| ರುದ್ರಣ್ಣ ಹರ್ತಿಕೋಟೆ ಬೆಂಗಳೂರುತಳಹಂತದ ಜನರಿಗೆ ಮನೆ ಬಾಗಿಲಿನಲ್ಲಿಯೇ ನ್ಯಾಯ ಒದಗಿಸುವುದರೊಂದಿಗೆ ರಾಜ್ಯವನ್ನು ವ್ಯಾಜ್ಯಮುಕ್ತವನ್ನಾಗಿ ಮಾಡುವ ಉದ್ದೇಶದಿಂದ ಇನ್ನೆರಡು ತಿಂಗಳಲ್ಲಿ ಗ್ರಾಮ ನ್ಯಾಯಾಲಯಗಳನ್ನು ಸರ್ಕಾರ ಆರಂಭಿಸುತ್ತಿದೆ.
ಬಡವರ ಪಾಲಿಗೆ ನ್ಯಾಯದಾನ ದುಬಾರಿಯಾಗುತ್ತಿದೆ. ತಾಲೂಕು ಮತ್ತು ಜಿಲ್ಲಾ ನ್ಯಾಯಾಲಯಗಳಿಗೆ ವರ್ಷಾನುಗಟ್ಟಲೆ ಅಲೆದಾಡಬೇಕಾದ ಸ್ಥಿತಿ ಇದೆ. ಆದ್ದರಿಂದ ಯಾವುದೇ ನಾಗರಿಕರಿಗೆ ನ್ಯಾಯ ನಿರಾಕರಣೆಯಾಗದೇ ಕೆಳಹಂತದಲ್ಲಿಯೇ ನ್ಯಾಯಾಲಯಗಳು ಇರಬೇಕು ಎಂಬುದು ಹಳ್ಳಿ ಕೋರ್ಟ್​ಗಳ ಸ್ಥಾಪನೆಯ ಉದ್ದೇಶವಾಗಿದೆ. ಸಾಮಾಜಿಕ ಹಾಗೂ ಆರ್ಥಿಕವಾಗಿ ಹಿಂದುಳಿದವರಿಗೆ ಇವುಗಳಿಂದ ಸಾಕಷ್ಟು ಅನುಕೂಲವಾಗಲಿದೆ ಎಂಬ ಆಶಯ ಹೊಂದಲಾಗಿದೆ. ರೈತರು, ಕೂಲಿ ಕಾರ್ವಿುಕರು ಹಣ ವೆಚ್ಚ ಮಾಡಿಕೊಂಡು ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಿಗೆ ಅಲೆದಾಡುವುದನ್ನು ತಪ್ಪಿಸಬೇಕು ಎಂಬುದು ಗ್ರಾಮ ನ್ಯಾಯಾಲಯಗಳ ಆಶಯ. ಕೇಂದ್ರ ಸರ್ಕಾರ 2008ರಲ್ಲಿ ಗ್ರಾಮ ನ್ಯಾಯಾಲಯ ಕಾಯ್ದೆ ರೂಪಿಸಿತು. ಕೆಲ ರಾಜ್ಯಗಳಲ್ಲಿ ಸ್ಥಾಪನೆಯೂ ಆದವು.
ಇತ್ತೀಚೆಗೆ ಕೇಂದ್ರ ಸರ್ಕಾರ ಮತ್ತೆ ಗ್ರಾಮ ನ್ಯಾಯಾಲಯಗಳನ್ನು ಸ್ಥಾಪಿಸುವಂತೆ ರಾಜ್ಯಗಳಿಗೆ ಸೂಚಿಸಿದೆ. ಅದರಂತೆ, ರಾಜ್ಯ ಸರ್ಕಾರ ಸಿದ್ಧತೆ ಆರಂಭಿಸಿದೆ. ಕಾನೂನು ಸಚಿವ ಎಚ್.ಕೆ. ಪಾಟೀಲ ಈ ಬಗ್ಗೆ ಸಾಕಷ್ಟು ಸಭೆಗಳನ್ನು ನಡೆಸಿದ್ದಾರೆ.
ನ್ಯಾಯಾಧೀಶರ ನೇಮಕ:ರಾಜ್ಯ ಸರ್ಕಾರ ಹೈಕೋರ್ಟ್ ಜತೆ ಚರ್ಚೆ ನಡೆಸಿ ಗ್ರಾಮ ನ್ಯಾಯಾಲಯಗಳಿಗೆ ನ್ಯಾಯಾಧೀಶರನ್ನು ನೇಮಕ ಮಾಡಬೇಕಾಗುತ್ತದೆ. ಪ್ರಥಮ ದರ್ಜೆ ನ್ಯಾಯಾಧೀಶರಿಗೆ ಸಮಾನವಾದ ವೇತನ ಶ್ರೇಣಿಯನ್ನು ನೀಡಲಾಗುತ್ತದೆ.
