ಕೊಪ್ಪಳ:ಪ್ರಾಣಿಗಳ ನಡುವಿನ ಸಂಘರ್ಷವನ್ನು ನಾವು ದೈನಂದಿನ ಜೀವನದಲ್ಲಿ ಕೇಳಿರುತ್ತೇವೆ, ಕೆಲವೊಮ್ಮೆ ನೋಡಿರುತ್ತೇವೆ. ಎಲ್ಲಾದರೂ ಹಾವುಗಳು ಕಾಣಿಸಿಕೊಂಡರೆ ಜನ ಭಯಭೀತರಾಗಿ ಕೋಲು ಹಿಡಿದು ಅದನ್ನೂ ದೂರ ಓಡಿಸುತ್ತಾರೆ. ಆದರೆ, ಪ್ರಾಣಿಗಳ ವಿಚಾರಕ್ಕೆ ಬರುವುದಾದರೆ ದಾಳಿ ಮಾಡಿ ಅವುಗಳನ್ನೂ ಕೊಂದು ಹಾಕಿ ಬಿಡುತ್ತಾವೆ.
ಇದೀಗ ಪ್ರಕರಣ ಒಂದರಲ್ಲಿ ಬೆಕ್ಕೊಂದು ನಾಗರಹಾವಿನ ಜೊತೆ ಕಾದಾಡಿರುವ ವಿಡಿಯೋ ಸಾಮಾಜಿಕ ಜಾಲಾತಣಗಳಲ್ಲಿ ವೈರಲ್​ ಆಗಿದೆ. ಘಟನೆಯೂ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ ಬಸಾಪುರ ಎಂಬ ಗ್ರಾಮದಲ್ಲಿ ನಡೆದಿದೆ.
ಶನಿವಾರ ಮುಂಜಾನೆ ಬಸಾಪುರ ಸಮೀಪ ಇದ್ದ ಹೋಟೆಲ್​ ಒಂದರ ಬಳಿ 5ಅಡಿ ಎತ್ತರದ ನಾಗರಹಾವೊಂದು ಹೆಡೆ ಎತ್ತಿ ಬುಸುಗುಡುತ್ತಿತ್ತು. ಹಾವನ್ನು ಕಂಡು ಒಂದು ಕ್ಷಣಕ್ಕೆ ಹೋಟೆಲ್​ ಮಾಲೀಕ ಹಾಗೂ ಗ್ರಾಹಕರು ಭಯಭಿತರಾಗಿದ್ದಾರೆ. ಒಂದು ವೇಳೆ ಹಾವು ಹೋಟೆಲ್​ ಒಳಗೆ ನುಗ್ಗಿದ್ದರೆ ಏನು ಮಾಡುವುದು ಎಂದು ದೂರ ಓಡಿಸಲು ಅಲ್ಲಿನ ಜನ ಪ್ರಯತ್ನಿಸಿತ್ತಿದ್ದರು.
ಇದನ್ನೂ ಓದಿ:ಆಗಸ್ಟ್​ 31- ಸೆಪ್ಟೆಂಬರ್​ 01ರಂದು I.N.D.I.A ಒಕ್ಕೂಟದ 3ನೇ ಸಭೆ; ಉದ್ಧವ್​ ಠಾಕ್ರೆ ನೇತೃತ್ವ: ಸಂಜಯ್​ ರಾವುತ್​
ಮಾಲೀಕನ ಜಾಡನ್ನು ಹಿಡಿದು ಆಗಮಸಿದ ಬೆಕ್ಕೊಂದು ಹಾವಿನ ಜೊತೆ ಕಾದಾಟಕ್ಕೆ ಇಳಿದಿದೆ. ಒಂದು ಕಡೆ ಹಾವು ಹೆಡೆ ಎತ್ತಿ ಹೋರಾಟ ನಡೆಸಿದ್ದರೆ. ಮತ್ತೊಂದೆಡೆ ಬೆಕ್ಕು ತನ್ನ ದೃಷ್ಟಿಯನ್ನು ಕದಲಿಸದೆ ಕಾಲಿನ ಪಂಜರದಿಂದ ನಾಗರಹಾವಿನ ಮೇಲೆ ದಾಳಿ ಮಾಡುತ್ತಿತ್ತು. ಈ ವಿಡಿಯೋವನ್ನೂ ಸ್ಥಳೀಯರೊಬ್ಬರು ಸೆರೆ ಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್​ ಮಾಡಿದ್ಧಾರೆ.
ಸುಮಾರು ಒಂದು ಘಂಟೆಗಳ ಕಾಲ ನಡೆದ ಕಾದಾಟದಲ್ಲಿ ಹಾವಿಗೆ ತನ್ನ ಹೆಜ್ಜೆ ಸದ್ದು ತಿಳಿಯದಂತೆ ಮೆಲ್ಲನೇ ನಡೆದುಕೊಂಡು ಬಂದು ಬೆಕ್ಕು ದಾಳಿ ಮಾಡಿದೆ. ಜಿದ್ದಾಜಿದ್ದಿನ ಸೆಣಸಾಟದಲ್ಲಿ ಹಾವು ಬೆಕ್ಕಿಗೆ ಸೋತು ಪಲಾಯನ ಮಾಡಿದೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಇದನ್ನು ಕಂಡು ನೆಟ್ಟಿಗರು ದಂಗಾಗಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × two =
Remember me
