ದಾವಣಗೆರೆ:ಜನಪ್ರತಿನಿಧಿಗಳೆಂದರೆ ಸಾಮಾನ್ಯವಾಗಿ ಭೇಟಿಗೆ ಸಿಗುವುದೇ ಅಪರೂಪ. ಇನ್ನು ಏನಾದರೂ ಕೆಲಸ ಆಗಬೇಕೆಂದರೆ ಗೆದ್ದ ಮೇಲೆ ಅವರು ಪ್ರಜೆಗಳ ಪಾಲಿಗೆ ಗಗನಕುಸುಮ. ಹೀಗಿರುವಾಗ ಇಲ್ಲೊಬ್ಬ ಜನಪ್ರತಿನಿಧಿ ತನ್ನ ತಮ್ಮನ ಮದುವೆಗಾಗಿ ಎರಡು ದಿನ ರಜೆ ತೆಗೆದುಕೊಳ್ಳಲಿಕ್ಕೂ ಅರ್ಜಿ ಹಾಕಿ ಮನವಿ ಮಾಡಿಕೊಂಡಿದ್ದಾರೆ.
ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಕಾರಿಗನೂರು ಗ್ರಾಮಪಂಚಾಯಿತಿಯ ಅರೇಹಳ್ಳಿ ಗ್ರಾಮದ ವಾರ್ಡ್-04ರ ಸದಸ್ಯ ಚೇತನ್​ ಕುಮಾರ್ ಅರೇಹಳ್ಳಿ ಹೀಗೆ ರಜೆ ಅರ್ಜಿ ಸಲ್ಲಿಸಿ ವಿನಂತಿಸಿಕೊಳ್ಳುವ ಮೂಲಕ ಹಲವರ ಗಮನ ಸೆಳೆದಿದ್ದಾರೆ. ಜೂನ್​ 28 ಮತ್ತು 29ರಂದು ತಮ್ಮನ ಮದುವೆ ಇರುವುದರಿಂದ 2 ದಿನಗಳ ರಜೆ ನೀಡಬೇಕು ಎಂದು ಕೋರಿ ಅವರು ಕಾರಿಗನೂರು ಗ್ರಾಮಪಂಚಾಯಿತಿ ಅಧ್ಯಕ್ಷರು ಹಾಗೂ ಪಿಡಿಒಗೆ ಅರ್ಜಿ ಸಲ್ಲಿಸಿದ್ದಾರೆ. ಮಾತ್ರವಲ್ಲ ಈ ಎರಡು ದಿನದಲ್ಲಿ ಯಾವುದೇ ಸಾಂವಿಧಾನಿಕ ಸಭೆ, ಸಾಮಾನ್ಯ ಸಭೆ ಹಾಗೂ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಆಗುವುದಿಲ್ಲ ಎಂಬುದಾಗಿ ಅನುಮತಿಯನ್ನೂ ಕೋರಿದ್ದಾರೆ. ಚೇತನ್​ ಕುಮಾರ್ ಅವರ ಈ ನಡೆಗೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ಕರೊನಾ ಮೂರನೇ ಅಲೆಯನ್ನು ತಡೆಯಬಹುದಂತೆ!; ಅದಕ್ಕಾಗಿ ಏನು ಮಾಡಬೇಕು? ಇಲ್ಲಿದೆ ಮಾಹಿತಿ…
ಚೇತನ್ ಕುಮಾರ್ ಅವರು ರಿಯಲ್ ಸ್ಟಾರ್ ಉಪೇಂದ್ರ ಅವರು ಸಂಸ್ಥಾಪನೆ ಮಾಡಿರುವ ಉತ್ತಮ ಪ್ರಜಾಕೀಯ ಪಕ್ಷ (ಯುಪಿಪಿ) ಬೆಂಬಲಿತ ಅಭ್ಯರ್ಥಿಯಾಗಿ ಗ್ರಾಮ ಪಂಚಾಯಿತಿಯಲ್ಲಿ ಆರಿಸಿ ಬಂದಿದ್ದರು. ಇವರು ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಗೆದ್ದ ಸಂದರ್ಭದಲ್ಲಿ ಉಪೇಂದ್ರ ಅವರು ಅರೇಹಳ್ಳಿಗೆ ಆಗಮಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಉಪೇಂದ್ರ ನಿರ್ದೇಶನದ ‘ಸೂಪರ್’ ಸಿನಿಮಾದಲ್ಲಿ ಇರುವಂತೆ ಅರೇಹಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಆಯಾ ಮನೆಯವರಿಂದಲೇ ಚರಂಡಿ ಸ್ವಚ್ಛಗೊಳಿಸಿ, ಅದಕ್ಕೆಂದು ಬಿಡುಗಡೆಯಾಗಿದ್ದ ಹಣವನ್ನು ಜನರಿಗೇ ಹಂಚಿದ್ದ ಚೇತನ್​, ಆ ಮೂಲಕವೂ ಕೆಲವು ದಿನಗಳ ಹಿಂದೆ ಹಲವರ ಗಮನ ಸೆಳೆದಿದ್ದರು.
ರಾಜಕೀಯ ಬಿಟ್ಟು ಇನ್ಯಾವ ಬಿಜಿನೆಸ್ಸೂ ಜಾತಿ ಆಧಾರದ ಮೇಲೆ ನಡೆಯಲ್ಲ: ಉಪೇಂದ್ರ; ‘ದಿಗ್ವಿಜಯ ನ್ಯೂಸ್’ ಸಂದರ್ಶನ ವೈರಲ್

ಟ್ವಿಟರ್​ನಲ್ಲಿ ಉಪೇಂದ್ರಗೆ 1 ಮಿಲಿಯನ್ ಫಾಲೋವರ್ಸ್; ಸ್ಯಾಂಡಲ್​ವುಡ್​​ನಲ್ಲಿ ಗರಿಷ್ಠ ಫಾಲೋವರ್ಸ್​ ಹೊಂದಿರುವ 2ನೇ ನಟ..

43 ಸಲ ಪಾಸಿಟಿವ್​, 7 ಬಾರಿ ಆಸ್ಪತ್ರೆಗೆ ದಾಖಲು; ಈತ ಜಗತ್ತಲ್ಲೇ ಅತಿ ಹೆಚ್ಚು ದಿನ ಕೋವಿಡ್​ನಿಂದ ಬಳಲಿದ ವ್ಯಕ್ತಿ!

ಮನಿಮೈಂಡೆಡ್​ ಜನಪ್ರತಿನಿಧಿಗಳಿಗೆ ಇದು ಶಾಕಿಂಗ್ ಸುದ್ದಿ: ಸಂಚಲನ ಮೂಡಿಸುವಂತಿದೆ ಆರ್​ಬಿಐನ ಈ ಕ್ರಮ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen + 18 =
Remember me
