ಬೆಂಗಳೂರು:ಸಂಪುಟ ವಿಸ್ತರಣೆಗೆ ಹಸಿರು ನಿಶಾನೆ ತೋರಿಸಲು ಸಾವಧಾನ ಮಾಡುತ್ತಿರುವ ಬಿಜೆಪಿ ವರಿಷ್ಠರ ರಹಸ್ಯ ನಡೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಹಾಗೆಯೇ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ದಾವೋಸ್ ಪ್ರವಾಸಕ್ಕೆ ಮುನ್ನ ಸಂಪುಟ ವಿಸ್ತರಿಸಬೇಕೆಂಬ ಪ್ರಯತ್ನಕ್ಕೂ ಹಿನ್ನೆಡೆಯಾಗುವ ಲಕ್ಷಣಗಳು ಗೋಚರಿಸಿವೆ.
ಸಂಪುಟ ವಿಸ್ತರಣೆಗೆ ಅನುಮತಿ ಪಡೆಯಲು ಕಳೆದೊಂದು ತಿಂಗಳಿಂದಲೂ ಪಕ್ಷದ ಅಧ್ಯಕ್ಷ ಅಮಿತ್ ಷಾ ಭೇಟಿ ಮಾಡಲು ಸಿಎಂ ಬಿಎಸ್​ವೈ ಅನೇಕ ಬಾರಿ ಪ್ರಯತ್ನ ನಡೆಸಿದರೂ, ಫಲಕಾರಿಯಾಗಿಲ್ಲ. ಅನ್ಯ ರಾಜ್ಯಗಳಲ್ಲಿ ಸರ್ಕಾರ ಕಳೆದುಕೊಂಡ ಸಂದರ್ಭ ಪೂರ್ಣ ಬಹುಮತದ ಸರ್ಕಾರ ಕರ್ನಾಟಕದಲ್ಲಿ ರಚನೆಯಾಗಿದೆ. ಆದರೂ ಆ ಖುಷಿಯನ್ನು ಹಂಚಿಕೊಳ್ಳಲು ತಯಾರಿಲ್ಲದ ವರಿಷ್ಠರು, ಸಂಪುಟ ವಿಸ್ತರಣೆ ಬಗ್ಗೆ ಚಕಾರವೆತ್ತಿಲ್ಲ. ಆರಂಭದಲ್ಲಿ ಜಾರ್ಖಂಡ್ ಚುನಾವಣೆ ನೆಪ, ಬಳಿಕ ಪೌರತ್ವ ಕಾಯ್ದೆ ಬೆಳವಣಿಗೆ ಹೀಗೆ ಒಂದಾದ ಮೇಲೊಂದು ನೆಪ ಹೇಳಿಕೊಂಡೇ ಕಾಲ ತಳ್ಳುತ್ತಿರುವುದು ರಾಜ್ಯ ಬಿಜೆಪಿ ನಾಯಕರಿಗೂ ಬಿಸಿತುಪ್ಪವಾಗಿ ಪರಿಣಮಿಸಿದೆ. ಪಕ್ಷದ ಉನ್ನತ ಮೂಲಗಳ ಪ್ರಕಾರ, ಯಡಿಯೂರಪ್ಪ ಅವರನ್ನು ಹಿಡಿತದಲ್ಲಿಟ್ಟುಕೊಳ್ಳಲು ಸತಾಯಿಸಲಾಗುತ್ತಿದೆ ಎಂಬ ಮಾತಿದೆ. ಉಪಚುನಾವಣೆ ಫಲಿತಾಂಶ ಬಳಿಕ ಅವರ ಪ್ರಭಾವ ಮತ್ತಷ್ಟು ವೃದ್ಧಿಯಾಗಿದ್ದು, ಅವರನ್ನು ನಿಯಂತ್ರಿಸಲು ಪರೋಕ್ಷವಾಗಿ ಈ ರೀತಿ ಮಾಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ಒಂದು ಹಂತದಲ್ಲಿ ಸಿಎಂ ಸಚಿವಾಲಯದ ಅಧಿಕಾರಿಗಳ ಬಗ್ಗೆ ಮತ್ತು ಕುಟುಂಬದಿಂದ ಅಂತರ ಕಾಯ್ದುಕೊಳ್ಳುವ ಕುರಿತು ಸಲಹೆಗಳು ಬಂದಿದ್ದವು. ಸಲಹೆಯನ್ನು ವಿನಮ್ರವಾಗಿ ಸ್ವೀಕರಿಸಿದ್ದ ಬಿಎಸ್​ವೈ ಅಧಿಕಾರಿಗಳನ್ನು ಬದಲಿಸಿದ್ದರು. ಇಷ್ಟರ ನಡುವೆಯೂ ಸರ್ಕಾರದೊಳಗೆ ಸಂಬಂಧಪಡದವರ ‘ಹಸ್ತಕ್ಷೇಪ’ ವರಿಷ್ಠರಿಗೆ ರುಚಿಸಿಲ್ಲ. ಬಿಎಸ್​ವೈ ಕಾರ್ಯವೈಖರಿ, ಬದ್ಧತೆ, ಕಾಳಜಿ, ನಡೆಗಳ ಬಗ್ಗೆ ವರಿಷ್ಠರಿಗೆ ಯಾವುದೇ ತಕರಾರು ಇಲ್ಲವಾದರೂ, ಸರ್ಕಾರದೊಳಗಿನ ಬೆಳವಣಿಗೆ, ತೀರ್ವನಗಳ ಕುರಿತು ‘ಅನ್ಯರ ಹಸ್ತಕ್ಷೇಪ’ ಸಹ್ಯವೆನಿಸಿಲ್ಲ. ಅಷ್ಟೇ ಅಲ್ಲದೇ ಪ್ರಧಾನಿ ನರೇಂದ್ರ ಮೋದಿ ಅವರ ರಾಜ್ಯ ಪ್ರವಾಸದ ವೇಳೆ ತುಮಕೂರಿನಲ್ಲಿ ಸಿಎಂ ಮಾಡಿದ ಭಾಷಣ ಕೇಂದ್ರಕ್ಕೆ ಚುರುಕುಮುಟ್ಟಿಸಿತ್ತು. ಅದೇ ಮುನಿಸು ಮುಂದುವರಿಸಿರುವ ವರಿಷ್ಠರು, ಸಂಪುಟ ವಿಸ್ತರಣೆಗೆ ಚಕಾರವೆತ್ತಿಲ್ಲ ಎಂದು ಮೂಲಗಳು ತಿಳಿಸಿವೆ.
