ಬಾಗಲಕೋಟೆ:ಕಾಂಗ್ರೆಸ್​ ನಾಯಕ ಸಿದ್ದರಾಮಯ್ಯ ಅವರ ಎದುರೇ ಗ್ರಾಮ ಪಂಚಾಯಿತಿಯ ನೂತನ ಸದಸ್ಯ ಮಾಜಿ ಸಿಎಂ ವಿರುದ್ದ ಅಸಮಧಾನ ಹೊರಹಾಕಿದ ಘಟನೆ ಬಾಗಲಕೋಟೆಯ ಬಾದಾಮಿಯಲ್ಲಿ ನಡೆದಿದೆ. ಸಿದ್ದರಾಮಯ್ಯ ನಮ್ಮೂರಿಗೆ ಬಂದು ಹೋದರು ಆದರೂ ನಮ್ಮೂರಲ್ಲಿ ಯಾವುದೇ ಅಭಿವೃದ್ಧಿ ಆಗಿಲ್ಲ ಎಂದು ಸದಸ್ಯ ದೂರಿದ್ದು, ತಕ್ಷಣವೇ ಸಿದ್ದರಾಮಯ್ಯನವರು ಆತನನ್ನು ವೇದಿಕೆಯಿಂದ ಕೆಳಗಿಳಿಸಿದ್ದಾರೆ.
ಇದನ್ನೂ ಓದಿ:ವೃದ್ಧ ಮಹಿಳೆಯ ಭೀಕರ ಹತ್ಯೆ! ಆಸ್ತಿಗಾಗಿ ಸಂಬಂಧಿಕರಿಂದಲೇ ನಡೆಯಿತಾ ದುಷ್ಕೃತ್ಯ?
ಜಿಲ್ಲೆಯ ಬಾದಮಿ ಪಟ್ಟಣದ ಶಾಸಕರ ಗೃಹ ಕಚೇರಿಯಲ್ಲಿ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಗೆದ್ದ ಕಾಂಗ್ರೆಸ್ ಬೆಂಬಲಿತರ ಸದಸ್ಯರ ಸನ್ಮಾನ ಕಾರ್ಯಕ್ರಮ ನಡೆಸಲಾಗುತ್ತಿತ್ತು. ಈ ಸಮಯದಲ್ಲಿ ಮಾತನಾಡಲು ವೇದಿಕೆ ಹತ್ತಿದ ಬಾದಾಮಿ ತಾಲೂಕಿನ ಕಿತ್ತಲಿ ಗ್ರಾಮದ ವ್ಯಕ್ತಿ ಸಂಗಣ್ಣ ಜಾಬಣ್ಣವರ ಸಿದ್ದರಾಮಯ್ಯ ಅವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ಗ್ರಾಮದಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಯಾರೂ ಸಹ ಹಳ್ಳಿ ಕಡೆಗೆ ಬಂದಿಲ್ಲ. ನಮ್ಮ ಗ್ರಾಮದ ಆಶ್ರಯ ಮನೆಗಳು ಹಾಳಾಗಿ ಹೋಗಿವೆ. ಸಿದ್ದಾರಾಮಯ್ಯ ಬಂದು ಹೋದ್ರು, ಆದರೂ ಕಾಮಗಾರಿ ಸರಿಯಾಗಿಲ್ಲ.” ಎಂದು ಸಂಗಣ್ಣ ಮೈಕ್​ ಹಿಡಿದು ಹೇಳಿದ್ದಾರೆ.
ಇದನ್ನೂ ಓದಿ:ಕೆಳಗೆ ಬಿದ್ದ ಶಾಸಕಿ ಸೌಮ್ಯರೆಡ್ಡಿ, ತುಳಿದುಕೊಂಡೇ ಮುನ್ನಡೆದ ಕಾರ್ಯಕರ್ತರು! ಕೈ ಪ್ರತಿಭಟನೆ ವೇಳೆ ಅವಘಡ
ಸಂಗಣ್ಣ ಜಾಬಣ್ಣವರ್ ಮಾತು ಕೇಳಿ ಸಿದ್ದರಾಮಯ್ಯನವರು ಸಿಟ್ಟಾಗಿದ್ದು, ಕುಳಿತಿದ್ದ ಆಸನದಿಂದ ಎದ್ದು ಬಂದು ಆತನ ಮಾತು ತಡೆದು ಡಯಾಸನಿಂದ ಕೆಳಗೆ ಕಳಿಸಿದ್ದಾರೆ. ವೇದಿಕೆಯಿಂದ ಕೆಳಕ್ಕೆ ಸದಸ್ಯನನ್ನು ನೂಕಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ. ಸಂಗಣ್ಣ ಅವರನ್ನ ಸಮಾಧಾನಿಸಲು ಮಾಜಿ ಶಾಸಕ ಎಸ್.ಜಿ.ನಂಜಯ್ಯನಮಠ, ಜಿಪಂ ಅಧ್ಯಕ್ಷೆ ಬಾಯಕ್ಕ ಮೇಟಿ ಮುಂದಾಗಿದ್ದರು. ಸಭೆಯಲ್ಲಿ ಸಿದ್ದರಾಮಯ್ಯ, ಪರಿಷತ್ ವಿಪಕ್ಷ ನಾಯಕ ಎಸ್.ಆರ್.ಪಾಟೀಲ, ಎಂಎಲ್ಸಿ ಆರ್.ಬಿ.ತಿಮ್ಮಾಪುರ, ಮಾಜಿ ಸಚಿವರಾದ ಬಿ.ಬಿ.ಚಿಮ್ಮನಕಟ್ಟಿ, ಎಚ್.ವೈ.ಮೇಟಿ, ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಎಸ್.ಜಿ.ನಂಜಯ್ಯನಮಠ ಸೇರಿ ಹಲವರು ಭಾಗವಹಿಸಿದ್ದರು.
'ಸಿದ್ದರಾಮಯ್ಯನವರು ನಮ್ಮೂರಿಗೆ ಏನೂ ಮಾಡಿಲ್ಲ' ಸಿದ್ದರಾಮಯ್ಯ ಎದುರೇ ಅಸಮಾಧಾನ ತೋಡಿಕೊಂಡ ಗ್ರಾ.ಪಂ ಸದಸ್ಯ! ವೇದಿಕೆಯಿಂದ ಕೆಳಕ್ಕೆ ನೂಕಿದ ಸಿದ್ದರಾಮಯ್ಯ!ಎಲ್ಲಿ, ಹೇಗೆ ಎಂದು ತಿಳಿಯಲು ಈ ಲಿಂಕ್​ ತೆರೆಯಿರಿ:https://t.co/blB8PLQeZapic.twitter.com/GRTveBl3AB
— Vijayavani (@VVani4U)January 4, 2021

ಅಮ್ಮ ಸತ್ತಿಲ್ಲ, ಮಲಗಿದ್ದಾಳೆ! 20 ದಿನದಿಂದ ಶವವನ್ನೇ ಪೂಜಿಸುತ್ತಿರುವ ಮಕ್ಕಳು! ಕಣ್ಣೀರು ತರಿಸುತ್ತೆ ಈ ಮಕ್ಕಳ ನಂಬಿಕೆ

54ರ ಫಾಸ್ಟರ್ ಜತೆ 24ರ ಯುವತಿ ಮದುವೆ: ಇಲ್ಲಿದೆ ಎಕ್ಸ್​ಕ್ಲೂಸಿವ್​ ಫೋಟೋಸ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × four =
Remember me
