ರಾಮನಗರ:ಏನಾದರೂ ನಿಯಮ ರೂಪಿಸುವ ಜನಪ್ರತಿನಿಧಿಗಳು ಮೊದಲು ಅದನ್ನು ಕಟ್ಟುನಿಟ್ಟಾಗಿ ಪಾಲಿಸಿ ಜನರಿಗೆ ಮಾದರಿ ಆಗಬೇಕು. ಆದರೆ ಸರ್ಕಾರದ ನಿಯಮಗಳನ್ನು ಇಲ್ಲೊಂದು ಕಡೆ ಸಚಿವರ ಸಮ್ಮುಖದಲ್ಲೇ ಉಲ್ಲಂಘಿಸಲಾಗಿದೆ. ದುರಂತವೆಂದರೆ ಇಂಥದ್ದೊಂದು ನಿಯಮ ಉಲ್ಲಂಘನೆಯಲ್ಲಿ ಖುದ್ದು ಸಚಿವ ಹಾಗೂ ಅವರ ಪತ್ನಿಯೇ ಪ್ರಮುಖ ಪಾತ್ರ ವಹಿಸಿದ್ದಾರೆ.
ಹೌದು.. ಸಚಿವ ಸಿ.ಪಿ.ಯೋಗೇಶ್ವರ್ ಅವರ ಪತ್ನಿ ಶೀಲಾ ಯೋಗೇಶ್ವರ್​ ಅವರ ಜನ್ಮದಿನಾಚರಣೆ ಸಂದರ್ಭದಲ್ಲಿ ಸರ್ಕಾರಿ ನಿಯಮಗಳ ಉಲ್ಲಂಘನೆಯಾಗಿದೆ. ಕರೊನಾ ನಿಯಂತ್ರಣಕ್ಕಾಗಿ ಸರ್ಕಾರ ಹೊರಡಿಸಿರುವ ಕೋವಿಡ್​ ಮಾರ್ಗಸೂಚಿಯನ್ನು ಮೀರಿ ಈ ದಂಪತಿ ನಡೆದುಕೊಂಡಿದ್ದಾರೆ.
ಇದನ್ನೂ ಓದಿ:ಕದಿಯುವಾಗಲೇ ಸಿಕ್ಕಿಬಿದ್ದ ಎಳನೀರು ಕಳ್ಳ; ಮಾರಾಟಗಾರರೇ ಕಾದು ಹಿಡಿದು ಕಟ್ಟಿಹಾಕಿ ಪೊಲೀಸರಿಗೆ ಒಪ್ಪಿಸಿದ್ರು..
ಚನ್ನಪಟ್ಟಣದ ಮಹದೇಶ್ವರ ದೇವಸ್ಥಾನದಲ್ಲಿ ಕಾರ್ಯಕರ್ತರ ಜೊತೆಗೆ ಸಚಿವರ ಪತ್ನಿಯ ಜನ್ಮದಿನವನ್ನು ಆಚರಿಸಲಾಗಿದೆ. ಈ ಸಂದರ್ಭದಲ್ಲಿ ಸಚಿವ ಯೋಗೇಶ್ವರ್ ಕೂಡ ಭಾಗಿಯಾಗಿದ್ದು, ಅವರು ಹಾಗೂ ಅವರ ಪತ್ನಿ ಮಾಸ್ಕ್​ ಧರಿಸಿರಲಿಲ್ಲ. ಇನ್ನು ಅವರ ಸುತ್ತಮುತ್ತ ಹಲವಾರು ಮಂದಿ ಇದ್ದು, ಅವರೂ ಮಾಸ್ಕ್​ ಹಾಕಿಕೊಂಡಿರಲಿಲ್ಲ. ಅಲ್ಲದೆ ದೈಹಿಕ ಅಂತರವನ್ನೂ ಪಾಲಿಸಲಾಗಿಲ್ಲ. ಈ ವೇಳೆ ಕಾರ್ಯಕರ್ತರು ಮಾತ್ರವಲ್ಲದೆ, ಚಿಕ್ಕ ಮಕ್ಕಳೂ ಕಂಡುಬಂದಿದ್ದು, ಕರೊನಾಗೆ ಡೋಂಟ್​ ಕೇರ್​ ಎಂಬಂತೆ ನಡೆದುಕೊಳ್ಳಲಾಗಿದೆ.
ಇದು ಲಸಿಕೆ​ಗೂ ಸವಾಲೊಡ್ಡುವ ಕರೊನಾ ವೈರಸ್​; ಚಿಂತೆ ಹೆಚ್ಚಿಸಿದೆ ಈ ಹೊಸ ವೇರಿಯಂಟ್​!

https://www.vijayavani.net/minister-took-help-of-public-to-wear-shoe/
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × three =
Remember me
