದರ ಲಿಂಕ್​ಗಳನ್ನು ಆಪ್ತವಲಯದಲ್ಲಿ ಹಂಚಿಕೊಂಡು ಮಕ್ಕಳ ಚಿತ್ರಕ್ಕೆ ಮೆಚ್ಚುಗೆ ಸೂಚಿಸಲು ಕೋರಿದ್ದರು. ಈ ರೀತಿ 10 ದಿನಗಳ ಅವಧಿಯಲ್ಲಿ 50,000ಕ್ಕೂ ಹೆಚ್ಚು ಫೋಟೋಗಳು ಅಪ್ಲೋಡ್ ಆಗಿದ್ದು, ಪ್ರತಿನಿತ್ಯ ಪಿಕ್ ಆಫ್ ದ ಡೇ ಪ್ರಕಟಿಸಲಾಗುತ್ತಿತ್ತು. ಕೊನೇ ದಿನ ಒಟ್ಟು ಹನ್ನೊಂದು ಮಕ್ಕಳ ಚಿತ್ರವನ್ನು ಅಂತಿಮಗೊಳಿಸಲಾಗಿತ್ತು.
ಇದರ ಫಲಿತಾಂಶದ ವಿವರವನ್ನು ನವೆಂಬರ್ 24ರ ವಿಜಯವಾಣಿಯಲ್ಲಿ ಪ್ರಕಟಿಸಲಾಗಿತ್ತು.
ನಮ್ಮ ಮಗುವಿಗೆ ಪ್ರಥಮ ಸ್ಥಾನ ಬಂದಿರುವುದು ಖುಷಿಯಾಗಿದೆ. ಸ್ನೇಹಿತೆಯಿಂದ ಮಗು ನೀ ನಗು ಸ್ಪರ್ಧೆ ಬಗ್ಗೆ ತಿಳಿದುಕೊಂಡೆ. 2 ದಿನಗಳ ಕಾಲ ಸತತ ಪ್ರಯತ್ನ ನಡೆಸಿ ವಿಜಯವಾಣಿ ವೆಬ್​ಸೈಟ್​ಗೆ ಫೋಟೋ ಅಪ್ಲೋಡ್ ಮಾಡಿದೆ. ಸಂಬಂಧಿಕರು ಹಾಗೂ ಸ್ನೇಹಿತರೆಲ್ಲರಿಗೂ ತಿಳಿಸುವ ಮೂಲಕ ಅವರೆಲ್ಲರ ನೆರವಿನಿಂದ ಮಗನಿಗೆ ಪ್ರಥಮ ಸ್ಥಾನ ಬಂದಿದೆ.
| ಸರ್ವಮಂಗಳಾ (ವಿನೀತ್ ತಾಯಿ)
ನಾನು ಬೆಸ್ಕಾಂ ಉದ್ಯೊಗಿ. ಕೆ.ಆರ್.ಸರ್ಕಲ್​ನಲ್ಲಿ ನಮ್ಮ ಕಚೇರಿ ಇರುವುದರಿಂದ ಸುತ್ತಮುತ್ತ ಎಂ.ಎಸ್.ಬಿಲ್ಡಿಂಗ್ ಸೇರಿ ಸರ್ಕಾರಿ ಕಚೇರಿಗಳೇ ಹೆಚ್ಚಿವೆ. ಸಹೋದ್ಯೊಗಿ, ಅವರ ಸ್ನೆಹಿತರು, ಪರಿಚಿತರು, ಸಂಬಂಧಿಕರು ಹೀಗೆ ಪ್ರತಿಯೊಬ್ಬರಿಗೂ ಲೈಕ್ ಮಾಡಿ ಎಂದು ಕೇಳಿಕೊಳ್ಳುತ್ತಿದ್ದ್ದೆ. ಯಾರೇ ಸಿಕ್ಕರೂ ವೋಟ್ ಮಾಡಿ ಎಂದು ಹೇಳುತ್ತಿದ್ದೆ. ಪತ್ನಿ ಅನುಷಾ ದಂತವೈದ್ಯೆಯಾಗಿದ್ದು, ಆಕೆಯೂ ಕ್ಲಿನಿಕ್​ಗೆ ಬರುತ್ತಿದ್ದ ರೋಗಿಗಳಿಗೂ ಮಗಳ ಫೋಟೋಗೆ ಲೈಕ್ ಮಾಡುವಂತೆ ಹೇಳುತ್ತಿ ದ್ದರು. ಚುನಾವಣೆ ರೀತಿ ಪ್ರಚಾರ ಮಾಡಿ ಮಗಳ ಫೋಟೋಗೆ ವೋಟ್ ಮಾಡಿಸಿದೆವು. ವೋಟ್ ಮಾಡಿದ ಎಲ್ಲರಿಗೂ ಧನ್ಯವಾದ.
| ಬಾಲಾಜಿ (ಪರಿಣಿತಾ ತಂದೆ)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two + sixteen =
Remember me