ಯಾವ ಪ್ರಕರಣಗಳ ವಿಲೇವಾರಿ?:ಗ್ರಾಮ ನ್ಯಾಯಾಲಯಗಳಲ್ಲಿ ಸಿವಿಲ್ ಮತ್ತು ಕ್ರಿಮಿನಲ್ ಮೊಕದ್ದಮೆಗಳನ್ನು ವಿಲೇವಾರಿ ಮಾಡಲಾಗುತ್ತದೆ. ಲೋಕ ಅದಾಲತ್​ಗಳು ನಡೆಯುತ್ತಿರುತ್ತವೆ. ಆದರೆ, ಗ್ರಾಮೀಣ ಭಾಗದಲ್ಲಿ ತುರ್ತು ವಿಚಾರಣೆ ಮಾಡಿ ವಿಲೇವಾರಿ ಮಾಡಬೇಕು ಎಂಬುದು ಈ ಕಾಯ್ದೆಯ ಆಶಯ. ಜಿಲ್ಲಾ ಮತ್ತು ತಾಲೂಕು ನ್ಯಾಯಾಲಯಗಳಲ್ಲಿ ಇರುವ ಪ್ರಕರಣಗಳನ್ನು ಗ್ರಾಮ ನ್ಯಾಯಾಲಯಗಳಿಗೆ ವರ್ಗಾವಣೆ ಮಾಡಿ ಅಲ್ಲಿ ವಿಲೇವಾರಿ ಮಾಡಬೇಕು. ಗ್ರಾಮ ಮಟ್ಟದಲ್ಲಿಯೇ ವಿಲೇವಾರಿ ಆದರೆ ಅಲೆದಾಡುವುದು ತಪು್ಪತ್ತದೆ. ಗ್ರಾಮ ಭಾಗದಲ್ಲಿ ಕ್ರಿಮಿನಲ್ ಪ್ರಕರಣಗಳಿಗಿಂತ ಸಿವಿಲ್ ವ್ಯಾಜ್ಯಗಳ ಸಂಖ್ಯೆ ಹೆಚ್ಚಿರುತ್ತದೆ. ಸಹೋದರರು, ಸಂಬಂಧಿಗಳ ನಡುವಿನ ಪ್ರಕರಣಗಳೇ ಜಾಸ್ತಿ ಇರುತ್ತವೆ. ಅವುಗಳ ವಿಲೇವಾರಿ ಬೇಗ ಆಗುತ್ತದೆ. ಸ್ಥಳೀಯವಾಗಿ ಪೊಲೀಸರು ಗ್ರಾಮ ನ್ಯಾಯಾಲಯಗಳಿಗೆ ಬೇಕಾದ ಎಲ್ಲ ರೀತಿಯ ನೆರವನ್ನು ನೀಡಬೇಕಾಗುತ್ತದೆ.
400 ನ್ಯಾಯಾಲಯಗಳು:ಕಾಯ್ದೆಯ ಪ್ರಕಾರ ರಾಜ್ಯದಲ್ಲಿ ಒಂದು ಸಾವಿರ ಗ್ರಾಮ ನ್ಯಾಯಾಲಯಗಳ ಸ್ಥಾಪನೆಯಾಗಬೇಕಾಗಿತ್ತು. ಸದ್ಯಕ್ಕೆ 400 ಕೋರ್ಟ್​ಗಳನ್ನು ಸ್ಥಾಪಿಸುವ ಉದ್ದೇಶವನ್ನು ಸರ್ಕಾರ ಹೊಂದಿದೆ. ಪ್ರತಿ ನ್ಯಾಯಾಲಯ ಸ್ಥಾಪನೆಗೆ 20 ಲಕ್ಷ ರೂ. ವೆಚ್ಚವಾಗುತ್ತದೆ ಎಂಬ ಅಂದಾಜಿದೆ. ವಾರ್ಷಿಕ 18 ಲಕ್ಷ ರೂ. ವೆಚ್ಚವಾಗುತ್ತದೆ ಎಂದು ಹೇಳಲಾಗುತ್ತಿದೆ. ಎಲ್ಲಿ ಹೆಚ್ಚಿನ ಪ್ರಕರಣಗಳಿವೆಯೋ ಅಂತಹ ಸ್ಥಳಗಳನ್ನು ಗುರುತಿಸಿ ಅಲ್ಲಿ ಗ್ರಾಮ ನ್ಯಾಯಾಲಯಗಳು ಸ್ಥಾಪನೆಯಾಗಲಿವೆ.
ನೇಮಕಾತಿ ಪ್ರಕ್ರಿಯೆ:ನ್ಯಾಯಾಧೀಶರಿಂದ ಹಿಡಿದು ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಒಂದು ನ್ಯಾಯಾಲಯಕ್ಕೆ ಕನಿಷ್ಠ ಐದರಿಂದ ಆರು ಜನರಂತೆ ನೇಮಕವಾದರೂ ಎರಡರಿಂದ ಎರಡೂವರೆ ಸಾವಿರ ಜನರ ನೇಮಕವಾಗಬಹುದೆಂದು ಹೇಳಲಾಗುತ್ತಿದೆ.
