ತುಮಕೂರು:ಶಿರಾ ಧರ್ಮಯುದ್ಧಕ್ಕೆ ನಾವು ಪಂಚಪಾಂಡವರನ್ನು ಕಳಿಸಿಕೊಟ್ಟಿದ್ದೇವೆ. ಅವರ ಸಾರಥ್ಯವಹಿಸಲು ಒಬ್ಬ ಕೃಷ್ಣನನ್ನೂ ಕಳಿಸಿದ್ದೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್​ ಕುಮಾರ್ ಕಟೀಲ್​ ಹೇಳಿದರು.
ಇಂದು ಬಿಜೆಪಿ ಅಭ್ಯರ್ಥಿ ಡಾ. ಸಿ.ಎಂ. ರಾಜೇಶ್​ಗೌಡ ಪರ ಚುನಾವಣಾ ಪ್ರಚಾರ ನಡೆಸಿ ಮಾತನಾಡಿದ ನಳೀನ್​ ಕುಮಾರ್​, ಶಿರಾಕ್ಕೆ ಅರ್ಜುನನಾಗಿ ವಿಜಯೇಂದ್ರ, ಭೀಮನಾಗಿ ಪ್ರತಾಪ್​ ಸಿಂಹ ಇದ್ದಾರೆ.  ಧರ್ಮರಾಯನಾಗಿ ಸುರೇಶ್​ ಗೌಡ, ನಕುಲ-ಸಹದೇವರಾಗಿ ರವಿಕುಮಾರ್​, ನಾರಾಯಣ ಸ್ವಾಮಿ ಇದ್ದಾರೆ. ಇವರೆಲ್ಲರ ಸಾರಥ್ಯ ವಹಿಸಲು ಕೃಷ್ಣನಾಗಿ ಡಿಸಿಎಂ ಗೋವಿಂದ ಕಾರಜೋಳರನ್ನು ಕಳಿಸಿದ್ದೇವೆ ಎಂದರು.
ಶಿರಾ ತಾಲೂಕಿನ ಮದ್ದಕನಹಳ್ಳಿಯಲ್ಲಿ ಬುಧವಾರ ಬಿಜೆಪಿ ಅಭ್ಯರ್ಥಿ ಡಾ.ಸಿ.ಎಂ.ರಾಜೇಶ್‌ಗೌಡ ಪರ ಬಿರುಸಿನ ಚುನಾವಣಾ ಪ್ರಚಾರ ನಡೆಸಿದ ನಳೀನ್ ಕುಮಾರ್ ಕಟೀಲ್, ಮಹಾಭಾರತ ಧರ್ಮಯುದ್ಧದಲ್ಲಿ ಗೆದ್ದದ್ದು ಪಾಂಡವರು. ಧರ್ಮಯುದ್ಧ ನಡೀಲಿ ಅಂತನೇ ಪಂಚಪಾಂಡವರನ್ನು ಕಳಿಸಿಕೊಟ್ಟಿದ್ದೇವೆ. ಹಾಗಾಗಿ ಯುದ್ಧದಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎಂದರು.
ಡಿಕೆಗೆ ಟಾಂಗ್:ಬಂಡೆಯ ಸಮಸ್ಯೆ ಪರಿಹಾರ ಮಾಡುವಂತಹ ನಾಯಕ ಇದ್ದರೆ ಅದು ಯಡಿಯೂರಪ್ಪ ಮಾತ್ರನಿಮ್ಮ ಬಂಡೆಯ ಸಮಸ್ಯೆ ನಾವು ಪರಿಹಾರ ಮಾಡುತ್ತೇವೆ. ಆದರೆ, ನೀವು ಹೊಡಿ ಬೇಕಾಗಿರುವುದು ಕನಕಪುರದ ಬಂಡೆಯನ್ನು. ನನಗೆ ವಿಶ್ವಾಸ ಇದೆ ನಿಮ್ಮ ಬಂಡೆಯನ್ನು ನಾವು ಹೊಡೆದು ಕೊಡುತ್ತೇವೆ. ಕನಕಪುರದ ಬಂಡೆಯನ್ನು ನೀವು ಹೊಡಿತೀರಾ ಅಂತ ತಮ್ಮ ಧಾಟಿಯಲ್ಲಿ ಡಿಕೆಶಿಗೆ ಟಾಂಗ್ ಕೊಟ್ಟರು.
ಹುಲಿಯಾಗೆ ಲೇವಡಿ:ಈ ಊರಿನಲ್ಲಿ ಕಾಡುಪ್ರಾಣಿಯ ಕಾಟ ಇದೆ ಅಂತ ಹೇಳಲಾಗುತ್ತಿದೆ. ಕಾಡುಪ್ರಾಣಿಯ ಸಮಸ್ಯೆ ಇಲ್ಲಿ ದೊಡ್ಡದಿದೆ ಅಂದರೆ ಇಲ್ಲಿ ಹುಲಿಯಾ ಬಂದುನಿಂತಿದೆ. ಹುಲಿಯಾ ನನ್ನ ಓಡಿಸಬೇಕು ಶಿರಾದಲ್ಲಿ ಹುಲಿಯಾ ಕಾಡುಪ್ರಾಣಿಯ ಕಾಟ ಶುರುವಾಗಿದೆ ಎಂದು ಕಟೀಲ್ ಲೇವಡಿ ಮಾಡಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 2 =
Remember me
