ಬೆಂಗಳೂರು:ಯುವತಿಯೊಬ್ಬಳು ತನ್ನ ಸಂಗಾತಿಗಾಗಿ ವಿಶಿಷ್ಟವಾಗಿ ಪ್ರೀತಿಯನ್ನು ತೋರ್ಪಡಿಸುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗಿದ್ದಳು. ಬೆಂಗಳೂರಿನ ಯುವತಿ ತಮ್ಮ ಪತಿಯ ಹೆಸರನ್ನು ಹಣೆಯ ಮೇಲೆ ಟ್ಯಾಟೂ ಹಾಕಿಸುತ್ತಿರುವ ವಿಡಿಯೋ ಸಾಕಷ್ಟು ವೈರಲ್ ಆಗಿತ್ತು.
ಇದನ್ನೂ ಓದಿ:VIDEO| ಮಹಿಳೆಯ ಹಣೆ ಮೇಲೆ ಪತಿ ಹೆಸರಿನ ಟ್ಯಾಟೂ!
ವಿಡಿಯೋ ವೈರಲ್ ಆಗುತ್ತಿದ್ದಂತೆ ಪರ-ವಿರೋಧ ಚರ್ಚೆ ಆರಂಭವಾಗಿತ್ತು. ಹಣೆಯ ಮೇಲೆ ಹೆಸರಿನ ಟ್ಯಾಟೂ ಹಾಕಿಸಿದ ವಿಚಾರವಾಗಿ ಅನೇಕರು ಜಾಲತಾಣದ ಮೂಲಕ ಆಕ್ಷೇಪ ವ್ಯಕ್ತಪಡಿಸಿ, ಯುವತಿಯ ನಡೆಗೆ ಕಿಡಿಕಾರಿದ್ದಾರು. ಇದು ಹುಚ್ಚುತನದ ಪರಮಾವಧಿ. ಇದು ಮೂರ್ಖತನವಲ್ಲದೆ ಮತ್ತೇನೂ ಅಲ್ಲ. ನಿಮ್ಮ ಪ್ರೀತಿಯನ್ನು ಸಾಬೀತುಪಡಿಸಲು ತಿಳುವಳಿಕೆ ಇರಬೇಕು. ಈ ರೀತಿ ಹುಚ್ಚುತನ ಸರಿಯಲ್ಲ ಎಂಬ ಮಾತುಗಳು ವ್ಯಕ್ತವಾಗಿತ್ತು.
ಇದನ್ನೂ ಓದಿ:ವಿವಸ್ತ್ರಗೊಂಡು ದೇವಸ್ಥಾನ ಪ್ರವೇಶಿಸಲು ಯತ್ನಿಸಿದ ವಿದೇಶಿ ಮಹಿಳೆ!
ಇದೀಗ ರೇಡಿಯೋ ಸಿಟಿ ವಿಡಿಯೋವೊಂದನ್ನು ತನ್ನ ಇನ್ಸ್​ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದು, ಹಣೆಯ ಮೇಲೆ ಟ್ಯಾಟೂ ಹಾಕಿಸಿಕೊಂಡಿರುವ ಘಟನೆಯ ಸತ್ಯಾಸತ್ಯತೆ ಹೊರಬಿದ್ದಿದೆ. ಈ ಬಗ್ಗೆ ರೇಡಿಯೋ ಸಿಟಿ ನಡೆಸಿದ ಸಂದರ್ಶನದಲ್ಲಿ ಯುವತಿ ಮಾತನಾಡುತ್ತಾ, ನೆಟ್ಟಿಗರಿಂದ ಟೀಕೆಗಳು ವ್ಯಕ್ತವಾಗುತ್ತವೆ ಎಂಬುದನ್ನು ಮೊದಲೇ ಗ್ರಹಿಸಿದ್ದೆ. ವಾಸ್ತವದಲ್ಲಿ ಹಣೆಯ ಮೇಲೆ ಯಾವುದೇ ತರಹದ ಟ್ಯಾಟೂ ಹಾಕಿಸಿಕೊಂಡಿಲ್ಲ. ಕೇವಲ ತಮಾಷೆಗಾಗಿ ಈ ರೀತಿ ಮಾಡಿಕೊಂಡಿರುವುದು ಎಂದು ಹೇಳಿಕೊಂಡಿದ್ದಾಳೆ.
A post shared by Radio City Kannada (@radiocitykannada)
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:three × 4 =
Remember me
