ಬೆಂಗಳೂರು:ಗ್ರಾಮ ಪಂಚಾಯಿತಿ ಚುನಾವಣೆಗೆ ಅಖಾಡ ಅಖೈರಾಗಿದೆ. ಮೊದಲ ಹಂತದ ಚುನಾವಣೆಯಲ್ಲಿ 106069 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಒಟ್ಟು 3020 ಗ್ರಾಮ ಪಂಚಾಯಿತಿಗಳ 47581 ಸದಸ್ಯ ಸ್ಥಾನಗಳಿಗೆ ಡಿ.22ರಂದು ಮತದಾನ ನಡೆಯಲಿದೆ.ಅಚ್ಚರಿಯ ಸಂಗತಿ ಎಂದರೆ, ಮೊದಲ ಹಂತದಲ್ಲಿ ಸುಮಾರು 4364 ಮಂದಿ ಅವಿರೋಧ ಆಯ್ಕೆಯಾಗಿದ್ದಾರೆ. ಕರೊನಾ, ಸದಸ್ಯತ್ವ ಹರಾಜು, ಮೂರೂ ಪಕ್ಷಗಳ ನಾಯಕರ ಪ್ರಯತ್ನದ ಫಲವಾಗಿ ಈ ಬಾರಿ ಅತಿ ಹೆಚ್ಚು ಸದಸ್ಯರು ಅವಿರೋಧ ಆಯ್ಕೆಯಾಗಿದ್ದಾರೆ. ಹಳ್ಳಿಗಳಲ್ಲೂ ಭರ್ಜರಿ ರಾಜಕೀಯ ಪೈಪೋಟಿ ನಡುವೆಯೂ ಅವಿರೋಧ ಆಯ್ಕೆಯಾಗುವವರ ಸಂಖ್ಯೆ ಹಿಂದಿನ ಕೆಲ ಚುನಾವಣೆ ಗಳಿಗಿಂತ ಅತಿ ಹೆಚ್ಚಾಗಿದೆ. ಮತದಾನಕ್ಕೆ ಇನ್ನು ಏಳು ದಿನ ಬಾಕಿ ಇದ್ದು, ಅಭ್ಯರ್ಥಿಗಳು ಗೆಲುವಿಗೆ ಸರ್ಕಸ್ ಮಾಡುತ್ತಿದ್ದಾರೆ.

ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕು ಬೆಲ್ಲದ ಬಾಗೇವಾಡಿ ಗ್ರಾಪಂಗೆ 1948ರಿಂದ ಈವರೆಗೆ ಒಂದು ಬಾರಿ ಮಾತ್ರ, ಅಂದರೆ 1977ರಲ್ಲಿ ಒಂದು ವಾರ್ಡ್​ಗೆ ಚುನಾವಣೆ ನಡೆದಿದ್ದು ಬಿಟ್ಟರೆ ಉಳಿದಂತೆ ಮತದಾನವೇ ನಡೆದಿಲ್ಲ. ಚುನಾವಣೆ ಘೊಷಣೆ ಮಾಡುತ್ತಿದ್ದಂತೆ ಗ್ರಾಮದ ಪ್ರಮುಖರಾದ ಉಮೇಶ್ ಕತ್ತಿ ಕುಟುಂಬದ ನೇತೃತ್ವದಲ್ಲಿ ಗ್ರಾಮಸ್ಥರು ಸಭೆ ಸೇರುತ್ತಾರೆ. ಕಳೆದ ಬಾರಿ ಯಾರಿಗೆ ಮತ್ತು ಯಾವ ಸಮುದಾಯಕ್ಕೆ ಪ್ರಾತಿನಿಧ್ಯ ಕೊಡಲಾಗಿತ್ತು ಹಾಗೂ ಯಾವುದಕ್ಕೆ ಕೊಟ್ಟಿರಲಿಲ್ಲ ಎಂಬುದನ್ನು ಪರಿಶೀಲಿಸುತ್ತಾರೆ. ಆಯಾ ಸಮುದಾಯದಲ್ಲಿ ಕ್ರಿಯಾಶೀಲ ವ್ಯಕ್ತಿಯನ್ನು ಗುರುತಿಸಿ ಆಯ್ಕೆ ಮಾಡುತ್ತಾರೆ. ನಂತರ ವಾರ್ಡ್ ಪ್ರಮುಖರನ್ನು ಸೇರಿಸಿ ಆಯ್ಕೆಯಾದ ವ್ಯಕ್ತಿ ಕುರಿತು ಆಕ್ಷೇಪಣೆ ಇದ್ದರೆ ಕೇಳಿ ರ್ಚಚಿಸುತ್ತಾರೆ. ಎಲ್ಲರ ಒಪ್ಪಿಗೆ ಮೇರೆಗೆ ಗ್ರಾಪಂ ಪ್ರತಿನಿಧಿ ಎಂದು ಘೊಷಿಸುತ್ತಾರೆ. ಅದೇ ರೀತಿ ಎಲ್ಲ ವಾರ್ಡ್​ಗಳಲ್ಲಿ ಆಯ್ಕೆಗೊಳಿಸಿದ ಬಳಿಕ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಯಲ್ಲಿಯೂ ಮೀಸಲಾತಿಗೆ ಅನುಗುಣವಾಗಿ ಸರ್ವಸಮ್ಮತ ವ್ಯಕ್ತಿಯನ್ನು ಆಯ್ಕೆ ಮಾಡುತ್ತಾರೆ. ಈ ಬಾರಿ 33 ವಾರ್ಡ್​ಗಳಿಗೆ ಅವಿರೋಧ ಆಯ್ಕೆ ನಡೆದಿದೆ.
ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಸ್ತೂರಿ ರಂಗನ್ ವರದಿ ಹಾಗೂ ಪರಿಸರ ಸೂಕ್ಷ್ಮ ವಲಯ ಜಾರಿ ವಿರೋಧಿಸಿ 16 ಗ್ರಾಪಂಗಳಲ್ಲಿ ಜನರು ಚುನಾವಣೆ ಬಹಿಷ್ಕರಿಸಿದ್ದಾರೆ. ವರದಿ ವಿರೋಧಿಸಿ ಎಲ್ಲರೂ ನಾಮಪತ್ರ ಹಿಂತೆಗೆದುಕೊಳ್ಳಬೇಕು ಎಂದು ಐಡಿ ಪೀಠ ಗ್ರಾಮದಲ್ಲೂ ನಿರ್ಣಯ ಮಾಡಲಾಗಿತ್ತು. 11 ಮಂದಿ ನಾಮಪತ್ರ ಸಲ್ಲಿಸಿದ್ದು, 10 ಜನ ಒಟ್ಟಿಗೆ ತೆರಳಿ ವಾಪಸ್ ಪಡೆದಿದ್ದರು. ಗರ್ಭಿಣಿಯಾಗಿದ್ದ ಸುಮಿತ್ರಾ ಅದೇ ದಿನ ಹೆರಿಗೆಗಾಗಿ ಆಸ್ಪತ್ರೆಗೆ ದಾಖಲಾಗಬೇಕಿತ್ತು. ಡಿ.14ರಂದು ಪತಿ ಜತೆ ಹೋಗಿ ನಾಮಪತ್ರ ವಾಪಸ್ ಪಡೆದು ಆಸ್ಪತ್ರೆಗೆ ತೆರಳಿದ ಕೆಲವೇ ಸಮಯದಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − four =
Remember me
