ಬೆಂಗಳೂರು:ಇತ್ತೀಚೆಗಷ್ಟೆ ಅಂತರಾಷ್ಟ್ರೀಯ ವೈದ್ಯ ದಿನಾಚರಣೆ ನಡೆದಿದ್ದು,ವೈದ್ಯರ ಸೇವೆಯನ್ನು ದೀರ್ಘ ಕಾಲದ ನಂತರವೂ ನೆನೆಪಿಸಿಕೊಳ್ಳುವ ಉದ್ದೇಶದಿಂದ ಮಾಯಾ ಫಿಲ್ಮ್ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ಆವರಣದಲ್ಲಿ ಆಯೋಜಿಸಿರುವ ‘ವಿಂಟೇಜ್ ಸಲ್ಯೂಟ್’ ಫೋಟೋ ಪ್ರದರ್ಶನ ಜನರ ಮೆಚ್ಚುಗೆಗೆ ಕಾರಣವಾಗಿದೆ.
ಬಸವನಗುಡಿಯು ಬೆಂಗಳೂರಿನ ಸಾಂಸ್ಕೃತಿಕ ಮತ್ತು ಪಾರಂಪರಿಕ ಮಹತ್ವವನ್ನು ಹೊಂದಿರುವ ಏರಿಯಾ.ಈ ಭಾಗದಲ್ಲಿ ಶತಮಾನದ ಹಿಂದಿನಿಂದ ವೈದ್ಯರಾಗಿ ಸೇವೆ ಮಾಡಿದ ಲೆಜೆಂಡರೀಸ್ ಕ್ಯಾರೆಕ್ಟರ್‌ಗಳನ್ನು ಜನರಿಗೆ ಪರಿಚಯಿಸಬೇಕೆಂಬ ವಿಭಿನ್ನ ಉದ್ದೇಶದೊಂದಿಗೆ ಮಾಯಾ ಫಿಲ್ಮ್ ಮುಖ್ಯಸ್ಥೆ ಮಾಯಾ ಅವರು ವಿಭಿನ್ನ ಪರಿಕಲ್ಪನೆಗೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಜು.1ರಂದು ಅಂತರಾಷ್ಟ್ರೀಯ ವೈದ್ಯ ದಿನಾಚರಣೆ ಅಂಗವಾಗಿ ನಡೆದ ವೈದ್ಯ ದಿಗ್ಗಜರೊಂದಿಗೆ ಸಂವಾದ ಕಾರ್ಯಕ್ರಮವು ಜನರನ್ನು ಭಾವನಾತ್ಮಕಗೊಳಿಸಿತು.ಜು.2ರಿಂದ ವಿಂಟೇಜ್ ಸಲ್ಯೂಟ್ ಹೆಸರಿನಲ್ಲಿ ಬಸವನಗುಡಿ ಸುತ್ತಮುತ್ತ ವೈದ್ಯರಾಗಿ ಸೇವೆ ಸಲ್ಲಿಸಿ ಮರೆಯಾಗಿರುವ ಸುಮಾರು34ವೈದ್ಯಶಿರೋಮಣಿಗಳ ಫೋಟೋ ಪ್ರದರ್ಶನ ಆಯೋಜಿಸಲಾಗಿತ್ತು.ಕಳೆದ ಎರಡು ತಿಂಗಳಿನಿಂದ ಸಂಗ್ರಹಿಸಲಾಗಿದ್ದ ಶತಮಾನಗಳ ಹಿಂದಿನ ೆಟೋಗಳನ್ನು ಪರಿಕಲ್ಪನೆಗೆ ಅನುಗುಣವಾಗಿ ಕ್ರಾಪ್ ಮಾಡಿ,ರೀವರ್ಕ್ ಮೂಲಕ ಪ್ರದರ್ಶನಕ್ಕೆ ಇಡಲಾಗಿತ್ತು.ಫೋಟೋಗಳ ಜೊತೆಗೆ ಅವರ ಸಂಕ್ಷಿಪ್ತ ಮಾಹಿತಿಯನ್ನು ಇಡಲಾಗಿದೆ.ಪ್ರದರ್ಶನವನ್ನು ಜು.7ರವರೆಗೆ ನಿಗದಿಗೊಳಿಸಲಾಗಿತ್ತು.ಆದರೆ ಸಾರ್ವಜನಿಕರ ಒತ್ತಾಯದ ಮೇರೆಗೆ ಜು.14ರವರೆಗೆ ಮುಂದುವರೆಸಲು ಆಯೋಜಕರು ನಿರ್ಧರಿಸಿದ್ದಾರೆ.
