ಚಿಕ್ಕೋಡಿ:ಗ್ರಾಮಕ್ಕೆ ಆಗಮಿಸಿದ ಶಾಸಕರಿಗೆ ಜನರು ಮುತ್ತಿಗೆ ಹಾಕಿ ತರಾಟೆಗೆ ತೆಗೆದುಕೊಂಡಿದ್ದು, ಜನರ ಮಧ್ಯೆ ಸಿಲುಕಿದ ಅವರು ಗಲಿಬಿಲಿಯಾದಂಥ ಪ್ರಸಂಗವೂ ನಡೆದಿದೆ. ಬೆಳಗಾವಿ ಜಿಲ್ಲೆಯಲ್ಲಿ ಇಂಥದ್ದೊಂದು ಘಟನೆ ನಡೆದಿದೆ.
ಕಾಗವಾಡ ಶಾಸಕ ಶ್ರೀಮಂತ ಪಾಟೀಲ್ ಅವರೇ ಜನರ ತರಾಟೆಗೆ ಒಳಗಾದವರು. ಇವರು ಇಂದು ಇಲ್ಲಿನ ಕಿರಣಗಿ ಗ್ರಾಮದಲ್ಲಿನ ಶಾಲೆಯೊಂದರ ಉದ್ಘಾಟನೆಗೆ ಆಗಮಿಸಿದ್ದಾಗ ಈ ಸನ್ನಿವೇಶ ಕಂಡುಬಂದಿದೆ.
ಗ್ರಾಮಕ್ಕೆ ಬಂದ ಶ್ರೀಮಂತ ಪಾಟೀಲ್​ ಅವರಿಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು, ನಮ್ಮೂರಿನ ರಸ್ತೆ, ಕುಡಿಯುವ ನೀರು, ಶೌಚಾಲಯ ಕಾಮಗಾರಿ ಯಾವಾಗ ಮಾಡ್ತೀರಿ ಎಂದು ಮೇಲಿಂದ ಮೇಲೆ ಪ್ರಶ್ನೆ ಹಾಕಿದರು.
ಕಳೆದ ಎರಡು ವರ್ಷಗಳಿಂದ ಕರೊನಾದಿಂದಾಗಿ ಸರ್ಕಾರದ ಬಳಿ ಹಣವಿಲ್ಲ. ನನಗಷ್ಟೇ ಅಲ್ಲ, ಸರ್ಕಾರ ಯಾರಿಗೂ ಅಭಿವೃದ್ದಿಗೆ ಹಣ ಕೊಟ್ಟಿಲ್ಲ. ಆದರೆ ನಾನು ನನ್ನ ಪ್ರಯತ್ನದಿಂದ ಮೂರುಪಟ್ಟು ತಂದಿದ್ದೆನೆ ಎಂದು ಶಾಸಕ ಪಾಟೀಲ್ ಉತ್ತರ ನೀಡಿದರು. ಅದಾಗ್ಯೂ ಜನರು ಮೊದಲು ನಮ್ಮೂರ ರಸ್ತೆ, ಶೌಚಾಲಯ, ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಿ ಎಂದು ಒತ್ತಾಯಿಸಿದರು.
ದ್ವಿಚಕ್ರ ವಾಹನಕ್ಕೆ ಮಾಜಿ ಶಾಸಕರ ಕಾರು ಡಿಕ್ಕಿ, ರೈತರೊಬ್ಬರ ಕಾಲು ಮುರಿತ..

ಕಾರು-ಬೈಕ್ ಭೀಕರ ಅಪಘಾತ; ಮೂವರು ಸ್ಥಳದಲ್ಲೇ ಸಾವು, ಕಾರಲ್ಲಿದ್ದವರು ಪರಾರಿ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × three =
Remember me
