ಮೈಸೂರು:ಆಪರೇಷನ್​ ಜೆಡಿಎಸ್​ ಹಿನ್ನೆಲೆಯಲ್ಲಿ ಪ್ರವಾಸದಲ್ಲಿದ್ದ ಗ್ರಾಮ ಪಂಚಾಯತ್ ಸದಸ್ಯರೊಬ್ಬರು ಅನುಮಾನಾಸ್ಪದವಾಗಿ ಸಾವಿಗೀಡಾಗಿದ್ದು, ಹಲವು ಪ್ರಶ್ನೆಗಳನ್ನು ಮೂಡಿಸಿದೆ. ಮೈಸೂರಿನ ಆರ್​.ಟಿ.ನಗರದ ಸುಭಿಕ್ಷಾ ಗಾರ್ಡನ್ಸ್​ನಲ್ಲಿ ಈ ಪ್ರಕರಣ ನಡೆದಿದೆ.
ಕೆ.ಆರ್. ನಗರ ತಾಲೂಕು ಹಳಿಯೂರು ಗ್ರಾಮ ಪಂಚಾಯತ್ ಸದಸ್ಯ, ಜವರೇಗೌಡ ಕೊಪ್ಪಲಿನ ನಿವಾಸಿ, ಕಾಂಗ್ರೆಸ್​​ನ ಸತೀಶ್ (34) ಸಾವಿಗೀಡಾದವರು. ಮೈಸೂರಿನ ಆರ್​.ಟಿ.ನಗರದ ಸುಭಿಕ್ಷಾ ಗಾರ್ಡನ್​ನಲ್ಲಿ ಇವರು ತಂಗಿದ್ದು, ಅಲ್ಲಿಯೇ ಇವರ ಶವ ಪತ್ತೆಯಾಗಿದೆ. ಮೃತದೇಹದ ಪಕ್ಕದಲ್ಲೇ ಮಲಮೂತ್ರ ವಿಸರ್ಜನೆ ಇದ್ದು, ಶವ ಬೆತ್ತಲಾಗಿರುವುದು ಕಂಡು ಬಂದಿದೆ.
ನಾಳೆ ನಡೆಯಲಿರುವ ಹಳೆಯೂರು ಗ್ರಾಮ ಪಂಚಾಯತ್​ ಅಧ್ಯಕ್ಷರ ಚುನಾವಣೆ ಹಿನ್ನೆಲೆಯಲ್ಲಿ 11ಕ್ಕೂ ಅಧಿಕ ಗ್ರಾಮ ಪಂಚಾಯತ್ ಸದಸ್ಯರನ್ನು ಕರೆತಂದು ಇಲ್ಲಿ ಇರಿಸಲಾಗಿತ್ತು. ಜೆಡಿಎಸ್‌ನಿಂದ ಗೆದ್ದಿದ್ದ ದಿನೇಶ್ ಅವರನ್ನು ಅಧ್ಯಕ್ಷರಾಗಿಸುವ ಉದ್ದೇಶದಿಂದ ಗ್ರಾಮ ಪಂಚಾಯತ್ ಸದಸ್ಯರಿಗೆ ಈ ಪ್ರವಾಸ ಆಯೋಜಿಸಲಾಗಿತ್ತು. ಪ್ರವಾಸ ಕಳುಹಿಸಿದ್ದರು. ಕಳೆದ 20 ದಿನಗಳಿಂದ ಇವರನ್ನು ರಾಜ್ಯದ ವಿವಿಧ ಜಿಲ್ಲೆಗಳಿಗೆ ಪ್ರವಾಸಕ್ಕೆ ಕರೆದೊಯ್ಯಲಾಗಿದೆ. ಸ್ಥಳಕ್ಕೆ ಜಯಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಪೊಲೀಸರ ಮೇಲಿನ ಸಿಟ್ಟಿಗೆ ಹೊಯ್ಸಳ ವಾಹನಕ್ಕೇ ಪೆಟ್ರೋಲ್ ಸುರಿದು ಬೆಂಕಿ ಇಟ್ಟ…
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 + 6 =
Remember me
