ಬೆಂಗಳೂರು:ನಿಗದಿಗಿಂತ ಹೆಚ್ಚಿನ ಬೆಲೆಗೆ ಮದ್ಯ ಮಾರಾಟ ಮಾಡಿದ ಕಾರಣಕ್ಕಾಗಿ ಮೂರು ವರ್ಷದಲ್ಲಿ ರಾಜ್ಯಾದ್ಯಂತ 118 ಮದ್ಯದಂಗಡಿಗಳ ಪರವಾನಗಿ ಅಮಾನತುಗೊಳಿಸಲಾಗಿದೆ. ಜತೆಗೆ, 6,207 ಕೇಸ್​ ದಾಖಲಿಸಿ 10.66 ಕೋಟಿ ರೂ.ದಂಡ ವಸೂಲಿ ಮಾಡಲಾಗಿದೆ. ಬೆಂಗಳೂರು, ಬೆಳಗಾವಿ, ಕೋಲಾರ, ಕಲಬುರಗಿ, ವಿಜಯಪುರ, ತುಮಕೂರು, ಬಳ್ಳಾರಿ ಮತ್ತು ಚಿತ್ರದುರ್ಗದಲ್ಲಿ ಅತಿ ಹೆಚ್ಚು ಕೇಸ್​ಗಳು ದಾಖಲಾಗಿವೆ. ಎಂಆರ್​ಪಿ ಉಲ್ಲಂಘನೆ ಹಿನ್ನೆಲೆಯಲ್ಲಿ 2020-21ರಲ್ಲಿ 1,962 ಕೇಸ್​ ದಾಖಲಿಸಿ 25 ಪರವಾನಗಿ, 2021-22ರಲ್ಲಿ 2,231 ಕೇಸ್​ ವರದಿಯಾಗಿ 46 ಪರವಾನಗಿ ಹಾಗೂ 2022-23ರಲ್ಲಿ 2,014 ಕೇಸ್​ ದಾಖಲಿಸಿ 47 ಲೈಸೆನ್ಸ್​ ಅಮಾನತುಪಡಿಸಲಾಗಿದೆ.
ರಾಜ್ಯದಲ್ಲಿ ವಿವಿಧ ಬಗೆಯ 12,614 ಮದ್ಯದಂಗಡಿಗಳಿವೆ. ರಾಜ್ಯದ ಇತರೆ ಜಿಲ್ಲೆಗಳಕ್ಕಿಂತ ಬೆಂಗಳೂರಲ್ಲೇ ಅತಿ ಹೆಚ್ಚು ಶೇ.45 ಮದ್ಯದಂಗಡಿಗಳಿವೆ. 3,988 ವೈನ್​ಶಾಪ್​(ಸಿಎಲ್​2), 279 ಕ್ಲಬ್​ (ಸಿಎಲ್​4), 78 ಸ್ಟಾರ್​ ಹೋಟೆಲ್​ ( ಸಿಎಲ್​6ಎ), 2,382 ಹೋಟೆಲ್​ ಮತ್ತು ವಸತಿ ಗೃಹ (ಸಿಎಲ್​&7), 68 ಮಿಲಿಟರಿ ಕ್ಯಾಂಟಿನ್​ ಮಳಿಗೆ (ಸಿಎಲ್​8), 3,634 ಬಾರ್​ ಆ್ಯಂಡ್​ ರೆಸ್ಟೋರೆಂಟ್​ (ಸಿಎಲ್​9), 1,041 ಎಂಎಸ್​ಐಎಲ್​ (ಸಿಎಲ್​11ಸಿ) ಮತ್ತು 745 ಆರ್​ವಿಬಿ ಸೇರಿ ಒಟ್ಟು 12,614 ಮದ್ಯದಂಗಡಿಗಳಿವೆ. ವೈನ್​ಶಾಪ್​, ಎಂಎಸ್​ಐಎಲ್​ ಮದ್ಯದಂಗಡಿಗಳಲ್ಲಿ ನಿಗದಿ ದರದಲ್ಲೇ ಗ್ರಾಹಕರಿಗೆ ಮದ್ಯ ಮಾರಾಟಬೇಕು. ಆದರೆ, ಕೋಲ್ಡ್​ ಸೇರಿ ಇತರೆ ಶುಲ್ಕ ವಿಧಿಸಿ ಗ್ರಾಹಕರಿಗೆ ಹೆಚ್ಚಿನ ಬೆಲೆಗೆ ಮದ್ಯ ಮಾರಾಟ ಮಾಡುತ್ತಿರುವ ಬಗ್ಗೆ ದೂರುಗಳಿವೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಅಬಕಾರಿ ಕಾಯ್ದೆ ಅನ್ವಯ ಅಬಕಾರಿ ಇಲಾಖೆ ಅಧಿಕಾರಿಗಳು, ದಾಳಿ ನಡೆಸಿ ಕೇಸ್​ ದಾಖಲಿಸಿ ಪರವಾನಗಿ ಅಮಾನತು ಮಾಡಿದ್ದರು. ಬಳಿಕ, ಮಾಲೀಕರಿಂದ ಸೂಕ್ತ ದಂಡ ವಸೂಲಿ ಮಾಡಿ ಎಲ್ಲ ಕೇಸ್​ಗಳನ್ನು ಇತ್ಯರ್ಥಪಡಿಸಲಾಗಿದೆ. ಈ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತದೆ.