ಒಂದು ವಾರದಲ್ಲಿ ಬಿಎಸ್​ವೈ ದೆಹಲಿಗೆ ತೆರಳಲು ಮೂರು ಬಾರಿ ಪ್ರಯತ್ನ ನಡೆಸಿದ್ದರು. ಜ.11, 12ರಂದು ದೆಹಲಿಗೆ ಹೋಗಿಯೇ ಬಿಡುವುದು, ಬಳಿಕ ಅಲ್ಲಿ ಭೇಟಿಗೆ ಪ್ರಯತ್ನ ಮಾಡುವುದೆಂದು ತೀರ್ವನವಾಗಿತ್ತು. ಒಂದು ವೇಳೆ ವರಿಷ್ಠರು ಭೇಟಿಗೆ ಅವಕಾಶ ಕೊಡದಿದ್ದರೆ ಬೇರೆ ಸಂದೇಶ ಹೋಗುತ್ತದೆಂದು ತಾಳ್ಮೆ ವಹಿಸಿದರು ಎಂದು ಅವರ ಆಪ್ತರು ತಿಳಿಸಿದ್ದಾರೆ. ಜ.20ರಂದು ದಾವೋಸ್ ಪ್ರವಾಸಕ್ಕೆ ತೆರಳುತ್ತಿದ್ದು, ಅಷ್ಟರೊಳಗೆ ಸಂಪುಟ ವಿಸ್ತರಣೆ ಮಾಡಲೇಬೇಕೆಂಬ ಉದ್ದೇಶ ಮುಖ್ಯಮಂತ್ರಿ ಅವರದ್ದು. ಹೀಗಾಗಿ ಜ.17ರಂದು ರಾಜ್ಯಕ್ಕೆ ಆಗಮಿಸುತ್ತಿರುವ ಅಮಿತ್ ಷಾ ಜತೆ ಚರ್ಚೆ ನಡೆಸಿ, ಒಪ್ಪಿಗೆ ಪಡೆದು 24 ಗಂಟೆಯೊಳಗೆ ಸಂಪುಟ ವಿಸ್ತರಿಸುವ ಆಲೋಚನೆಯಲ್ಲೂ ಇದ್ದಾರೆ. ಇಷ್ಟರ ನಡುವೆ ಸಚಿವಾಕಾಂಕ್ಷಿಗಳಿಂದ ಒತ್ತಡ ಹೆಚ್ಚಾಗಿದೆ. ಪ್ರತಿಪಕ್ಷ ಸಹ ಇದೇ ವಿಷಯ ಇಟ್ಟು ಕೊಂಡು ಟೀಕೆ ಮಾಡಲಾರಂಭಿಸಿದೆ.
ಸಚಿವ ಸಂಪುಟ ವಿಸ್ತರಣೆ ಸಂಬಂಧ ಹೈಕಮಾಂಡ್ ಜತೆಗೆ ರ್ಚಚಿಸಲು ದೆಹಲಿಗೆ ಹೋಗುವುದಿಲ್ಲ. ಇಂದಿನಿಂದ ಎರಡು ದಿನ ರಾಜ್ಯ ಪ್ರವಾಸ ತೆರಳುತ್ತಿದ್ದೇನೆ. ಜ.17ರಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ರಾಜ್ಯಕ್ಕೆ ಬರುತ್ತಿರುವುದರಿಂದ ಇಲ್ಲಿಯೇ ಅವರೊಂದಿಗೆ ರ್ಚಚಿಸಿ ಪಟ್ಟಿ ಅಂತಿಮಗೊಳಿಸಲಾಗುವುದು.
| ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 + fourteen =
Remember me
