ಮೆಳೆಕೋಟೆ:ಅಂಗನವಾಡಿ ಶಿಕ್ಷಕಿ ನೇಮಕ ವಿಚಾರಕ್ಕೆ‌ ಗ್ರಾಮಸ್ಥರು ಕಿರಿಕ್ ಮಾಡಿದ್ದು, ತಮ್ಮ ಗ್ರಾಮಕ್ಕೆ ಪಕ್ಕದ ಗ್ರಾಮದ ಮಹಿಳೆಯನ್ನ ಅಂಗನವಾಡಿ ಶಿಕ್ಷಕಿಯನ್ನಾಗಿ ನೇಮಕ ಮಾಡಿದ್ದಾರೆ ಎಂದು ಜನರು ಆಕ್ರೋಶ ವ್ಯಕ್ತಪಡಿಸಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಮೆಳೆಕೋಟೆ ಗ್ರಾಮದಲ್ಲಿ ನಡೆದಿದೆ.
ಇದನ್ನೂ ಓದಿ:ಬೇಗ ಬಂದು ಬೇಗನೆ ಹೋದ ಎಕ್ಸ್​ಪ್ರೆಸ್​​ ರೈಲು: ನಿಗದಿತ ಸಮಯಕ್ಕೆ ಬಂದ ಪ್ರಯಾಣಿಕರು ನಿಲ್ದಾಣದಲ್ಲಿ ಟ್ರೈನ್​ ಕಾಣದೇ ಕಂಗಾಲು
ಆನಂದಮ್ಮ ಮೆಳೆಕೋಟೆ ಅಂಗನವಾಡಿಗೆ ಶಿಕ್ಷಕಿಯಾಗಿ ನೇಮಕವಾಗಿದ್ದು, ಮೊದಲು ರಾಜಘಟ್ಟದಲ್ಲಿ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದರು. ಬಳಿಕ ಸಹಾಯಕಿಯನ್ನು ಅಂಗನವಾಡಿ ಶಿಕ್ಷಕಿಯಾಗಿ ಮೇಲ್ದರ್ಜೆಗೆ ಏರಿಸಿದ್ದ ಸರ್ಕಾರ, ಗ್ರಾಮದಿಂದ ಮೂರು ಕಿಮೀ ವ್ಯಾಪ್ತಿಯಲ್ಲಿ ಕೆಲಸಕ್ಕೆ ನೇಮಕ ಮಾಡಿತ್ತು. ಆಗ ಮೆಳೆಕೋಟೆ ಪಕ್ಕದ ದೊಡ್ಡರಾಯಪ್ಪನಹಳ್ಳಿ ಯಲ್ಲಿ ವಾಸವಿರುವ ಆನಂದಮ್ಮ, ಅಲ್ಲಿಂದ ಮೆಳೆಕೋಟೆಗೆ ಶಿಕ್ಷಕಿಯಾಗಿ ನೇಮಕವಾಗಿದ್ದರು. ಈ ವೇಳೆ ಶಿಕ್ಷಕಿಗೆ ಕೆಲಸ‌ ಮಾಡಲು ಗ್ರಾಮಸ್ಥರು ಅಡ್ಡಿಪಡಿಸಿದ್ದು, ನಮ್ಮ ಊರಿನವರೇ ಶಿಕ್ಷಕಿ ಆಗಬೇಕು ಎಂದು ಕೆಲಸ ಮಾಡಲು ಬಿಡದೆ ಕಿರಿಕ್ ಮಾಡುತ್ತಿದ್ದಾರೆ ಆರೋಪಿಸಲಾಗಿದೆ.
ತಾನು ನೇಮಕ‌ವಾಗಿ ಎರಡು ತಿಂಗಳು ಆಗಿದೆ. ತಾನು ದಲಿತ ಮಹಿಳೆ ಎಂದು ಕೆಲಸ ಮಾಡಲು ಬಿಡುತ್ತಿಲ್ಲ. ಅಲ್ಲದೇ, ಅಂಗನವಾಡಿ ಒಳಕ್ಕೆ ಬಿಡದೆ, ಬಾಗಿಲಿನಲ್ಲಿಯೇ ನಿಲ್ಲಿಸಿ ಕಿರುಕುಳ ನೀಡುತ್ತಿದ್ದಾರೆ ಎಂದು ಶಿಕ್ಷಕಿ ಆನಂದಮ್ಮ ಆರೋಪ ಮಾಡಿದ್ದಾರೆ. ಶಿಕ್ಷಕಿಗೆ ಗ್ರಾಮಸ್ಥರ ವಿರೋಧ ಹಿನ್ನೆಲೆ ಅಧಿಕಾರಿಗಳಿಂದ‌ ಮನವೊಲಿಸುವ ಕಾರ್ಯ ನಡೆದಿದ್ದು, ಈ ಸಂಬಂಧ ಮಹಿಳಾ ಮತ್ತು ಮಕ್ಕಳ‌ ಕಲ್ಯಾಣ ಇಲಾಖೆ ಅಧಿಕಾರಿಗಳು ಸೋಮವಾರ ಗ್ರಾಮಸ್ಥರ ಜೊತೆ ಸಭೆ ನಡೆಸಲಿದ್ದಾರೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen + 4 =
Remember me
