ಬೆಂಗಳೂರು:ಸರ್ಕಾರದ ಸುಪರ್ದಿಯಲ್ಲಿರುವ ಕೆರೆಗಳನ್ನು ಗ್ರಾಮ ಪಂಚಾಯಿತಿಗಳ ನಿರ್ವಹಣೆಗೆ ವಹಿಸಿದ ಬಳಿಕವೂ ಅವುಗಳ ಮಾಲೀಕತ್ವ ಸರ್ಕಾರದ ಬಳಿಯೇ ಮುಂದುವರಿಯುತ್ತದೆ ಹಾಗೂ ಕೆರೆ ಏರಿಯಲ್ಲಿರುವ ಮರಗಳನ್ನು ಸರ್ಕಾರದ ಅನುಮತಿ ಇಲ್ಲದೆ ಕತ್ತರಿಸುವ ಅಧಿಕಾರ ಗ್ರಾ.ಪಂ.ಗಳಿಗಿರುವುದಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ. ಈ ಬಗ್ಗೆ ಸುತ್ತೋಲೆ ಹೊರಡಿಸುವಂತೆಯೂ ಸರ್ಕಾರಕ್ಕೆ ನಿರ್ದೇಶಿಸಿದೆ.
ಕೋಲಾರದ ಬಂಗಾರಪೇಟೆ ತಾಲೂಕಿನ ಮಾರಿಕುಪ್ಪಂ ಗ್ರಾ.ಪಂ. ವ್ಯಾಪ್ತಿಯ ಕೆರೆ ಏರಿ ಜಾಗದಲ್ಲಿರುವ ಮರಗಳನ್ನು ಕತ್ತರಿಸಲು 2012ರಲ್ಲಿ ಕರೆಯಲಾಗಿದ್ದ ಹರಾಜು ಪ್ರಶ್ನಿಸಿ ಸ್ಥಳೀಯ ನಿವಾಸಿ ಪಿ.ಎಂ.ವೆಂಕಟರಾಮ ರೆಡ್ಡಿ ಸಲ್ಲಿಸಿದ್ದ ಪಿಐಎಲ್ ಅನ್ನು ಸೋಮವಾರ ವಿಚಾರಣೆ ನಡೆಸಿದ ಸಿಜೆ ಎ.ಎಸ್. ಓಕ್ ನೇತೃತ್ವದ ವಿಭಾಗೀಯ ಪೀಠ ಈ ನಿರ್ದೇಶನ ನೀಡಿದೆ. ಕರ್ನಾಟಕ ಭೂ ಕಂದಾಯ ಕಾಯ್ದೆ-1964ರ ಸೆಕ್ಷನ್ 67(1) ಪ್ರಕಾರ ಕೆರೆಗಳು ಮತ್ತು ಕೆರೆ ಏರಿ ಪ್ರದೇಶಗಳು ಸರ್ಕಾರದ ಸ್ವತ್ತಾಗಿರುತ್ತದೆ.
ಸೆಕ್ಷನ್ 2(14)ರ ಪ್ರಕಾರ ಕೆರೆ ಮತ್ತು ಕೆರೆ ಏರಿ ಪ್ರದೇಶವೂ ಭೂಮಿ ಎಂದೇ ವ್ಯಾಖ್ಯಾನಿಸುತ್ತದೆ. ಆದ್ದರಿಂದ, ಕೆರೆ ಏರಿ ಪ್ರದೇಶದಲ್ಲಿ ಬೆಳೆದಿರುವ ಮರಗಳು ಸರ್ಕಾರದ ಸ್ವತ್ತು ಎನಿಸಿಕೊಳ್ಳುತ್ತವೆ. ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯ್ದೆ-1993ರ ಸೆಕ್ಷನ್ 59(1)(ಬಿ) ಪ್ರಕಾರ ಕೆರೆ ಮತ್ತು ಕೆರೆ ಏರಿ ಪ್ರದೇಶದ ನಿರ್ವಹಣೆಯನ್ನು ಗ್ರಾ.ಪಂ.ಗೆ ವಹಿಸಬಹುದಾಗಿದೆ. ಹಾಗೆಂದ ಮಾತ್ರಕ್ಕೆ ಅವುಗಳ ಮಾಲೀಕತ್ವ ವರ್ಗಾವಣೆ ಎಂದರ್ಥವಲ್ಲ ಎಂದು ಕೋರ್ಟ್ ಆದೇಶಿಸಿದೆ.