ಇದೊಂದ ವಿಭಿನ್ನ ಮತ್ತು ವಿಶಿಷ್ಟ ಪ್ರಯತ್ನ.ಪ್ರತಿಯೊಬ್ಬರು ಬಾಲ್ಯದಲ್ಲಿ ವೈದ್ಯರಿಂದ ಚಿಕಿತ್ಸೆಗೆ ಒಳಗಾಗಿರುತ್ತಾರೆ.ಆದರೆ ವೃದ್ಧಾಪ್ಯದಲ್ಲಿ ಅವರನ್ನು ನೆನೆದು ನಮಿಸುವ ಅದ್ಭುತ ಅವಕಾಶವನ್ನು ಮಾಯಾ ಫಿಲ್ಮ್ ಒದಗಿಸಿ ಕೊಟ್ಟಿದೆ.ನೆಟ್ಟಕಲ್ಲಪ್ಪ ಸರ್ಕಲ್ ಬಳಿ ಇರುವ ಶಾಮಣ್ಣ ಪಾರ್ಕ್ ಅವರ ಮಗ ಕೆ.ಎಸ್.ಶ್ರೀನಿವಾಸ್ ಅವರು ಬಹಳ ಪ್ರಸಿದ್ಧ ವೈದ್ಯರಾಗಿದ್ದರು ಅವರ ಫೋಟೋ ಇಲ್ಲಿ ಹಾಕಿದ್ದಾರೆ.ಅದನ್ನು ನೋಡಿ ಮನಸ್ಸು ತುಂಬಿ ಬಂತು.
–ಜಿ.ಎಸ್.ರಾಮಪ್ರಸಾದ್,ನಿವೃತ್ತ ಬ್ಯಾಂಕ್ ನೌಕರ.
ವೈದ್ಯಕೀಯ ಕ್ಷೇತ್ರ ಹಿಂದಿನ ಕಾಲಕ್ಕೂ,ಈಗಿನ ಕಾಲಕ್ಕೂ ಅಜಗಜಾಂತರ ವ್ಯತ್ಯಾಸ ಇದೆ.ಹಿಂದಿನ ಕಾಲದ ವೈದ್ಯರ ಸೇವೆಗೆ ಸರಿಸಾಟಿಯೇ ಇರಲಿಲ್ಲ.ಭಾವನಾತ್ಮಕ ಸಂಬಂಧ ಇರುವ ವೈದ್ಯರನ್ನು ನೆನೆದು ಗೌರವಿಸುವ ಉದ್ದೇಶದಿಂದ ಈ ಪ್ರದರ್ಶನ ಏರ್ಪಡಿಸಲಾಗಿದೆ.ನಾವು ಪ್ರದರ್ಶನ ಏರ್ಪಡಿಸಿದ ನಂತರ ಹಲವು ವೈದ್ಯರ ಮಾಹಿತಿ ಲಭ್ಯವಾಗುತ್ತಿವೆ.ಅವುಗಳನ್ನೆಲ್ಲ ಸೇರಿಸಿ ಡಾಕ್ಯುಮೆಂಟರಿ ಮಾಡುವುದು ಹಾಗೂ ಈ ಪ್ರದರ್ಶನ ವ್ಯಾಪ್ತಿಯನ್ನು ಇತರೆ ಏರಿಯಾಗಳಿಗೂ ವಿಸ್ತರಿಸುವ ಉದ್ದೇಶವಿದೆ.
–ಮಾಯಾ ಚಂದ್ರ,ಮಾಯಾ ಫಿಲ್ಮ್ ಸಂಸ್ಥಾಪಕಿ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × two =
Remember me
