|ಅರವಿಂದ ಅಕ್ಲಾಪುರಶಿವಮೊಗ್ಗ
ಉಕ್ಕಿನ ನಗರಿ, ಕಾಗದ ನಗರ ಇವು ಭದ್ರಾವತಿಗೆ ಇದ್ದ ಅನ್ವರ್ಥ ನಾಮಗಳು. ಎಂಪಿಎಂ ಗತಿಸಿದ ನಂತರ ಕಾಗದ ನಗರ, ಈಗ ವಿಐಎಸ್​ಎಲ್ ಮುಚ್ಚುವ ನಿರ್ಧಾರ ಕೈಗೊಂಡ ನಗರ ಉಕ್ಕಿನ ನಗರಿ ಎಂಬ ಅನ್ವರ್ಥ ನಾಮಗಳೂ ನೇಪಥ್ಯಕ್ಕೆ ಹೋಗಲಿವೆ. ಮುಂದಿನ ಪೀಳಿಗೆಗೆ ಕತೆ ಹೇಳುವ ಪರಿಸ್ಥಿತಿ ಬರಲಿದೆ. ದೇಶದ ಮೊದಲ ಸಾರ್ವಜನಿಕ ಸ್ವಾಮ್ಯದ ಉಕ್ಕು ಕಾರ್ಖಾನೆ ಎಂಬ ಹೆಗ್ಗಳಿಕೆ ಭದ್ರಾವತಿ ವಿಐಎಸ್​ಎಲ್ (ವಿಶ್ವೇಶ್ವರಯ್ಯ ಐರನ್ ಅಂಡ್ ಸ್ಟೀಲ್ ಲಿಮಿಟೆಡ್)ನದ್ದು. ಉತ್ಕೃಷ್ಟ ದರ್ಜೆಯ ಕಾಗದ ತಯಾರಿಕೆಗೆ ಹೆಸರುವಾಸಿಯಾಗಿದ್ದ ಎಂಪಿಎಂ (ಮೈಸೂರು ಪೇಪರ್ ಮಿಲ್ಸ್) ಭದ್ರಾವತಿಯ ಮತ್ತೊಂದು ಹೆಗ್ಗಳಿಕೆ. ಭೂಲೋಕದ ಸ್ವರ್ಗದಂತಿದ್ದ ಈ ಎರಡೂ ಕಾರ್ಖಾನೆಗಳು ಇಂದು ಮರಣಶಯ್ಯೆಯಲ್ಲಿವೆ. ಯಂತ್ರೋಪಕರಣಗಳು ತುಕ್ಕು ಹಿಡಿಯುತ್ತಿವೆ.
ವಿಐಎಸ್​ಎಲ್ ಉಳಿಸಿ ಎಂಬ ಕೂಗು ಈಗ ದೆಹಲಿಯಲ್ಲೂ ಪ್ರತಿಧ್ವನಿ ಸುತ್ತಿದೆ. ಶತಮಾನೋತ್ಸವದ ಸಂಭ್ರದಲ್ಲಿರಬೇಕಾಗಿದ್ದ ವಿಐಎಸ್​ಎಲ್​ನಲ್ಲಿ ಶೋಕಾಚರಣೆ ಸ್ಥಿತಿ ತಲುಪಿದೆ. ಇದು ಕಡೇ ಪ್ರಯತ್ನ ಎಂಬಂತೆ ಕಾರ್ವಿುಕರು ಹೋರಾಟದ ಹಾದಿ ಹಿಡಿದಿದ್ದಾರೆ. ಒಂದು ಕಾಲದಲ್ಲಿ ಸಾವಿರಾರು ಮಂದಿಗೆ ಉದ್ಯೋಗ ನೀಡಿದ, ಒಂದೇ ಕುಟುಂಬದ ಮೂರು ತಲೆಮಾರಿಗೆ ವೃತ್ತಿ ಭದ್ರತೆ ಒದಗಿಸಿದ್ದ ವಿಐಎಸ್​ಎಲ್ ಅಭದ್ರತೆಗೆ ಸಿಲುಕಿದೆ. 1970ರಲ್ಲಿ ಗುತ್ತಿಗೆ ಹಾಗೂ ಕಾಯಂ ಸೇರಿ ಸುಮಾರು 17 ಸಾವಿರ ಕಾರ್ವಿುಕರು ಇಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಹೀಗೆ ಉತ್ತುಂಗದಲ್ಲಿದ್ದ ಕಾರ್ಖಾನೆಯನ್ನು ಇಂದು ಮುನ್ನಡೆಸಲು ಖಾಸಗಿಯವರೂ ಮುಂದೆ ಬಾರದ ಸ್ಥಿತಿ ನಿರ್ವಣವಾಗಿದೆ.