ವೈನ್​ಶಾಪ್​, ಎಂಎಸ್​ಐಎಲ್​ ಮದ್ಯದಂಗಡಿಗಳಲ್ಲಿ ಗ್ರಾಹಕರು ಪಾರ್ಸೆಲ್​ ಮೂಲಕ ಮದ್ಯ ಪಡೆಯಬೇಕು. ಯಾವುದೇ ಕಾರಣಕ್ಕೂ ಕುಳಿತು ಮದ್ಯ ಸೇವಿಸುವಂತಿಲ್ಲ. ಹಾಗಾಗಿ, ಎಂಆರ್​ಪಿ ದರದಲ್ಲೇ ಮದ್ಯ ಮಾರಾಟ ಮಾಡಬೇಕು. ಆದರೆ, ಮದ್ಯ ಸೇವಿಸುವವರು ವಿಧಿಯಿಲ್ಲದೆ ಹೆಚ್ಚಿನ ಬೆಲೆಗೆ ಎಣ್ಣೆ ಖರೀದಿಸಿ ಸೇವಿಸುವಂತಾಗಿದೆ. ವೈನ್​ಶಾಪ್​, ಎಂಎಸ್​ಐಎಲ್​ ಮದ್ಯದಂಗಡಿಗಳಲ್ಲಿ ನಿಗದಿಗಿಂತ ಹೆಚ್ಚಿನ ಬೆಲೆ ಮದ್ಯ ಮಾರಾಟ ಮಾಡಿದರೆ ಗ್ರಾಹಕರು, ಗ್ರಾಹಕ ನ್ಯಾಯಾಲಯದಲ್ಲಿ ಕೇಸ್​ ದಾಖಲಿಸುವ ಅವಕಾಶ ಇರುತ್ತದೆ. ಒಂದು ವೇಳೆ ದೂರು ದಾಖಲಿಸಿದರೆ ಸಂಬಂಧಪಟ್ಟ ನ್ಯಾಯಾಲಯ ತನಿಖೆ ನಡೆಸಿ ಕ್ರಮಕೈಗೊಳ್ಳುತ್ತದೆ. ಬಾರ್​ ಆ್ಯಂಡ್​ ರೆಸ್ಟೋರೆಂಟ್​, ಹೋಟೆಲ್​ ಮತ್ತು ವಸತಿ ಗೃಹ ಮದ್ಯದಂಗಡಿಗಳಲ್ಲಿ ಕುಳಿತು ಮದ್ಯ ಸೇವನೆಗೆ ಅವಕಾಶ ಇರುವುದರಿಂದ ಸೇವಾ ಸೇರಿ ಇತರೆ ಶುಲ್ಕ ವಿಧಿಸಿ ಹೆಚ್ಚಿನ ಬೆಲೆಗೆ ಗ್ರಾಹಕರಿಗೆ ಮದ್ಯ ಮಾರಾಟ ಮಾಡಲಾಗುತ್ತದೆ.
