ಬೆಂಗಳೂರು:ಇಂದು(ಸೆ.18) ಸಾಹಸಸಿಂಹ ಡಾ. ವಿಷ್ಣುವರ್ಧನ್​ ಅವರ ಜನ್ಮದಿನ. ಕನ್ನಡ ಚಿತ್ರರಂಗ ಕಂಡ ಮೇರು ಪ್ರತಿಭೆ ನಮ್ಮನ್ನಗಲಿ 9 ವರ್ಷ ಕಳೆದರೂ ಅವರ ನೆನಪು ಅಜರಾಮರ. ಅವರ ಅಳಿಯ ಅನರುದ್ದ್ ಸೇರಿದಂತೆ ಚಿತ್ರರಂಗದ ಕಲಾವಿದರು, ರಾಜಕಾರಣಿಗಳು, ಅಭಿಮಾನಿಗಳು ವಿಷ್ಣುದಾದಗೆ ಶುಭಕೋರಿದ್ದಾರೆ. ಅವರೊಂದಿಗಿನ ನೆನಪುಗಳನ್ನು ಮೆಲುಕು ಹಾಕಿದ್ದಾರೆ. ಆ ಕುರಿತ ಪುಟ್ಟ ಮಾಹಿತಿ ಇಲ್ಲಿದೆ.
‘ಮಗನಾಗಿ, ಅವರ ಗುಣಗಳಿಗೆ ಅಭಿಮಾನಿಯಾಗಿ ಕೋಟಿ ನೆನಪುಗಳು.. ಅವರ ಸರಳತನ, ಅವರ ನಿಷ್ಕಲ್ಮಶ ಮನಸ್ಸು.. ಅವರ ಮುಗ್ಧತೆ.. ಅವರ ಔದಾರ್ಯ.. ‌ಅವರ ಸಜ್ಜನಿಕೆ.. ಬಹುಶಃ ಒಬ್ಬ ವ್ಯಕ್ತಿ ಮತ್ತೊಬ್ಬರ ಜೀವನಕ್ಕೆ ಸ್ಫೂರ್ತಿಯಾಗಿ ಸಾಧಿಸಲು ಪ್ರಮುಖ ಕಾರಣಕರ್ತ ಆಗುವವರೆಂದರೆ ನನಗೆ ಅದು ನೀವೆ. ಎಂದೂ ನೀವಿಲ್ಲವೆಂದುಕೊಂಡಿಲ್ಲ. ಅನುದಿನವೂ ನಮ್ಮೊಳಗಿನ ಶಕ್ತಿಯಾಗಿ ಮುನ್ನಡೆಸುತ್ತಲೇ ಇದ್ದೀರಿ. ಜನ್ಮದಿನವಿಂದು, ಚಿಕ್ಕವನು ನಾನು.. ನಾನೇನನು ಹೇಳಲಿ.. ಎಲ್ಲರಿಗೂ ನಿಮ್ಮ ಆಶೀರ್ವಾದವಿರಲಿ.. ಎಂದಿನಂತೆ ಕೈ ಹಿಡಿದು ಮುನ್ನಡೆಸಿ’. ಎಂದು ವಿಷ್ಣುವರ್ಧನ್​ ಅಳಿಯ, ನಟ ಅನಿರುದ್ಧ್ ತಮ್ಮ ಫೇಸ್​ಬುಕ್​ ಪೇಜ್​ನಲ್ಲಿ ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ.ಇದನ್ನೂಓದಿರಿವಿಷ್ಣುವರ್ಧನ್ ಸ್ಮಾರಕ ಭವನ ನಿರ್ಮಾಣಕ್ಕೆ ಸಿಎಂ ಬಿಎಸ್​​ವೈ ಭೂಮಿ ಪೂಜೆ
https://www.facebook.com/Anirudhofficialpage/photos/a.107512207315687/394677715265800/
