ಉಡುಪಿ:ಅಯೋಧ್ಯೆಯಲ್ಲಿ ರಾಮಮಂದಿರ ಶಿಲಾನ್ಯಾಸ ನೆರವೇರಿಸುವ ದಿನ ದೇಶದ ಪಾಲಿಗೆ ಸುದಿನ. ಹೀಗಾಗಿ ಆ.5ರಂದು ಎಲ್ಲರೂ ಮನೆಯಲ್ಲಿ ರಾಮದೀಪ ಹಚ್ಚಿ ರಾಮನಾಮ ಭಜನೆಯಲ್ಲಿ ತೊಡಗಿಕೊಳ್ಳಬೇಕು ಎಂದು ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ವಿಶ್ವಸ್ಥ, ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀಗಳು, ದೇವಸ್ಥಾನ ಜೀರ್ಣೋದ್ಧಾರ ಸಂದರ್ಭದಲ್ಲಿ ಊರಿನ ಮಂದಿ ವ್ರತ ಸಂಕಲ್ಪ ಮಾಡುವಂತೆ ದೇಶವಾಸಿಗಳು ರಾಮಮಂದಿರದ ಬ್ರಹ್ಮಕಲಶವರೆಗೆ ರಾಮದೀಕ್ಷೆ ಪಡೆಯಬೇಕು ಎಂದು ಕರೆ ನೀಡಿದರು.
ಇದನ್ನೂ ಓದಿರಿನಾಲ್ಕೇ ದಿನದಲ್ಲಿ ಕರೊನಾ ಗೆದ್ದ 110 ವರ್ಷದ ಸಿದ್ದಮ್ಮಜ್ಜಿ
ರಾಮಮಂದಿರ ಶಿಲಾನ್ಯಾಸದಿಂದ ತೊಡಗಿ ನಿರ್ಮಾಣದವರೆಗೆ ಪ್ರತಿ ಮನೆಯಲ್ಲೂ ಭಜನೆ, ಸಂಕೀರ್ತನೆ ನಡೆಯಬೇಕು. ಇದರಿಂದ ಧಾರ್ಮಿಕತೆಯ ಪುನರುತ್ಥಾನ ಸಾಧ್ಯ. ಮಂದಿರದ ಕಟ್ಟಡ ಮಾತ್ರವಲ್ಲದೆ ವ್ಯಕ್ತಿತ್ವ ನಿರ್ಮಾಣವೂ ಆಗಲಿದೆ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.
ನೀಲಾವರದಲ್ಲಿ ಪಟ್ಟದ ದೇವರಿಗೆ ಲಕ್ಷ ತುಳಸಿ ಅರ್ಚನೆ, ನವಗ್ರಹ ಹೋಮ, ರಾಮಮಂತ್ರ ಹೋಮ ನಡೆಯಲಿದೆ. ರಾಮ ಕಾರ್ಯದಲ್ಲಿ ಕರ್ನಾಟಕದ ಹನುಮಂತನ ಪಾತ್ರ ಮಹತ್ವದ್ದು, ಹೀಗಾಗಿ ರಾಜ್ಯದ ಜನರ ಸಹಭಾಗಿತ್ವವೂ ವಿಶೇಷವಾಗಿದೆ. ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಕರ್ನಾಟಕದಿಂದ ಆದಿಚುಂಚನಗಿರಿ ಮಠಾಧೀಶ ಶ್ರೀ ನಿರ್ಮಲಾನಂದ ಸ್ವಾಮೀಜಿ ಭಾಗವಹಿಸುವ ಸಾಧ್ಯತೆ ಇದೆ ಎಂದು ತಿಳಿಸಿದರು.
ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ವಿಷ್ಣುಮೂರ್ತಿ ಆಚಾರ್ಯ, ವಿಭಾಗ ಪ್ರಭಾರಿ ಕೆ.ಆರ್. ಸುನೀಲ್ ಉಪಸ್ಥಿತರಿದ್ದರು.
ಕರೊನಾ ಸೋಂಕಿನಿಂದ ಪುತ್ತಿಗೆ ಶ್ರೀಗಳು ಗುಣಮುಖ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:six + 11 =
Remember me