ಡಿಸಿ ಆದೇಶ ರದ್ದು:ಕೆರೆಯ ಮಾಲೀಕತ್ವವನ್ನು ಗ್ರಾ.ಪಂ.ಗೆ ವರ್ಗಾವಣೆ ಮಾಡಲು ಕಾನೂನಿನಲ್ಲಿ ಅವಕಾಶವಿಲ್ಲ. ಕೆರೆ ಏರಿಯ ಪ್ರದೇಶದಲ್ಲಿರುವ ಮರಗಳು ಸರ್ಕಾರದ ಸುಪರ್ದಿಯಲ್ಲಿಯೇ ಮುಂದುವರಿಯಲಿದ್ದು, ಸರ್ಕಾರದ ಪೂರ್ವಾನುಮತಿ ಇಲ್ಲದೇ ಅವುಗಳನ್ನು ಕತ್ತರಿಸಲು ಹರಾಜು ಹಾಕಲು ಅವಕಾಶವಿಲ್ಲ. ಆದ್ದರಿಂದ, ಮರಗಳ ಹರಾಜು ಪ್ರಕ್ರಿಯೆ ಪ್ರಶ್ನಿಸಿದ ಅರ್ಜಿ ವಜಾಗೊಳಿಸಿ ಡಿಸಿ ಆದೇಶ ಕಾನೂನುಬಾಹಿರ ಎಂದು ಅಭಿಪ್ರಾಯಪಟ್ಟ ಪೀಠ, ಡಿಸಿ ಆದೇಶ ರದ್ದುಪಡಿಸಿತು.
ಪ್ರಕರಣವೇನು?:ಮಾರಿಕುಪ್ಪಂ ಗ್ರಾ.ಪಂ. ವ್ಯಾಪ್ತಿಯ ಕೆರೆ ಏರಿಯ ಜಾಗದಲ್ಲಿನ ಮರಗಳ ಕತ್ತರಿಸಲು 2012ರಲ್ಲಿ ಹರಾಜು ನಡೆಸಲಾಗಿತ್ತು. ಮರ ಕಡಿಯಲು, ಸಾಗಿಸಲು ವೆಂಕಟರತ್ನಯ್ಯ ಎಂಬುವರು ಸಲ್ಲಿಸಿದ್ದ ಬಿಡ್ ಅನ್ನು ಸಮ್ಮತಿಸಲಾಗಿತ್ತು. ಅದಕ್ಕಾಗಿ ವೆಂಕಟರತ್ನಯ್ಯ 7.30 ಲಕ್ಷ ರೂ. ಠೇವಣಿ ಇಟ್ಟಿದ್ದರು. ಮರಗಳನ್ನು ಹರಾಜು ಹಾಕಿದ ಗ್ರಾ.ಪಂ. ಕ್ರಮ ಪ್ರಶ್ನಿಸಿ ಅರ್ಜಿದಾರರು ಸಲ್ಲಿಸಿದ್ದ ಅರ್ಜಿಯನ್ನು 2012ರ ಜೂ.19ರಂದು ವಜಾಗೊಳಿಸಿದ್ದ ಜಿಲ್ಲಾಧಿಕಾರಿ, 40 ಹೆಕ್ಟೇರ್ ಇರುವ ಕೆರೆ ಏರಿ ಪ್ರದೇಶದ ನಿರ್ವಹಣೆಯನ್ನು ಗಾಪಂಗೆ ಕೊಡಲಾಗಿದೆ. ಆದ್ದರಿಂದ, ಅಲ್ಲಿನ ಮರಗಳನ್ನು ಕತ್ತರಿಸಲು ಹರಾಜು ನಡೆಸಿರುವ ಕ್ರಮದಲ್ಲಿ ಲೋಪ ಇಲ್ಲ ಎಂದು ತಿಳಿಸಿದ್ದರು. ಡಿಸಿ ಆದೇಶ ರದ್ದುಪಡಿಸಲು ಹಾಗೂ ಕೆರೆ ಏರಿಯಲ್ಲಿರುವ ಮರಗಳ ಸಂರಕ್ಷಣೆ ಮಾಡಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ 2013ರಲ್ಲಿ ಪಿಐಎಲ್ ಸಲ್ಲಿಸಿದ್ದರು.