ಗುರುವಾರವೇ ವಿಷ್ಣು ಹುಟ್ಟುಹಬ್ಬಕ್ಕೆ ಕಾಮನ್ ಡಿಪಿಯನ್ನು ಬಿಡುಗಡೆ ಮಾಡಿದ್ದ ನಟ ಕಿಚ್ಚ ಸುದೀಪ್, ‘ಅವರನ್ನು ಭೇಟಿ ಮಾಡಲು ಸಮಯದ ಆಶೀರ್ವಾದವಿತ್ತು. ಅವರೊಂದಿಗೆ ಕೆಲಸ ಮಾಡಲು ಸಿನಿಮಾದ ಆಶೀರ್ವಾದವಿತ್ತು. ಎಲ್ಲಕ್ಕಿಂತ ದೊಡ್ಡ ಆಶೀರ್ವಾದ ಅವರು ನನ್ನನ್ನು ನನ್ನ ಹೆಸರಿಂದ ಗುರುತಿಸುತ್ತಿದ್ದರು. ನನ್ನ IDOನ CDP ಬಿಡುಗಡೆ ನನಗೆ ಸಿಕ್ಕ ಭಾಗ್ಯ. ಎಂದಿಗೂ ಅವರ ಅಭಿಮಾನಿ’ ಎಂದು ಟ್ವೀಟ್​ ಮಾಡಿದ್ದರು.
ಅವರನ್ನು ಭೇಟಿ ಮಾಡಲು ಸಮಯದ ಆಶೀರ್ವಾದವಿತ್ತು. ಅವರೊಂದಿಗೆ ಕೆಲಸ ಮಾಡಲು ಸಿನಿಮಾದ ಆಶೀರ್ವಾದವಿತ್ತು. ಎಲ್ಲಕ್ಕಿಂತ ದೊಡ್ಡ ಆಶೀರ್ವಾದ ಅವರು ನನ್ನನ್ನು ನನ್ನ ಹೆಸರಿಂದ ಗುರುತಿಸುತ್ತಿದ್ದರು. ನನ್ನ IDOನ CDP ಬಿಡುಗಡೆ ನನಗೆ ಸಿಕ್ಕ ಭಾಗ್ಯ. ಎಂದಿಗೂ ಅವರ ಅಭಿಮಾನಿ. Happy 18th to all his Fans&Followers.#VishnuSirLivesForeverpic.twitter.com/U4rxwGzdai
— Kichcha Sudeepa (@KicchaSudeep)September 17, 2020

ತನ್ನ ಟ್ವಿಟರ್​ ಖಾತೆಯಲ್ಲಿ ವಿಷ್ಣುದಾದ ಅವರ ಫೊಟೋ ಹಾಕಿರುವ ಚಾಲೇಂಜಿಂಗ್​ ಸ್ಟಾರ್​ ದರ್ಶನ್​, ‘ಅಭಿನಯ ಭಾರ್ಗವ, ನಮ್ಮೆಲರ ನಲ್ಮೆಯ ಸಾಹಸ ಸಿಂಹ ಡಾ.ವಿಷ್ಣು ಸರ್ ಅವರ 70ನೇ ವರ್ಷದ ಹುಟ್ಟುಹಬ್ಬದ ಶುಭಾಶಯಗಳು’ ಎಂದು ಶೀರ್ಷಿಕೆ ಬರೆದುಕೊಂಡಿದ್ದಾರೆ.
ಅಭಿನಯ ಭಾರ್ಗವ, ನಮ್ಮೆಲರ ನಲ್ಮೆಯ ಸಾಹಸ ಸಿಂಹ ಡಾ|| ವಿಷ್ಣು ಸರ್ ರವರ ೭೦ನೇ ವರ್ಷದ ಹುಟ್ಟುಹಬ್ಬದ ಸವಿನೆನಪಿನಲ್ಲಿ ನಮ್ಮ ರಾಬರ್ಟ್ ತಂಡದಿಂದ ಹುಟ್ಟುಹಬ್ಬದ ಹಾರ್ಧಿಕ ಶುಭಾಶಯಗಳು ☺️pic.twitter.com/TGssVHOTks
— Darshan Thoogudeepa (@dasadarshan)September 18, 2020

ವಿಷ್ಣುವರ್ಧನ್ ಅವರೊಂದಿಗೆ ಇರುವ ತನ್ನ ಬಾಲ್ಯದ ಫೋಟೋವನ್ನು ಟ್ವಿಟರ್​ನಲ್ಲಿ ಅಪ್ಲೋಡ್​ ಮಾಡಿಕೊಂಡಿರುವ ಪುನೀತ್ ರಾಜ್​ಕುಮಾರ್​, ವಿಷ್ಣು ಹುಟ್ಟುಹಬ್ಬಕ್ಕೆ ಶುಭಕೋರಿದ್ದಾರೆ.
