– ಪರಶುರಾಮ ಭಾಸಗಿವಿಜಯಪುರ:ಫೇಸ್‌ಬುಕ್‌ನಲ್ಲಿ ಬಂದ ಯುವತಿಯ ‘ಫ್ರೆಂಡ್ ರಿಕ್ವೆಸ್ಟ್’ಗೆ ಮರುಳಾಗಿ ಲಕ್ಷ ಲಕ್ಷ ರೂಪಾಯಿ ಕಳೆದುಕೊಂಡ ಉದ್ಯೋಗಿಯೋರ್ವ ಇದೀಗ ತಪ್ಪಿನ ಅರಿವಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ.ಹೌದು, ಮೂಲತಃ ಸಿಂದಗಿ ತಾಲೂಕಿನ ಬಗಲೂರ ಗ್ರಾಮದ ನಿವಾಸಿ ಪರಮೇಶ್ವರ ನಾನಾಗೌಡ ಹಿಪ್ಪರಗಿ ಎಂಬಾತ ಹಣ ಕಳೆದುಕೊಂಡ ಉದ್ಯೋಗಿ. ತೆಲಂಗಾಣ ರಾಜ್ಯದ ರಂಗಾರೆಡ್ಡಿ ಜಿಲ್ಲೆಯ ಆದಿತ್ಯ ನಗರದ ಆದಿಬಟ್ಟಲ ಗ್ರಾಮದಲ್ಲಿರುವ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಈತ ಒಂದಲ್ಲ ಎರಡಲ್ಲ ಬರೋಬ್ಬರಿ 39,04,870 ರೂಪಾಯಿ ಕಳೆದುಕೊಂಡಿದ್ದಾನೆ.
ಏನಿದು ಪ್ರಕರಣ?:2022ರ ಜೂ. 29ರಂದು ಬೆಳಗ್ಗೆ 9.10ಕ್ಕೆ ಸಿಂದಗಿಯಲ್ಲಿದ್ದ ಪರಮೇಶ್ವರ್‌ಗೆ ಮಂಜುಳಾ ಕೆ.ಆರ್. ಎಂಬ ಫೇಸ್‌ಬುಕ್ ಐಡಿಯಿಂದ ಫ್ರೆಂಡ್ ರಿಕ್ವೆಸ್ಟ್ ಬರುತ್ತದೆ. ಅದನ್ನು ಕನ್‌ಫರ್ಮ್ ಮಾಡಿದಾಗ ಮೆಸೆಂಜರ್‌ನಲ್ಲಿ ‘ಹಾಯ್’ ಎಂಬ ಸಂದೇಶ ಬರುತ್ತದೆ. ಅಲ್ಲಿಂದ ಪರಮೇಶ್ವರ್ ಹಾಗೂ ಮಂಜುಳಾ ಪ್ರತಿ ದಿನ ಪರಸ್ಪರ ಮೆಸೇಜ್ ಮಾಡುತ್ತಾ ಬಂದಿದ್ದಾರೆ. 2022ರ ಆ. 14ರಂದು ಮಂಜುಳಾ ತನ್ನ ತಾಯಿಗೆ ಆರೋಗ್ಯ ಸರಿಯಿಲ್ಲ 700 ರೂ. ಫೋನ್ ಪೇ ಮಾಡು ಎಂದು ಸಂದೇಶ ಕಳುಹಿಸಿದ್ದಾಳೆ. ಇದನ್ನು ನಂಬಿದ ಪರಮೇಶ್ವರ್ 700 ರೂಪಾಯಿ ಫೋನ್ ಪೇ ಮಾಡಿದ್ದಾನೆ. ಬಳಿಕ 2000 ರೂ. ಕೇಳಿದ್ದು, ಅದನ್ನೂ ಫೋನ್ ಪೇ ಮಾಡಿದ್ದಾನೆ. ಮರುದಿನ ತಾಯಿ ಮರಣ ಹೊಂದಿದ್ದಾಳೆ, ಅದಕ್ಕೆ 2000 ರೂ. ಬೇಕೆಂದಾಗ ಮತ್ತೆ ಫೋನ್ ಪೇ ಮಾಡಿದ್ದಾನೆ. ಬಳಿಕ ತಿಥಿ ಕಾರ್ಯಕ್ಕೆ 5000 ರೂ. ಬೇಕೆಂದಾಗ ಮತ್ತೆ ಹಣ ಹಾಕಿದ್ದಾನೆ.
