ಬೆಂಗಳೂರು: ಕಸ್ತೂರಬಾ ರಸ್ತೆಯಲ್ಲಿರುವ ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಾಂತ್ರಿಕ ವಸ್ತು ಸಂಗ್ರಹಾಲಯ ಸೆನ್ಸರ್ ಆಧಾರಿತ ಗ್ಯಾಲರಿಗಳನ್ನು ಸಜ್ಜುಗೊಳಿಸುತ್ತಿದೆ. ಮ್ಯೂಸಿಯಂಗೆ ಭೇಟಿ ನೀಡುವ ಸಾರ್ವಜನಿಕರಲ್ಲಿ ಸೋಂಕು ಭೀತಿ ನಿವಾರಿಸಲು ಈ ಕ್ರಮ ಕೈಗೊಳ್ಳಲಾಗಿದೆ. ಇದುವರೆಗೆ ಗ್ಯಾಲರಿಗೆ ಹೋದರೆ ಬಟನ್ ಒತ್ತುವ ಮೂಲಕ ಅಲ್ಲಿರುವ ವೈಶಿಷ್ಟ್ಯಗಳನ್ನು ತಿಳಿದುಕೊಳ್ಳಬೇಕಿತ್ತು. ಆದರೆ, ಇನ್ನುಮುಂದೆ ಸಾರ್ವಜನಿಕರು ಗ್ಯಾಲರಿಗೆ ಪ್ರವೇಶಿಸಿದ ಕೂಡಲೇ ತಾನಾಗಿಯೇ ಗ್ಯಾಲರಿಯಲ್ಲಿರುವ ಆವಿಷ್ಕಾರಗಳು ಪ್ರದರ್ಶಿತವಾಗಲಿವೆ.
ಒಂದು ಬಾರಿಗೆ ನಿಗದಿತ ಸಂಖ್ಯೆಯ ವೀಕ್ಷಕರನ್ನು ಗ್ಯಾಲರಿ ಒಳಗೆ ಬಿಡಲಾಗುತ್ತದೆ. ಅವರು ಯಾವುದೇ ಯಂತ್ರಗಳನ್ನು ಕೈಯಿಂದ ಮುಟ್ಟಬೇಕಿಲ್ಲ. ಗ್ಯಾಲರಿಯ ಆವಿಷ್ಕಾರಗಳು ಸೆನ್ಸರ್ ಟೆಕ್ನಾಲಜಿಯಿಂದಾಗಿ ತಾನಾಗಿಯೇ ಪ್ರದರ್ಶಿತವಾಗಲಿವೆ. ನಿಗದಿತ ತಂಡ ಗ್ಯಾಲರಿಯನ್ನು ವೀಕ್ಷಿಸಿ ಹೊರಬಂದ ಬಳಿಕ ಮತ್ತೊಂದು ತಂಡಕ್ಕೆ ಪ್ರವೇಶ ಕಲ್ಪಿಸಲಾಗುತ್ತದೆ.
ಇದನ್ನೂ ಓದಿ:ಅಮ್ಮಾ…. ಒಮ್ಮೆ ನಿನ್ನ ಕಣ್ತುಂಬಿಕೊಂಡು ಬಿಡುವೆ: ಐಸಿಯು ಕಿಟಕಿ ಬಳಿ ಕುಳಿತ ಪ್ಯಾಲೆಸ್ತೈನ್ ಯುವಕನ ಕಣ್ಣೀರ ಕಥೆ
ಒಂದು ತಿಂಗಳಲ್ಲಿ ಪೂರ್ಣ:ಮ್ಯೂಸಿಯಂನಲ್ಲಿರುವ 7 ಗ್ಯಾಲರಿಗಳ ಪೈಕಿ 1 ಗ್ಯಾಲರಿಯಲ್ಲಿ ಸೆನ್ಸರ್ ಅಳವಡಿಕೆ ಕಾರ್ಯ ಮುಗಿದಿದೆ. ಸದ್ಯ ಲಾಕ್​ಡೌನ್ ಜಾರಿ ಹಿನ್ನೆಲೆ ಯಲ್ಲಿ ಈ ಕಾರ್ಯವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ತಿಂಗಳೊಳಗೆ ಈ ಕಾರ್ಯ ಪೂರ್ಣಗೊಳಿಸುವ ಗುರಿ ಹೊಂದಿದ್ದೇವೆ ಎಂದು ಮ್ಯೂಸಿಯಂ ನಿರ್ದೇಶಕ ಕೆ. ಮದನ್ ಗೋಪಾಲ್ ವಿಜಯವಾಣಿಗೆ ತಿಳಿಸಿದ್ದಾರೆ.
ಇದನ್ನೂ ಓದಿ:ವಾಹಿನಿ ಮುಂದೆ ಕುಳಿತು ಪಾಠ ಆಲಿಸಿದ ಮಕ್ಕಳು
ಸುರಕ್ಷತೆಗೆ ಒತ್ತು:ಸರ್ಕಾರ ಮ್ಯೂಸಿಯಂ ಅನ್ನು ಆರಂಭಿಸಲು ಸೂಚಿಸಿದಾಗ ಸಾರ್ವಜನಿಕರ ಸುರಕ್ಷತೆಗೆ ಹೆಚ್ಚಿನ ಒತ್ತು ಕೊಡಲಾಗು ತ್ತದೆ. ಈ ನಿಟ್ಟಿನಲ್ಲಿ ವ್ಯಕ್ತಿಗತ ಅಂತರ ಕಾಯ್ದು ಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ಒಮ್ಮೆ ಮಾತ್ರ ಬಳಸುವ ಕೈಗವಸುಗಳನ್ನು ಕೊಡಲಾಗುತ್ತದೆ. ಮ್ಯೂಸಿಯಂ ಹೊರಭಾಗದಲ್ಲಿ ಸಿಂಕ್, ನೀರು, ನೈರ್ಮಲ್ಯಕ ಒದಗಿಸುವ ವ್ಯವಸ್ಥೆ ಮಾಡಲಾಗಿದೆ. ಟಿಕೆಟ್ ಪಡೆದ ನಂತರವೂ ನೈರ್ಮಲ್ಯಕ ಬಳಸಬೇಕು.
ಕರೊನಾ ಪರಿಶೀಲನೆ ಕಾರ್ಯಪಡೆಗೆ ಆಯುಕ್ತರ ನೇತೃತ್ವ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten + 11 =
Remember me
