ತುಮಕೂರು:ಪತ್ನಿಯ ಅಂತ್ಯಸಂಸ್ಕಾರ ಮಾಡಲು ಪತಿ ಬಾರದಿದ್ದಕ್ಕೆ ಗ್ರಾಮಸ್ಥರೆಲ್ಲ ಸೇರಿ ಗಂಡನ ಮನೆಯ ಬಾಗಿಲಿಗೆ ಮೃತದೇಹವನ್ನು ಅಡ್ಡಲಾಗಿ ಇಟ್ಟು ಹೊದ ಘಟನೆ ಕೊರಟಗೆರೆ ತಾಲೂಕಿನ ನರಸೀಪುರ ಗ್ರಾಮದಲ್ಲಿ ನಡೆದಿದೆ.
ಕಲಾವತಿ (26) ಮೃತ ದುರ್ದೈವಿ. ಈಕೆ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾಳೆ. ಗಂಡನೇ ಕೊಲೆ ಮಾಡಿ ಬಾವಿಗೆ ಬೀಸಾಡಿರುವ ಶಂಕೆ ವ್ಯಕ್ತವಾಗಿದೆ. ಅಕ್ರಮ ಸಂಬಂಧ ಪ್ರಶ್ನೆ ಮಾಡಿದ್ದಕ್ಕೆ ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಗಂಡ ಸೋಮಶೇಖರ್ ವಿರುದ್ಧ ಕಲಾವತಿ ಕುಟುಂಬಸ್ಥರು ಈ ಆರೋಪ ಮಾಡಿದ್ದಾರೆ.
ಇದನ್ನೂ ಓದಿ:ಬಿಳಿ ಮೊಟ್ಟೆ vs ಕಂದು ಮೊಟ್ಟೆ ಯಾವುದು ಆರೋಗ್ಯಕರ? ಇಲ್ಲಿದೆ ಉಪಯುಕ್ತ ಮಾಹಿತಿ…
ಪತ್ನಿಯಿದ್ದರೂ ಮನೆಯ ಪಕ್ಕದ ಶೆಡ್​ನಲ್ಲಿ ಅನ್ಯ ಸ್ತ್ರೀಯನ್ನು ಸೋಮಶೇಖರ್​ ತಂದಿಟ್ಟುಕೊಂಡಿದ್ದನಂತೆ. ಈ ವಿಚಾರವಾಗಿ ಪದೇಪದೆ ಗಂಡ-ಹೆಂಡತಿಯ ನಡುವೆ ಗಲಾಟೆ ನಡೆಯುತ್ತಿತ್ತಂತೆ. ನಿನ್ನೆಯೂ ಇದೇ ವಿಚಾರಕ್ಕೆ ಗಲಾಟೆ ನಡೆದು ಗಂಡನೇ ಹೆಂಡತಿಯನ್ನು ಬಾವಿಗೆ ತಳ್ಳಿ ಕೊಲೆ ಮಾಡಿದ್ದಾನೆ ಆರೋಪಿಸಲಾಗಿದೆ.
ಘಟನೆಯ ಬಗ್ಗೆ ಮಾಹಿತಿ ತಿಳಿದ ಕೂಡಲೇ ಘಟನಾ ಸ್ಥಳಕ್ಕೆ ಕೋರಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.(ದಿಗ್ವಿಜಯ ನ್ಯೂಸ್​)
IRS ಅಧಿಕಾರಿಯಿಂದ ದುಬಾರಿ ಗಿಫ್ಟ್​ ಪಡೆದ ನಟಿ ನವ್ಯಾಗೆ ಇಡಿ ಶಾಕ್​! 10 ಬಾರಿ ಭೇಟಿ, ಇಬ್ಬರ ಸಂಬಂಧದ ಬಗ್ಗೆ ಶಂಕೆ

ವಯಸ್ಸು 48 ಆದ್ರೂ ನೀವಿನ್ನೂ ಮದ್ವೆ ಆಗಿಲ್ಲ ಏಕೆ? ನಟಿ ನಗ್ಮಾ ಕೊಟ್ಟ ಉತ್ತರ ವೈರಲ್​!

ಬಂಧಿತ IRS ಅಧಿಕಾರಿ ಜತೆ ನವ್ಯಾ ಡೇಟಿಂಗ್​? ದುಬಾರಿ ಗಿಫ್ಟ್​ ರಹಸ್ಯ ಹಿಂದೆ ಬಿದ್ದ ಇಡಿ, ನಟಿಯ ಕುಟುಂಬಸ್ಥರು ಹೇಳಿದ್ದಿಷ್ಟು…

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:two × four =
Remember me