2017ರಲ್ಲಿ 150 ಕೋಟಿ ರೂ. ನಷ್ಟ ಹಾದಿಗೆ ಸಿಲುಕಿದ ನಂತರ ವಿಐಎಸ್​ಎಲ್ ಮೇಲೆ ಸೈಲ್ ನಿರಾಸಕ್ತಿ ವಹಿಸಿತು. ಕಾರ್ಖಾನೆಯ ಆಧುನೀಕರಣಕ್ಕೂ ಹಿಂದೇಟು ಹಾಕಲಾಯಿತು. ಇದೆಲ್ಲದರ ಪರಿಣಾಮ ಕಾರ್ಖಾನೆ ಹಿನ್ನಡೆ ಅನುಭವಿಸಿತು. ಕೇಂದ್ರ ಸರ್ಕಾರ ವಿಐಎಸ್​ಎಲ್ ಮಾರಾಟಕ್ಕೆ ಜಾಗತಿಕ ಟೆಂಡರ್ ಕರೆದರೂ ಪ್ರಯೋಜನವಾಗಲಿಲ್ಲ. 600 ಕೋಟಿ ರೂ. ವಾರ್ಷಿಕ ವಹಿವಾಟು ಹೊಂದಿದ್ದ ವಿಐಎಸ್​ಎಲ್ ಇಂದು ಮುಚ್ಚುವ ಸ್ಥಿತಿಯಲ್ಲಿದೆ.
ಇದು ವಿಐಎಸ್​ಎಲ್ ಇತಿಹಾಸ:1923ರ ಜನವರಿ 18ರಂದು ಮೈಸೂರು ಐರನ್ ವರ್ಕ್್ಸ ಹೆಸರಿನಲ್ಲಿ ವಿಶ್ವೇಶ್ವರಯ್ಯ ಸ್ಥಾಪಿಸಿದ ಪಿಗ್ ಐರನ್ ಹಾಗೂ ಅಲಾಯ್ ಸ್ಟೀಲ್ ಘಟಕವೇ ಮುಂದೆ 1975ರಲ್ಲಿ ವಿಶ್ವೇಶ್ವರಯ್ಯ ಐರನ್ ಅಂಡ್ ಸ್ಟೀಲ್ ಲಿಮಿಟೆಡ್ ಹೆಸರಿನಲ್ಲಿ ಮರುನಾಮಕರಣಗೊಂಡಿತು. ನ್ಯೂಯಾರ್ಕ್ ಮೂಲದ ಕಂಪನಿ 1918ರಿಂದ 1922ರ ಅವಧಿಯಲ್ಲಿ ಕಾರ್ಖಾನೆ ಸ್ಥಾಪನೆಗೆ ಬೇಕಾದ ತಂತ್ರಜ್ಞಾನ ಒದಗಿಸಿತು. 1952ರಲ್ಲಿ ವಿದ್ಯುತ್ ಬಳಕೆ ಮೂಲಕ ಪಿಗ್ ಐರನ್ ಉತ್ಪಾದಿಸಿದ ವಿಐಎಸ್​ಎಲ್ ದೇಶದ ಮೊದಲ ಕಾರ್ಖಾನೆ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. 1962ರಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಶೇ.40:60 ಅನುಪಾತದಲ್ಲಿ ವಿಐಎಸ್​ಎಲ್ ಶೇರು ಹೊಂದಿದ್ದವು. 1998ರಲ್ಲಿ ವಿಐಎಸ್​ಎಲ್​ನ್ನು ಸೈಲ್ ಸಮೂಹಕ್ಕೆ ಸೇರಿಸಲಾಯಿತು.
