ಬೆಂಗಳೂರು:ಮುಸ್ಲಿಂ ವ್ಯಕ್ತಿಯೊಬ್ಬರು ಹಿಂದೂಗಳಿಂದ ಸರಕುಗಳನ್ನು ಖರೀದಿಸದಂತೆ ಭಾಷಣ ಮಾಡುತ್ತಿರುವ ವೀಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿತ್ತು. ಘಟನೆಯೂ ಬೆಂಗಳೂರಿನಲ್ಲಿ ನಡೆದಿರುವಂತೆ ಬಿಂಬಿಸಲಾಗಿತ್ತು.
ವಿಡಿಯೋದ ಅಸಲಿಯತ್ತಿನ ಬಗ್ಗೆ ಫ್ಯಾಕ್ಟ್​ಚೆಕ್​ ಮಾಡಿರುವ ಕರ್ನಾಟಕ ಪೊಲೀಸರು ನಿಜಾಂಶವನ್ನು ಬಯಲು ಮಾಡಿದ್ದಾರೆ. ಅಸಲಿಗೆ ಆ ಘಟನೆಯೂ ನಡೆದಿರುವುದು ರಾಜಸ್ಥಾನದ ಬಾರ್ಮೆರ್​ ಜಿಲ್ಲೆಯಲ್ಲಿ ಎಂದು ತಿಳಿದು ಬಂದಿದೆ.
2019ರ ಜೂನ್​ ತಿಂಗಳಲ್ಲಿ ರಾಜಸ್ಥಾನದ ಬಾರ್ಮೆರ್​ ಜಿಲ್ಲೆಯ ಬೊಜಾರಿಯಾ ಎಂಬ ಹಳ್ಳಿಯ ಬಳಿ ಇರುವ ಪೆಟ್ರೋಲ್​ ಬಂಕ್​ ಖಾಸಗಿ ಬಸ್​ ಅಪಘಾತವಾಗಿತ್ತು. ಘಟನೆಯಲ್ಲಿ ಓರ್ವ ವ್ಯಕ್ತಿ ಮೃತಪಟ್ಟಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದರು.
*ಹಿಂದೂಗಳಿಂದ ಸರಕುಗಳನ್ನು ಖರೀದಿಸದಂತೆ ಮುಸ್ಲಿಂ ವ್ಯಕ್ತಿಯೊಬ್ಬರು ಬಾಷಣ ಮಾಡುತ್ತಿರುವ ವಿಡಿಯೋ ಒಂದು ಇತ್ತೀಚೆಗೆ ವೈರಲ್ಆಗಿರುವ ಕುರಿತು ಸತ್ಯ ಸಂಗತಿಗಳು*https://t.co/Fyrrr89Vp9@BlrCityPolice@DgpKarnataka
ಇದನ್ನೂ ಓದಿ:ವಾಟ್ಸ್​ಆ್ಯಪ್​ ಮೂಲಕ ಗ್ರಾಹಕಿಗೆ ಪ್ರಪೋಸ್​ ಮಾಡಿದ ಡೆಲಿವರಿ ಬಾಯ್​; ಕಂಪನಿ ವಿರುದ್ಧ ಕಿಡಿಕಾರಿದ ನೆಟ್ಟಿಗರು
ಮೃತನ ಕುಟುಂಬಸ್ಥರು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದರು. ಈ ವೇಳೆ ವ್ಯಕ್ತಿಯೋರ್ವ ಭಾಷಣ ಮಾಡಿದ್ದ, ಈ ಸಂಬಂಧ ಬಾರ್ಮೆರ್​ ಪೊಲೀಸರು ಈಗಾಗಲೇ ಆತನ ವಿರುದ್ಧ ಕ್ರಮವನ್ನು ಜರುಗಿಸಿದ್ದಾರೆ. ಫ್ಯಾಕ್ಟ್​ಚೆಕ್​ ವೇಳೆ ಬಾರ್ಮೆರ್​ ಪೊಲೀಸರಿಂದ ಈ ಕುರಿತು ಟ್ವೀಟ್​ ಮಾಡಲಾಗಿದ್ದು, ನಿಜಾಂಶ ಬಯಲಾಗಿದೆ.
ಪ್ರಸ್ತುತ ವೈರಲ್​ ಆಗಿರುವ ವಿಡಿಯೋ ಬೆಂಗಳೂರು ಅಥವಾ ಕರ್ನಾಟಕಕ್ಕೆ ಸಂಬಂಧಿಸಿದ್ದಲ್ಲ. ಈ ರೀತಿಯ ಸುಳ್ಳು ಸುದ್ದಿಗಳನ್ನು ಹಂಚಿಕೊಳ್ಳದಂತೆ ಸಾರ್ವಜನಿಕರಿಗೆ ಪೊಲೀಸರು ಸೂಚನೆ ನೀಡಿದ್ಧಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 − four =
Remember me