ವರದಿ ಬಂದ ಬಳಿಕ ಹಣವನ್ನು ಹಿಂದಿರುಗಿಸಿ:ಬಿಡ್​ದಾರರು ಎಷ್ಟು ಮರಗಳನ್ನು ಕತ್ತರಿಸಿದ್ದಾರೆ ಮತ್ತು ಆ ಮರಗಳಿಗೆ ಮರುಪಾವತಿ ಮಾಡಬೇಕಿರುವ ಹಣವನ್ನು ನಿರ್ಧರಿಸುವ ಸಂಬಂಧ ವಿಚಾರಣೆ ನಡೆಸಿ ವರದಿ ಸಲ್ಲಿಸಲು ಕಂದಾಯ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರನ್ನು ಡಿಸಿ ನೇಮಿಸಬೇಕು. ಆ ಅಧಿಕಾರಿಯು ಗ್ರಾ.ಪಂ. ಹಾಗೂ ಬಿಡ್​ದಾರ ವೆಂಕಟರತ್ನಯ್ಯ ಅವರ ವಾದ ಆಲಿಸಿ 2 ತಿಂಗಳಲ್ಲಿ ವಿಚಾರಣೆ ಪೂರ್ಣಗೊಳಿಸಿ ವರದಿ ಸಲ್ಲಿಸಬೇಕು. ವರದಿ ಬಂದ ತಿಂಗಳ ಒಳಗೆ ಕತ್ತರಿಸಲಾಗಿರುವ ಮರಗಳ ಮೌಲ್ಯವನ್ನು ಕಡಿತಗೊಳಿಸಿಕೊಂಡು ಉಳಿದ ಹಣವನ್ನು ಬಿಡ್​ದಾರರಿಗೆ ಹಿಂದಿರುಗಿಸಬೇಕು ಎಂದು ಗ್ರಾ.ಪಂ.ಗೆ ಹೈಕೋರ್ಟ್ ಆದೇಶಿಸಿದೆ.
ಸರ್ಕಾರದ ಕರ್ತವ್ಯ:ಕೆರೆ ಏರಿಯನ್ನು ನಿರ್ವಹಣೆಗಾಗಿ ಮಾತ್ರ ಸರ್ಕಾರ ಗ್ರಾ.ಪಂ.ಗೆ ವಹಿಸಿದೆ. ಅಲ್ಲಿ ಸ್ವಾಭಾವಿಕವಾಗಿ ಮರಗಳು ಬೆಳೆದಿದ್ದು, ಕಳೆದ 39 ವರ್ಷಗಳಿಂದ ಅಸ್ತಿತ್ವದಲ್ಲಿವೆ. ಕೆರೆ ಏರಿಯ ಮಾಲೀತ್ವ ಸರ್ಕಾರದ ಅಧೀನದಲ್ಲೇ ಇರಲಿದ್ದು, ಮರಗಳನ್ನು ಕತ್ತರಿಸಲು ಗ್ರಾ.ಪಂಗೆ ಯಾವುದೇ ಅಧಿಕಾರ ಇಲ್ಲ. ಅಲ್ಲಿನ ಮರಗಳನ್ನು ಸಂರಕ್ಷಣೆ ಮಾಡುವುದು ಸರ್ಕಾರದ ಕರ್ತವ್ಯವಾಗಿದೆ ಎಂದು ಅರ್ಜಿದಾರರು ವಾದಿಸಿದ್ದರು. 2015ರ ನವೆಂಬರ್​ನಲ್ಲಿ ಹೈಕೋರ್ಟ್ ಮರಗಳನ್ನು ಕತ್ತರಿಸದಂತೆ ತಡೆಯಾಜ್ಞೆ ನೀಡಿತ್ತು.
ರಾಜಕಾರಣಿಗಳೇ ಈತನ ಟಾರ್ಗೆಟ್, ಬಲೆ ಬೀಸಿದ್ದು ಒಬ್ಬಿಬ್ಬರಿಗಲ್ಲ!; ಶಾಸಕರ ಹೆಸರಿನಲ್ಲಿ ಶಾಸಕಿಗೇ ವಂಚಿಸಿ ಕೊನೆಗೂ ಸಿಕ್ಕಿಬಿದ್ದ..

ಎಸ್​ಎಸ್​ಎಲ್​ಸಿಯಲ್ಲಿ ಅಂಕ ಕಡಿಮೆ ಬರಬಹುದೇನೋ ಎಂಬ ಭಯದಿಂದ ಆತ್ಯಹತ್ಯೆಗೆ ಯತ್ನಿಸಿದ ವಿದ್ಯಾರ್ಥಿನಿ

ವಧುವಿಗೆ ಹತ್ತನೇ ಕ್ಲಾಸು, ವರನಿಗೆ 30 ವರ್ಷ; ಬಾಲ್ಯವಿವಾಹ ಮಾಡಿಸಿದವರೆಲ್ಲರ ಬಂಧನ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × two =
Remember me