ದೇಶದಲ್ಲಿ ಎಷ್ಟಿವೆ?:ದೇಶದಲ್ಲಿ 2009 ರಿಂದ ಇಲ್ಲಿಯ ತನಕ 256 ಗ್ರಾಮ ನ್ಯಾಯಾಲಯಗಳು ಮಧ್ಯಪ್ರದೇಶ, ರಾಜಸ್ಥಾನ, ಉತ್ತರಪ್ರದೇಶ, ಕೇರಳ, ಮಹಾರಾಷ್ಟ್ರ, ಒಡಿಶಾಗಳಲ್ಲಿ ಸ್ಥಾಪನೆಯಾಗಿವೆ. ಕೇರಳದಲ್ಲಿ ಗ್ರಾಮ ನ್ಯಾಯಾಲಯಗಳು ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿವೆ ಎಂಬುದು ಲಭ್ಯವಾಗಿರುವ ಮಾಹಿತಿ.
ಎಷ್ಟಿವೆ ವ್ಯಾಜ್ಯಗಳು?:ರಾಜ್ಯದ ಎಲ್ಲ ನ್ಯಾಯಾಲಯಗಳಿಂದ 10 ಲಕ್ಷದಷ್ಟು ವ್ಯಾಜ್ಯಗಳು ವಿಲೇವಾರಿಗೆ ಬಾಕಿ ಇವೆ ಎಂಬ ಅಂದಾಜಿದೆ.
ತ್ವರಿತ ನ್ಯಾಯದಾನಕ್ಕಾಗಿ ಗ್ರಾಮ ಮಟ್ಟದಲ್ಲಿಯೇ ನ್ಯಾಯಾಲಯಗಳನ್ನು ಸ್ಥಾಪಿಸಲಾಗುತ್ತಿದೆ. ಎಲ್ಲ ಪ್ರಕ್ರಿಯೆಗಳನ್ನು ಶೀಘ್ರ ಪೂರ್ಣಗೊಳಿಸಲಾಗುತ್ತದೆ. ನೇಮಕಾತಿಗೆ ಹೈಕೋರ್ಟ್ ಜತೆ ರ್ಚಚಿಸ ಬೇಕಾಗುತ್ತದೆ. ನ್ಯಾಯಾಧೀಶರು, ವಕೀಲರ ನೇಮಕವಾಗಬೇಕಿದ್ದು, ಸದ್ಯದಲ್ಲೇ ಸಚಿವ ಸಂಪುಟ ಸಭೆಯಲ್ಲಿ ಅಂತಿಮ ತೀರ್ಮಾನ ಆಗಲಿದೆ.
| ಎಚ್.ಕೆ. ಪಾಟೀಲ ಕಾನೂನು ಸಚಿವ
ಹೇಗಿರಲಿವೆ ಕೋರ್ಟ್?:ಗ್ರಾಮ ನ್ಯಾಯಲಯಗಳು ಜೆಎಂಎಫ್​ಸಿ ನ್ಯಾಯಾಲಯಗಳಿಗೆ ಸಮಾನ ಅಧಿಕಾರ ಹೊಂದಿರುತ್ತವೆ. ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನದಲ್ಲಿ ಇವು ಕಾರ್ಯ ನಿರ್ವಹಿಸಲಿವೆ. ಪಂಚಾಯಿತಿ ಕೇಂದ್ರ ಸ್ಥಾನ ಹೊರತು ತಾಲೂಕಿನಲ್ಲಿಯೇ ಸೂಕ್ತ ಜಾಗ ಆಯ್ಕೆ ಮಾಡುವ ಅಧಿಕಾರವೂ ಸರ್ಕಾರಕ್ಕೆ ಇರುತ್ತದೆ. ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರದ ಅನುದಾನದಲ್ಲಿ ಈ ನ್ಯಾಯಾಲಯಗಳು ಕಾರ್ಯ ನಿರ್ವಹಣೆ ಮಾಡಲಿವೆ. ಅಗತ್ಯಬಿದ್ದರೆ ಸಂಚಾರಿ ನ್ಯಾಯಾಲಯವನ್ನು ಸಹ ಇಲ್ಲಿನ ನ್ಯಾಯಾಧೀಶರು ನಡೆಸಬಹುದಾಗಿದೆ. ಆದರೆ, ಅದಕ್ಕೆ ವ್ಯಾಪಕ ಪ್ರಚಾರ ನೀಡಬೇಕಾಗುತ್ತದೆ.
ಗಾದೆಮಾತು ಪ್ರಕರಣ: ರಿಯಲ್ ಸ್ಟಾರ್ ಉಪೇಂದ್ರ ಕಡೆಯಿಂದ ಮಹತ್ವದ ಸೂಚನೆ
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
Sign in to your account
Please enter an answer in digits:two × 4 =
Remember me