8ರ ಸಂತೆ ನೆನಪು:ವಿಐಎಸ್​ಎಲ್ ಹಾಗೂ ಭದ್ರಾವತಿ ಕಾರ್ವಿುಕರಿಗೆ ಮಾಸಿಕ ವೇತನ ಬಟ ವಾಡೆಯಾಗುತ್ತಿದ್ದುದು ಪ್ರತಿ ತಿಂಗಳ 8ರಂದು. ಅಂದು ನಡೆಯುತ್ತಿದ್ದ ಸಂತೆಯಲ್ಲಿ ವಹಿವಾಟಿನ ಪ್ರಮಾಣ ಲಕ್ಷಾಂತರ ರೂ. 8ನೇ ತಾರೀಖಿನ ಸಂತೆ ಎಂದೇ ಅದನ್ನು ಕರೆಯಲಾಗುತ್ತಿತ್ತು. ಅಲ್ಲಿ ಸಿಗದ ವಸ್ತುಗಳೇ ಇರಲಿಲ್ಲ. ಈಗ ಆ ವೈಭವ ನೆನಪು ಮಾತ್ರ.
ನಿವೃತ್ತರ ಆತಂಕ:ವಿಐಎಸ್​ಎಲ್​ನ ನಿವೃತ್ತ ನೌಕರರಿಗೆ 99 ವರ್ಷದ ಗುತ್ತಿಗೆ ಆಧಾರದಲ್ಲಿ ಈಗಾಗಲೇ ಮನೆಗಳನ್ನು ನೀಡಲಾಗಿದೆ. ಅಲ್ಲಿ ಸಾವಿರಾರು ಕಾರ್ವಿುಕರು ನೆಲೆ ಕಂಡುಕೊಂಡಿದ್ದಾರೆ. ವಿಐಎಸ್​ಎಲ್ ಮುಚ್ಚುವುದರರಿಂದ ಇವರೆಲ್ಲರೂ ಬೀದಿಗೆ ಬೀಳುವ ಆತಂಕ ಎದುರಾಗಿದೆ. ಒಂದು ವೇಳೆ ಕಾರ್ಖಾನೆ ಖಾಸಗಿಯವರಿಗೆ ಮಾರಾಟ ವದರೂ ನೆಲೆ ಕಳೆದುಕೊಳ್ಳುವ ಭಯ ತಪ್ಪಿದ್ದಲ್ಲ.
ಎಂಪಿಎಂ ಎಂಬ ಮುಗಿದ ಅಧ್ಯಾಯ:ವಿಐಎಸ್​ಎಲ್​ನ್ನು ಮುಚ್ಚು ವುದನ್ನು ತಡೆಯುವ ಪ್ರಯತ್ನ ಒಂದೆಡೆಯಾದರೆ ಎಂಪಿಎಂನದ್ದು ಮುಗಿದ ಅಧ್ಯಾಯ. ಎಂಪಿಎಂ ಉತ್ತುಂಗದಲ್ಲಿದ್ದಾಗ ವಾರ್ಷಿಕ 450 ಕೋಟಿ ರೂ. ವಹಿವಾಟು ನಡೆಸಿದ ನಿದರ್ಶನವಿದೆ. 600 ಕೋಟಿ ರೂ. ನಷ್ಟ ಎಂಬ ಕಾರಣಕ್ಕೆ ಕಾರ್ಖಾನೆಯನ್ನು ಮುಚ್ಚಲಾಗಿದೆ. ಕಾಗದ ಮಾತ್ರವಲ್ಲದೇ ಸಕ್ಕರೆ ಕಾರ್ಖಾನೆಯನ್ನೂ ಹೊಂದಿದ್ದ ಎಂಪಿಎಂ, ಕೆಲ ವರ್ಷಗಳ ಹಿಂದೆ ಪರಿಸರ ಇಲಾಖೆಯ ಅವಕೃಪೆಗೆ ಒಳಗಾಗಿತ್ತು. ಬಳಿಕ ನ್ಯೂನತೆಗಳನ್ನು ಸರಿಪಡಿಸಿಕೊಂಡು ಉತ್ಪಾದನೆಯ ಹಳಿಗೆ ಮರಳಿತ್ತಾದರೂ ಆಡಳಿಶಾಹಿಯ ಕೈಯಲ್ಲಿ ಕೊನೆಯುಸಿರೆಳೆಯಿತು.


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 + 7 =
Remember me
