ಕೊಪ್ಪಳ:ಅತ್ತ ಕಾಂಗ್ರೆಸ್​ನಲ್ಲಿ ಸಿಎಂ ಸ್ಥಾನಕ್ಕೆ ಪೈಪೋಟಿ ನಡೆಯುತ್ತಿದ್ದು, ಇತ್ತ ಜನರು ಕೂಡ ಕರೆಂಟ್ ಬಿಲ್ ಕಾಂಗ್ರೆಸ್​ನವರನ್ನೆ ಕೇಳಿ ಎನ್ನುತ್ತಿದ್ದಾರೆ.
ಕಾಂಗ್ರೆಸ್​ಗೆ ಬಹುಮತ ಸಿಕ್ಕ ಹಿನ್ನೆಲೆ ವಿದ್ಯುತ್ ಬಿಲ್ ಪಾವತಿ ಮಾಡಲ್ಲ ಎಂದು ಜನರು ಹೇಳುತ್ತಿದ್ದಾರೆ. ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಜಮಾಪುರ ಗ್ರಾಮದಲ್ಲಿ ಜನರು ಬಿಲ್​ ಪಾವತಿ ಮಾಡಿಸಿಕೊಳ್ಳಲು ಬಂದ ಕೆಇಬಿ ಬಿಲ್ ಕಲೆಕ್ಟರ್​ನನ್ನೇ ತರಾಟೆಗೆ ತೆಗೆದುಕೊಂಡಿರುವ ಘಟನೆ ನಡೆದಿದೆ.
“ಕಾಂಗ್ರೆಸ್ ಸರ್ಕಾರ ಬಂದಿದೆ ಅವರ ಬಳಿಯೆ ಬಿಲ್ ತಗೆದುಕೋ ನಾವು ಬಿಲ್ ಕಟ್ಟಲ್ಲ. ಬೇಕಾದರೆ ನಿನ್ನ ಆಫೀಸರ್​ ಬಳಿ ಹೋಗಿ ಹೇಳು” ಎಂದು ಜನರು ಹೇಳುತ್ತಿದ್ದು “ಗ್ರಾಮದಲ್ಲಿ ಯಾರ ಮನೆಗೂ ಹೋಗಿ ಬಿಲ್ ಕೇಳಬೇಡ. ಕಮರ್ಷಿಯಲ್ ಮೀಟರ್ ಗೆ ಮಾತ್ರ ಬಿಲ್ ಕೇಳು ಮನೆಗಳ ತಂಟೆಗೆ ಬರಬೇಡ” ಎಂದು ಬಿಲ್ ಕಲೆಕ್ಟರ್​ಗೆ ಜನರು ಕ್ಲಾಸ್ ಕೂಡ ತಗೆದುಕೊಂಡಿದ್ದಾರೆ. ಇಷ್ಟು ನಡೆದು ಬಿಲ್ ಕಲೆಕ್ಟರ್​ರನ್ನು ಗ್ರಾಮದಿಂದ ಗ್ರಾಮಸ್ಥರು ಹೊರ ಕಳಿಸಿದ್ದಾರೆ.
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:5 × one =
Remember me
