ಬೆಂಗಳೂರು:ಈ ದೇವಸ್ಥಾನ ಮಾಜಿ ಪ್ರಧಾನಿ ಸೇರಿದಂತೆ ಅನೇಕ ಮಾಜಿ ಮುಖ್ಯಮಂತ್ರಿಗಳ ನೆಚ್ಚಿನ ತಾಣ. ಇಲ್ಲಿಗೆ ದೇಶದ ವಿವಿಧಡೆಯಿಂದ ಸಾವಿರಾರು ಭಕ್ತರು ಬರುತ್ತಾರೆ. ಆದ್ರೆ ಇದೇ ದೇವಸ್ಥಾನದ ಸಂಗಮ ಸ್ಥಳದಲ್ಲಿ ಪುಡಿ ರೌಡಿಯ ದೌರ್ಜನ್ಯ ನಡೆಯುತ್ತಿದೆ.
ಈ ದೇವಸ್ಥಾನ ಮತ್ಯಾವುದೂ ಅಲ್ಲ, ಗಾಣಗಾಪುರದ ದತ್ತಾತ್ರೇಯನ ಸನ್ನಿಧಿ! ಇಲ್ಲಿ ಪುಡಿ ರೌಡಿಯಿಂದ ಭಕ್ತರಿಗೆ ದೌರ್ಜನ್ಯ ನಡೆದಿದ್ದು, ಈತ ಭಕ್ತರ ತಲೆ ಮೇಲೆ ಕಾಲಿಟ್ಟಿದ್ದಾನೆ. ಕಲಬುರಗಿ ಜಿಲ್ಲೆಯ ಅಫಜಲಪುರ ಗಾಣಗಾಪುರದಲ್ಲಿ ಪುಡಿ ರೌಡಿ ಉದ್ಧಟತನ ಮೆರೆದಿದ್ದು ಈತನನ್ನು ಯಲ್ಲಪ್ಪ ಕಲ್ಲೂರ್ ಎಂದು ಗುರುತಿಸಲಾಗಿದೆ. ವಿಚಿತ್ರ ಎಂದರೆ ಈತ ಗಾಣಗಾಪುರದ ನಿವಾಸಿ.
ಇದನ್ನೂ ಓದಿ:ನಗರದಲ್ಲಿ ಹೆಚ್ಚಾಯ್ತು ರೌಡಿಗಳ ಅಟ್ಟಹಾಸ; ಹಫ್ತಾ ನೀಡಿಲ್ಲವೆಂದು ಮೀನು ವ್ಯಾಪಾರಿ ಮೇಲೆ ಲಾಂಗ್ ಬೀಸಿದ ಪುಡಿ ರೌಡಿ
ಗಾಣಗಾಪುರದ ಸಂಗಮ ಸ್ಥಳದಲ್ಲಿರೋ ಔದುಂಬರ ವೃಕ್ಷದ ಕೆಳಗೆ ದತ್ತ ಚರಿತ್ರೆ ಪಾರಾಯಣವನ್ನು ಭಕ್ತರು ಮಾಡುತ್ತಾರೆ. ದತ್ತ‌ ಚರಿತ್ರೆ ಪಾರಾಯಣಕ್ಕೆ ಕೂತ ಸಮಯದಲ್ಲೇ ಭಕ್ತರ ತಲೆ ಮೇಲೆ ಕಾಲಿಟ್ಟು, ಹಲ್ಲೆ ಮಾಡಿದ ಈ ಯಲ್ಲಪ್ಪ ಕಲ್ಲೂರ್ ದೌರ್ಜನ್ಯ ಮಾಡಿದ್ದಾನೆ.
ಕಳೆದ ಕೆಲ ವರ್ಷಗಳಿಂದ ಭಕ್ತರಿಗೆ ಕಿರುಕುಳ ಯಲ್ಲಪ್ಪ ನೀಡುತ್ತಿರುವ ಆರೋಪ ಕೇಳಿಬಂದಿದ್ದು ನಲವತ್ತಕ್ಕೂ ಅಧಿಕ ಪ್ರಕರಣ ಇದ್ದರೂ ಪೊಲೀಸರು ಮಾತ್ರ ಯಾವ ಕ್ರಮಗಳನ್ನೂ ಕೈಗೊಳ್ಳುತ್ತಿಲ್ಲ. ಈ ಹಿನ್ನೆಲೆಯಲ್ಲಿ ಗಾಣಗಾಪುರ ಪೊಲೀಸರ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ಹಗಲಲ್ಲೇ ಲಾಂಗ್​ ಹಿಡಿದು ಕಾಲೇಜು ವಿದ್ಯಾರ್ಥಿಗಳನ್ನು ಅಟ್ಟಾಡಿಸಿದ ಪುಡಿ ರೌಡಿಗಳು: ಸಿಸಿಟಿವಿಯಲ್ಲಿ ದೃಶ್ಯ ಸೆರೆ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × two =
Remember me