Remembering Vishnu Sir on his 70th birthday ✨pic.twitter.com/2901GMdOrK
— Puneeth Rajkumar (@PuneethRajkumar)September 18, 2020

‘ನಮ್ಮ ಚಲನಚಿತ್ರೋದ್ಯಮ ಕಂಡ ಶ್ರೇಷ್ಠ ಕಲಾವಿದರು ನೀವು. ನಿಮ್ಮ ವರ್ಚಸ್ಸು ನಮ್ಮಲ್ಲಿ ನೆಲೆಸಲಿ ವಿಷ್ಣುವರ್ಧನ್​ ಸರ್’ ಎಂದಿರುವ ನಟ ರಕ್ಷಿತ್​ ಶೆಟ್ಟಿ, ‘ಅಭಿನಯ ಭಾರ್ಗವ, ಸಾಹಸಸಿಂಹ, ಪ್ರೀತಿಯ ವಿಷ್ಣುದಾದ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು’ ಎಂದು ಟ್ವೀಟ್​ ಮಾಡಿದ್ದಾರೆ.
You will always remain one of the greatest artists our film industry has witnessed. May your charisma continue to live young in our hearts Vishnuvardhan sir ✨ಅಭಿನಯ ಭಾರ್ಗವ, ಸಾಹಸಸಿಂಹ, ಪ್ರೀತಿಯ ವಿಷ್ಣು ದಾದ ರವರಿಗೆ ಹುಟ್ಟು ಹಬ್ಬದ ಶುಭಾಶಯಗಳು ✨pic.twitter.com/AtjwkKo2Du
— Rakshit Shetty (@rakshitshetty)September 18, 2020

ಹಾಗೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್​ ಕೂಡ ವಿಷ್ಣುದಾದಗೆ ಶುಭಕೋರಿದ್ದಾರೆ. ‘ಸಾಹಸಸಿಂಹ ವಿಷ್ಣುವರ್ಧನ್ ಅವರ ಜನ್ಮದಿನದಂದು ಅವರನ್ನು ಮನದುಂಬಿ ಸ್ಮರಿರುತ್ತೇನೆ. ಅವರ ನಟನೆಯ ಭಾವನಾತ್ಮಕ ದೃಶ್ಯಗಳು ಇಂದಿಗೂ ನನ್ನನ್ನು ಕಾಡುತ್ತವೆ. ಅವರನ್ನು ಆದರ್ಶವಾಗಿರಿಸಿಕೊಂಡು ಕಲಾ ಸೇವೆ ನಡೆಸುತ್ತಿರುವ ಅವರ ಕುಟುಂಬಕ್ಕೆ ಮತ್ತು ಸಮಾಜ ಸೇವೆ ನಡೆಸುತ್ತಿರುವ ಅಭಿಮಾನಿಗಳ ಜತೆಗೆ ಈ ಸಂಭ್ರಮದ ಸ್ಮರಣೆಯಲ್ಲಿ ನಾನು ಭಾಗಿಯಾಗುತ್ತೇನೆ’ ಎಂದು ಟ್ವೀಟ್​ ಮಾಡಿದ್ದಾರೆ.
ವಿಷ್ಣು ವಿರಾಟ ರೂಪ: ಇಂದು ಸಾಹಸ ಸಿಂಹನ ಜನ್ಮದಿನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 + ten =
Remember me
