ಬೆಂಗಳೂರು:ಸಾಮಾನ್ಯವಾಗಿ ಕ್ಷುಲಕ ಕಾರಣಗಳಿಗೆ ಮದುವೆ ಮನೆಗಳಲ್ಲಿ ಗಲಾಟೆಗಳಾಗಿರುವುದನ್ನು ನಾವು ನೋಡಿರುತ್ತೇವೆ ಹಾಗೂ ಕೇಳಿರುತ್ತೇವೆ. ಕೆಲವರು ಹೋಟೆಲಿಗೆ ಹೋಗುವ ಬದಲು ಯಾವುದಾದರು ಮದುವೆಗೆ ಹೋಗಿ ಭರ್ಜರಿ ಊಟ ಮಾಡೋಣ ಎಂದು ಬಯಸುತ್ತಾರೆ. ಆಹ್ವಾನವಿಲ್ಲದಿರುವ ಖಾಸಗಿ ಕಾರ್ಯಕ್ರಮಗಳಿಗೆ ಹೋಗಿ ಭರ್ಜರಿ ಭೋಜನ ಮಾಡಿ ಬರುತ್ತಾರೆ.
ಈ ರೀತಿಯ ದೃಶ್ಯಗಳನ್ನು ನಾವು ಸರ್ವೇಸಾಮಾನ್ಯವಾಗಿ ಚಿತ್ರ ಹಾಗೂ ಸೀರಿಯಲ್​ಗಳಲ್ಲಿ ನೋಡಿರುತ್ತೇವೆ. ಆದರೆ, ಇದೀಗ ಕೇಳಿ ಬಂದಿರುವ ಮಾಹಿತಿ ಪ್ರಕಾರ ಈ ರೀತಿ ಆಹ್ವಾನವಿಲ್ಲದ ಕಾರ್ಯಕ್ರಮಗಳಲ್ಲಿ ಭಾಗಿಯಾಗೋದು ಅಪರಾಧ ಎಂದು ತಿಳಿದು ಬಂದಿದೆ. ಈ ಕುರಿತ ಕುತೂಹಲಕಾರಿ ಮಾಹಿತಿಯನ್ನು ಸಿವಿಲ್ ನ್ಯಾಯಾಧೀಶೆ ಬಿ.ವಿ ಸ್ವಾತಿ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ವೈರಲ್​ ಆಗಿರುವ ವಿಡಿಯೋದಲ್ಲಿ, ಆಹ್ವಾನವಿಲ್ಲದಿರುವ ಮದುವೆ, ಪಾರ್ಟಿ ಇತ್ಯಾದಿ ಖಾಸಗಿ ಕಾರ್ಯಕ್ರಮಗಳಿಗೆ ಹೋಗೋದು ಖಂಡಿತವಾಗಿಯೂ ಒಂದು ಅಪರಾಧ. ಇದನ್ನು ʼಗೇಟ್ ಕ್ರ್ಯಾಶ್ʼ ಅಂತ  ಕರೆಯುತ್ತಾರೆ. ಹೀಗೆ ಆಹ್ವಾನವಿಲ್ಲದ  ಕಾರ್ಯಕ್ರಮಗಳಿಗೆ ಹೋಗಿ ಊಟ ಮಾಡಿ ಬರುವ  ದೃಶ್ಯಗಗಳನ್ನು ಸಿನೆಮಾಗಳಲ್ಲಿ ನೋಡಿರಬಹುದು.  ನಿಜ ಜೀವನದಲ್ಲೂ ಈ ರೀತಿಯ ಹುಚ್ಚು ಸಾಹಸಕ್ಕೆ ಏನಾದ್ರೂ ಕೈ ಹಾಕಿದ್ರೆ, ಇದು ಖಂಡಿತವಾಗಿಯೂ ಅಪರಾಧವಾಗುತ್ತೆ ಎಂದಿದ್ದಾರೆ.
View this post on InstagramA post shared by B.V.Swathi (@swathi.law)

A post shared by B.V.Swathi (@swathi.law)
ಇದನ್ನೂ ಓದಿ:‘ಏನೆಂದು ನಾ ಹೇಳಲಿ…’; ನಟ ದರ್ಶನ್​ ಹೀಗಂದಿದ್ಯಾಕೆ?
ಹೀಗೆ ನೀವೇನಾದ್ರೂ ಆಹ್ವಾನವಿಲ್ಲದ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ಸಿಕ್ಕಿಬಿದ್ರೆ, ನಿಮ್ಮನ್ನು  ಸೆಕ್ಷನ್ 442  ಮತ್ತು ಸೆಕ್ಷನ್ 452 ಇಂಡಿಯನ್ ಪಿನಲ್ ಕೋಡ್ ಪ್ರಕಾರ ಪೋಲಿಸರು ನಿಮ್ಮನ್ನು ಅರೆಸ್ಟ್ ಕೂಡಾ ಮಾಡಬಹುದು. ಅಲ್ಲದೆ  ಈ ಒಂದು ತಪ್ಪಿಗೆ 2 ವರ್ಷಗಳ ಕಾಲ ಜೈಲು ಶಿಕ್ಷೆಯಾಗಬಹುದು ಎಂದು ವಿವರಿಸಿದ್ದಾರೆ.
ಡಿಸೆಂಬರ್​ 15ರಂದು ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್​ ಮಾಡಲಾಗಿದ್ದು, ಇಲ್ಲಿಯವರೆಗೂ 1 ಮಿಲಿಯನ್​ಗಿಂತಲೂ ಅಧಿಕ ವೀಕ್ಷಣೆಗೆ ಒಳಪಟ್ಟಿದೆ. ವಿಡಿಯೋ ನೋಡಿ ಹಲವರು ಕಮೆಂಟ್​ ಮಾಡಿದ್ದು, ಒಂದು ವೇಳೆ ಹಾಗೆ ಆದಲ್ಲಿ ನನಗೆ ಮತ್ತು ನನ್ನ ಸ್ನೇಹಿತರಿಗೆ ಕಂಡಲ್ಲಿ ಗುಂಡು ಆದೇಶವನ್ನು ಹೊರಡಿಸುತ್ತಾರೆ ಎಂದು ಕಮೆಂಟ್​ ಮಾಡಿದ್ದಾರೆ.
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:4 × two =
Remember me
