ಗದಗ:ಸಾಮಾಜಿಕ ಅಂತರ ಕಾಪಾಡುವಂತೆ ತಿಳಿ ಹೇಳಬೇಕಾದ ಸರ್ಕಾರಿ ಅಧಿಕಾರಿಗಳೇ ಮಿನಿ ಬಸ್​ನಲ್ಲಿ ವಲಸೆ ಕಾರ್ಮಿಕರನ್ನು ಕುರಿಗಳಂತೆ ತುಂಬಿ ಸಾಗಿಸಿದ್ದಾರೆ.
ಕರೊನಾ ಆತಂಕ ಎಲ್ಲೆಡೆ ದಟ್ಟವಾಗಿದೆ. ಸೋಂಕು ಹರಡುವಿಕೆ ತಡೆಯಲು ಅನಿವಾರ್ಯ ಸಂದರ್ಭದಲ್ಲಿ ಹೊರಬಂದರೂ ದೈಹಿಕ ಅಂತರ ಕಾಪಾಡಿಕೊಳ್ಳಬೇಕು ಎಂದು ವೈದ್ಯ ಲೋಕ ಹೇಳಿದೆ. ಸರ್ಕಾರ ಕೂಡ ಈ ನಿಟ್ಟಿನಲ್ಲಿ ಅಗತ್ಯ ಮಾರ್ಗಸೂಚಿ ಹೊರಡಿಸಿದ್ದು, ಸೋಂಕು ಮಣಿಸಲು ಹೋರಾಡುತ್ತಿದೆ. ಆದರೆ, ಇಲ್ಲಿನ ಕೆಲ ಸರ್ಕಾರಿ ಅಧಿಕಾರಿಗಳು ಮಾತ್ರ ನಿಯಮ ಪಾಲಿಸದೆ ನಿರ್ಲಕ್ಷಿಸಿದ್ದಾರೆ.
ಇದನ್ನೂ ಓದಿರಿಈ ನಕಲಿ ಉಪೇಂದ್ರ ಯಾರು ಹೇಳಿ ನೋಡೋಣ …
ಬಿಹಾರ ರಾಜ್ಯಕ್ಕೆ ಹೊರಟಿದ್ದ 180ಕ್ಕೂ ವಲಸೆ ಕಾರ್ಮಿಕರನ್ನು ಗದಗ ನಗರದ ಕೇಂದ್ರ ಬಸ್ ನಿಲ್ದಾಣದಿಂದ ಹುಬ್ಬಳ್ಳಿ ರೈಲ್ವೆ ನಿಲ್ದಾಣಕ್ಕೆ ಮಿನಿ ಬಸ್​ಗಳಲ್ಲಿ ಬುಧವಾರ ಬೆಳಗ್ಗೆ ತಲುಪಿಸಲಾಗಿದೆ. ಅದೂ ಒಂದೇ ಸೀಟಿನಲ್ಲಿ ಇಬ್ಬಿಬ್ಬರನ್ನು ಕೂರಿಸಿ ರೈಲ್ವೆ ನಿಲ್ದಾಣಕ್ಕೆ ಅಧಿಕಾರಿಗಳು ಕಳಿಸಿದ್ದಾರೆ. ಇಲ್ಲಿ ಮಕ್ಕಳು, ಕಾರ್ಮಿಕರು ಎನ್ನದೇ ಎಲ್ಲರನ್ನೂ ಕುರಿದೊಡ್ಡಿಯಂತೆ ತುಂಬಲಾಗಿತ್ತು. ಕರೊನಾ ಸೋಂಕಿನ ವ್ಯಾಪ್ತಿ ಹೆಚ್ಚುತ್ತಿದ್ದರೂ ಜವಾಬ್ದಾರಿಯುತ ಅಧಿಕಾರಿಗಳೇ ಈ ರೀತಿ ವರ್ತಿಸಿದ್ದಕ್ಕೆ ಸಾರ್ವಜನಿಕರಿಂದ ವ್ಯಾಪಕ ಟೀಕೆ ವ್ಯಕ್ತವಾಗಿದೆ.
ಇದನ್ನೂ ಓದಿರಿಅರಣ್ಯ ಅಧಿಕಾರಿಗಳಿಗೆ ಕಳ್ಳಬೇಟೆ ಮಾಹಿತಿ ನೀಡುತ್ತಿದ್ದವನೇ ಜಿಂಕೆ ಕೊಂದ!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × two =
Remember me
