ಗದಗ:ತೀರಾ ತುರ್ತು ಪರಿಸ್ಥಿತಿಯಲ್ಲಿ ಇದ್ದಾಗ ಆ್ಯಂಬುಲೆನ್ಸ್ ಸಿಗದ, ಶವ ಸಾಗಿಸಲೂ ವಾಹನ ಸಿಗದ ಪ್ರಕರಣಗಳು ಸಾಕಷ್ಟು ವರದಿಯಾಗಿದೆ. ಇಲ್ಲೊಂದು ಕಡೆ ಅಂಥದ್ದೇ ಒಂದು ಪ್ರಕರಣ ನಡೆದಿದ್ದು, ಶವ ಸಾಗಿಸಲು ಕೆಸರಲ್ಲೇ ಪರದಾಡಿಕೊಂಡು ಸಾಗಿದ್ದು ಕಂಡುಬಂದಿದೆ.
ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಹಳ್ಳಿಕೇರಿ ಗ್ರಾಮದಲ್ಲಿ ಇಂಥದ್ದೊಂದು ಪ್ರಕರಣ ನಡೆದಿದೆ. ಕರಿಯಪ್ಪ ಮಾಯನ್ನವರ (60) ವರ್ಷ ಅವರ ಶವ ತರಲು ಹೀಗೊಂದು ಪರದಾಟ ನಡೆಸಬೇಕಾದ ಪ್ರಸಂಗ ಎದುರಾಗಿತ್ತು.
ಜಮೀನಿಗೆ ಹೋಗಿದ್ದಾಗ ಕರಿಯಪ್ಪ ಸಾವಿಗೀಡಾಗಿದ್ದು, ಅದನ್ನು ಅಲ್ಲಿಂದ ತೆಗೆದುಕೊಂಡು ಬರುವ ದಾರಿಯ ತಗ್ಗಿನಲ್ಲಿ ಕೆಸರು ತುಂಬಿಕೊಂಡಿದ್ದು, ಗ್ರಾಮಸ್ಥರು ಆ ಕೆಸರಲ್ಲೇ ಕಷ್ಟಪಟ್ಟು ಪಾರ್ಥಿವ ಶರೀರ ಸಾಗಿಸುವಂತಾಗಿತ್ತು. ಹಳ್ಳದ ರಸ್ತೆಯನ್ನು ದುರಸ್ತಿ ಮಾಡಬೇಕು ಎಂದು ಗ್ರಾಮಸ್ಥರ ಒತ್ತಾಯಿಸಿದ್ದಾರೆ.
ಕೆಜಿಎಫ್​-2 ಚಿತ್ರದ ಪ್ರೇರಣೆ; 72 ಗಂಟೆಗಳಲ್ಲಿ 3 ಸೆಕ್ಯುರಿಟಿ ಗಾರ್ಡ್​ಗಳ ಕೊಲೆ: ನಿದ್ರೆಗೆಟ್ಟ ಕೈದಿಗಳು..
ಬೆಳಗಾಗುವುದರೊಳಗೆ ಅಂಗಡಿಯೇ ನಾಪತ್ತೆ!; ಜಮೀನು ವಿವಾದ ಕಾರಣವೇ?
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × one =
Remember me