ಮದುವೆಯಾಗುವ ಭರವಸೆ: ಕೆಲವು ದಿನಗಳ ಬಳಿಕ ಪರಮೇಶ್ವರ್‌ಗೆ ಫೋನ್ ಮಾಡಿದ ಮಂಜುಳಾ ತಾನು ಐಎಎಸ್ ಪರೀಕ್ಷೆ ಪಾಸ್ ಮಾಡಿದ್ದು, ಡಿಸಿ ಪೋಸ್ಟ್ ಸಿಗುತ್ತದೆ. ಸದ್ಯ ಹಾಸನದಲ್ಲಿದ್ದು ನನ್ನನ್ನು ನೋಡಿಕೊಳ್ಳುವವರು ಯಾರೂ ಇಲ್ಲ. ಅದಕ್ಕೆ ಬೆಂಗಳೂರಿಗೆ ಹೋಗಬೇಕು. ಅಲ್ಲಿ ಖರ್ಚಿಗೆ ಹಣ ಇಲ್ಲ. ಹಣಕಾಸಿನ ಸಹಾಯ ಮಾಡಿದರೆ ಮದುವೆಯಾಗುತ್ತೇನೆ ಎಂದು ಹೇಳಿದ್ದಾಳೆ. ಅದನ್ನೂ ನಂಬಿದ ಪರಮೇಶ್ವರ್ ಒಂದೇ ದಿನ ಐವತ್ತು ಸಾವಿರ ರೂಪಾಯಿಯನ್ನು ಎರಡು ಕಂತಿನಲ್ಲಿ ಕಳಿಸಿದ್ದಾನೆ. ಇದರಿಂದ ಮತ್ತಷ್ಟು ಸಲುಗೆ ಹೆಚ್ಚಾಗಿದೆ.
ಒಟ್ಟು 40 ಲಕ್ಷಕ್ಕೂ ಅಧಿಕ ಹಣ ಪಾವತಿ:ಕೆಲವು ದಿನಗಳ ಬಳಿಕ ಮಂಜುಳಾ ಮತ್ತಷ್ಟು ಸಲುಗೆಯಿಂದ ನಡೆದುಕೊಂಡಿದ್ದು ಅದನ್ನು ನಂಬಿದ ಪರಮೇಶ್ವರ್ ತನ್ನ ಬ್ಯಾಂಕ್ ಖಾತೆಯಿಂದ ಹಂತ ಹಂತವಾಗಿ ಒಟ್ಟು 40,86,800 ರೂಪಾಯಿಗಳನ್ನು ಮಂಜುಳಾ ಖಾತೆಗೆ ರವಾನಿಸಿದ್ದಾನೆ. ಅಲ್ಲದೇ, ಫೋನ್ ಪೇ ಹಣ ಸೇರಿ ಒಟ್ಟು 41,26,800 ರೂ. ಮಂಜುಳಾಗೆ ನೀಡಿದ್ದಾನೆ. ಆ ಬಳಿಕ ಮಂಜುಳಾ ಹತ್ತಿರವೇ ತನ್ನ ಖರ್ಚಿಗೆ ಹಣವಿಲ್ಲವೆಂದು ಮರಳಿ 2,21,930 ರೂ. ವಾಪಸ್ ಪಡೆದಿದ್ದಾನೆ. ಮಂಜುಳಾ ಮತ್ತೆ ಮತ್ತೆ ಹಣಕ್ಕೆ ಬೇಡಿಕೆ ಇರಿಸುತ್ತಿದ್ದರಿಂದ ಪರಮೇಶ್ವರ್‌ಗೆ ಸಂಶಯ ಬಂದು ತಾನು ಮೋಸ ಹೋಗುತ್ತಿರುವುದಾಗಿ ತಿಳಿದು ಇದೀಗ ಅಂದರೆ ನ.15ರಂದು ಆಕೆಯ ಮೇಲೆ ವಿಜಯಪುರ ಸಿಇಎನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ.
ಈ ಕುರಿತು ಪ್ರತಿಕ್ರಿಯೆ ನೀಡಿದ ಪೊಲೀಸ್ ವರಿಷ್ಠಾಧಿಕಾರಿ ಎಚ್.ಡಿ. ಆನಂದಕುಮಾರ, ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ತನಿಖಾ ತಂಡ ರಚಿಸಲಾಗಿದೆ. ಶೀಘ್ರದಲ್ಲಿಯೇ ಪ್ರಕರಣ ಭೇದಿಸಲಾಗುವುದು. ದೂರುದಾರನಿಗೆ ನ್ಯಾಯ ಕೊಡಿಸುವ ಪ್ರಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಕಾಂಗ್ರೆಸ್​ ಟಿಕೆಟ್​ಗೆ ಪದವೀಧರರು, ವೈದ್ಯರು, ವಕೀಲರಿಂದಲೂ ಅರ್ಜಿ!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − five =
Remember me
