ಬೆಂಗಳೂರು:ಕೋವಿಡ್​-19 ಮಾರ್ಗಸೂಚಿ ಕಟ್ಟುನಿಟ್ಟಾಗಿ ಪಾಲನೆ ಆಗಬೇಕು, ಪಾಲಿಸದಿದ್ದರೆ ಆಯೋಜಕರಿಗೆ 1 ಲಕ್ಷ ರೂಪಾಯಿವರೆಗೂ ದಂಡ ಹಾಕಲು ಬಿಬಿಎಂಪಿ ಮುಂದಾಗಿದೆ. ಇನ್ನು ಮಾಸ್ಕ್​ ಹಾಕಿಕೊಳ್ಳದೆ ಸಾರ್ವಜನಿಕರು ಹೊರಗೆಲ್ಲಾದರೂ ಕಾಣಿಸಿಕೊಂಡರೆ ಪೊಲೀಸರು ಓಡಿ ಬಂದು ಹಿಡಿದುಕೊಂಡು ದಂಡ ಕಟ್ಟಿಸಿಕೊಳ್ಳುತ್ತಿದ್ದಾರೆ. ಹೊರಗೇ ಇಷ್ಟೆಲ್ಲ ಕಟ್ಟುನಿಟ್ಟು ಇದ್ದಮೇಲೆ ಇನ್ನು ವಿಧಾನಸೌಧದೊಳಗೆ ಹೇಗಿರಬೇಡ?!
ಆದರೆ ಚಳಿಗಾಲದ ಅಧಿವೇಶನದಲ್ಲಿ ಶಾಸಕರು ಸದನದಲ್ಲೇ ಗಡಿ ಮೀರಿದ್ದಾರೆ. ಮಧ್ಯೆ ಗ್ಲಾಸ್ ಇದ್ದರೂ ಲಾಸ್ ಎಂಬಂತಾಗಿದೆ. ಕೋವಿಡ್​-19 ಮಾರ್ಗಸೂಚಿ ಪಾಲನೆ ಹಿನ್ನೆಲೆಯಲ್ಲಿ, ಕರೊನಾ ಸೋಂಕು ತಗುಲದಂತೆ ಅಥವಾ ಹರಡದಂತೆ ಮುಂಜಾಗ್ರತೆ ವಹಿಸುವ ನಿಟ್ಟಿನಲ್ಲಿ ಸದನದಲ್ಲಿ ಶಾಸಕರು ಕುಳಿತುಕೊಳ್ಳುವ ಪ್ರತಿ ಆಸನದ ನಡುವೆ ಗಾಜನ್ನು ಅಳವಡಿಸಿ ಪಾರ್ಟಿಷನ್ ನಿರ್ಮಿಸಲಾಗಿದೆ. ಆದರೆ ಚರ್ಚೆಯ ಭರದಲ್ಲಿ ಶಾಸಕರು, ಗಾಜಿನ ಪರದೆಯಾಚೆಗೂ ಕತ್ತು ಚಾಚಿ ಮಾತನಾಡಿದ್ದಾರೆ.



ಡಿಸಿಎಂ ಲಕ್ಷ್ಮಣ ಸವದಿ, ಸಚಿವರಾದ ಡಾ.ಕೆ.ಸುಧಾಕರ್​, ಎಸ್​. ಸುರೇಶ್​ ಕುಮಾರ್​, ವಿಧಾನ ಪರಿಷತ್ ಸದಸ್ಯರಾದ ರಮೇಶ್ ಗೌಡ, ಎಂ.ಕೆ. ಪ್ರಾಣೇಶ್​ ಮುಂತಾದವರು ಈ ರೀತಿ ಸದನದಲ್ಲಿ ಕಾಣಿಸಿಕೊಂಡ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.
ಮಂಗಳವಾರ ಭಾರತ್ ಬಂದ್​; ಆದರೆ ಇವರಿಗೆ ಮಾತ್ರ ವಿನಾಯಿತಿ…

‘ಈ ಬಲ್ಬ್​ ನಿಮ್ಮ ಬದುಕನ್ನೇ ಬದಲಾಯಿಸುತ್ತೆ’ ಬಲ್ಬ್​ ಕೊಳ್ಳುವ ಮುನ್ನ ಎಚ್ಚರ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 + three =
Remember me