ಸರ್ಕಾರಿ ಹುದ್ದೆಗಳ ಮೇಲೆ ನಿವೃತ್ತಿಯವರ ವ್ಯಾಮೋಹ:ಸರ್ಕಾರ ಆದೇಶಿಸಿದರೂ ಹುದ್ದೆ ಬಿಟ್ಟು ಕದಲುತ್ತಿಲ್ಲ32 ಮದ್ಯ ತಯಾರಿಕೆಗೆ ಅನುಮತಿ:ಕರ್ನಾಟಕ ಅಬಕಾರಿ ಡಿಸ್ಟಿಲರಿ ಮತ್ತು ವೇರ್​ಹೌಸ್​, ಬಾಟ್ಲಿಂಗ್​ ಆ್​ ಲಿಕ್ಕರ್​ ನಿಯಮದಂತೆ ಇಲಾಖೆಯಿಂದ ಪರವಾನಗಿ ಪಡೆದು ಮದ್ಯ ತಯಾರಿಕಾ ಟಕ ಪ್ರಾರಂಭಿಸಲು ಅವಕಾಶ ಇದೆ. ರಾಜ್ಯದಲ್ಲಿ ಒಟ್ಟು 32 ಮದ್ಯ ತಯಾರಿಕಾ ಟಕಗಳು ಕಾರ್ಯನಿರ್ವಹಿಸುತ್ತಿವೆ. 1992ರಿಂದ ಹೊಸದಾಗಿ ಸಿಎಲ್​2, ಸಿಎಲ್​9 ಮದ್ಯದಂಗಡಿ ಪರವಾನಗಿ ನೀಡಲು ಸರ್ಕಾರ ರ್ನಿಬಂಧಿಸಿದೆ. ಅಂದಿನಿಂದ ಹೊಸ ಸಿಎಲ್​2, ಸಿಎಲ್​9 ಪರವಾನಗಿ ನೀಡಲಾಗುತ್ತಿಲ್ಲ. ಸಿಎಲ್​7, ಸಿಎಲ್​4, ಸಿಎಲ್​6ಎ ಮದ್ಯದಂಗಡಿ ತೆರೆಯಲು ಪರವಾನಗಿ ನೀಡಲಾಗುತ್ತಿದೆ. ರಾಜ್ಯಾದ್ಯಂತ ಇದುವರೆಗೆ ಸಿಎಲ್​7 ಮದ್ಯದಂಗಡಿ ಆರಂಭಿಸಲು ಕೋರಿ ಇಲಾಖೆಗೆ 250 ಅರ್ಜಿಗಳು ಸಲ್ಲಿಕೆಯಾಗಿವೆ.
ಮದ್ಯ ವ್ಯಸನಿಗಳ ಸಂಖ್ಯೆ ಹೆಚ್ಚಳ:ವರ್ಷದಿಂದ ವರ್ಷಕ್ಕೆ ಮದ್ಯ ಆದಾಯ ರಾಜಸ್ವ ಸಂಗ್ರಹ ಗುರಿ ಹೆಚ್ಚಳವಾಗುತ್ತಿದೆ. ಇದರ ನಡುವೆ ಮದ್ಯ ಸೇವಿಸುತ್ತಿರುವವರ ಸಂಖ್ಯೆಯೂ ಏರುಗತಿಯಲ್ಲಿದೆ. 21 ವರ್ಷಗಿಂತ ಕೆಳಗಿನವರಿಗೆ ಮದ್ಯ ಮಾರಾಟ ಮಾಡುವಂತಿಲ್ಲ ಎಂಬ ರ್ನಿಬಂಧ ಇದ್ದರೂ ಮದ್ಯದಂಗಡಿಗಳಲ್ಲಿ ಹದಿಹರೆಯವರು ಮದ್ಯ ಚಟ ಬೆಳೆಸಿಕೊಂಡು ಜೀವನವನ್ನೇ ಹಾಳು ಮಾಡಿಕೊಳ್ಳುತ್ತಿದ್ದಾರೆ.ಬಿಯರ್​ ಕುಡಿಯವರಗಿಂತ ವಿಸ್ಕಿ ಕುಡಿಯವರ ಸಂಖ್ಯೆಯೂ ಹೆಚ್ಚಳಗೊಂಡಿದೆ. ಬಿಯರ್​ ದರ ಹೆಚ್ಚು ಇರುವ ಹಿನ್ನೆಲೆಯಲ್ಲಿ ಕಡಿಮೆ ಬೆಲೆ ಎನ್ನುವ ಕಾರಣಕ್ಕೆ ವಿಸ್ಕಿ ಕುಡಿಯುತ್ತಿದ್ದಾರೆ. ಮದ್ಯ ಮಾರಾಟದಲ್ಲಿ ಬಿಯರ್​ಕ್ಕಿಂತ ಇಂಡಿಯನ್​ ಮೇಡ್​ ಲಿಕ್ಕರ್​ (ಐಎಂಎಲ್​) ಮುಂದಿದೆ. ಕುಡಿಯವವರ ಸಂಖ್ಯೆ ಆಧಾರದಲ್ಲಿ ನೋಡಿದರೆ ಬಿಯರ್​ಕ್ಕಿಂತ ವಿಸ್ಕಿ ಕುಡಿಯುವವರೇ ಸಂಖ್ಯೆ ಜಾಸ್ತಿಯಾಗಿದೆ.
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:13 + three =
Remember me
