ಮಹದೇವಪುರ:ಸಮಗ್ರ ಅಭಿವೃದ್ಧಿ ಕಾರ್ಯಗಳಿಗೆ ಬಿಜೆಪಿಗೆ ಮತ ಹಾಕಿ ಎಂದು ಮಹದೇವಪುರ ಕ್ಷೇತ್ರ ಬಿಜೆಪಿ ಅಭ್ಯರ್ಥಿ ಮಂಜುಳಾ ಅರವಿಂದ ಲಿಂಬಾವಳಿ ಮನವಿ ಮಾಡಿದ್ದಾರೆ.
ಕ್ಷೇತ್ರ ವ್ಯಾಪ್ತಿಯಲ್ಲಿ ರೋಡ್ ಶೋ ಮೂಲಕ ಮತಯಾಚಿಸಿ ಮಾತನಾಡಿ, ಕಳೆದ 15 ವರ್ಷಗಳಲ್ಲಿ ನಮ್ಮ ಯಜಮಾನರು (ಅರವಿಂದ ಲಿಂಬಾವಳಿ) ಮಾಡಿರುವ ಕೆಲಸವೇ ನನಗೆ ಶ್ರೀರಕ್ಷೆ ಎಂದರು.
ಇದನ್ನೂ ಓದಿ:ಶೃತಿ ಖರ್ಗೆಗೆ ಬ್ರೈನ್ ಟ್ಯೂಮರ್ ಪತ್ತೆ: ಮುಂಬೈ-ಚಿತ್ತಾಪುರ ಪ್ರವಾಸದಲ್ಲೇ ಪ್ರಿಯಾಂಕ ಖರ್ಗೆ ಬಿಜಿ
ಕೇಂದ್ರ ಹಾಗೂ ರಾಜ್ಯದಲ್ಲಿ ಡಬಲ್ ಇಂಜಿನ್ ಸರ್ಕಾರಗಳಿದ್ದು, ಭವಿಷ್ಯದಲ್ಲೂ ಮುಂದುವರಿಯಬೇಕು. ಅರವಿಂದ ಲಿಂಬಾವಳಿ 2008ರಿಂದ ಈವರೆಗೂ ಮೂರು ಬಾರಿ ಆಯ್ಕೆಯಾಗಿದ್ದಾರೆ. ರಸ್ತೆ, ಚರಂಡಿ ಹಾಗೂ ಕೆರೆ ಅಭಿವೃದ್ಧಿ ಸೇರಿ ಹಲವು ರೀತಿಯ ಪ್ರಗತಿ ಕಾರ್ಯಗಳನ್ನು ಮಾಡಿದ್ದಾರೆ. ಆ ಕೆಲಸಗಳಿಗೆ ಕಳಶಪ್ರಾಯವಾಗಿ ಮತ್ತಷ್ಟು ಅಭಿವೃದ್ಧಿ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಕಳೆದ ಮೂರು ಅವಧಿಗಳಲ್ಲೂ ತಲಾ ಒಬ್ಬೊಬ್ಬರಂತೆ ಕಾಂಗ್ರೆಸ್ ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಇದೀಗ ಅವರೆಲ್ಲರೂ ಕಳೆದುಹೋಗಿದ್ದಾರೆ. ಮಹದೇವಪುರ ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ದಿ ಬಗ್ಗೆ ಕಾಂಗ್ರೆಸ್ ಅಭ್ಯರ್ಥಿಗೆ ಏನು ಗೊತ್ತು? ಒಂದು ತಿಂಗಳ ಹಿಂದೆ ಕ್ಷೇತ್ರಕ್ಕೆ ಕಾಲಿಟ್ಟಿದ್ದಾರೆ. ಇಷ್ಟು ವರ್ಷ ಎಲ್ಲಿ ಹೋಗಿದ್ದರು. ಸುಖಾಸುಮ್ಮನೆ ಆರೋಪ ಸರಿಯಲ್ಲ. ಕ್ಷೇತ್ರ ಪರಿವೀಕ್ಷಣೆ ನಡೆಸಿದರೆ ಮನದಟ್ಟಾಗುತ್ತದೆ ಎಂದರು. ಸೋರಹುಣಸೆ, ವಾಲೇಪುರ, ಮಧುರಾನಗರ, ವರ್ತರು, ಬಳಗೆರೆ, ಗುಂಜೂರು, ಗುಂಜೂರುಪಾಳ್ಯ, ಕಾಚಮಾರನ ಹಳ್ಳಿ, ಕೊಡತಿ ಸೇರಿ ವಿವಿಧ ಪ್ರದೇಶಗಳಲ್ಲಿ ಪ್ರಚಾರ ನಡೆಸಿ ತಮ್ಮನ್ನು ಬೆಂಬಲಿಸುವಂತೆ ಮತದಾರರಲ್ಲಿ ಮಂಜುಳಾ ಮನವಿ ಮಾಡಿದರು.
ಪ್ರಗತಿಯಲ್ಲಿ ಕ್ರೀಡಾಂಗಣಗಳ ಕಾಮಗಾರಿ: ಮಹದೇವಪುರ ಅಭಿವೃದ್ಧಿ ತೆರೆದಿಟ್ಟ ಬಿಜೆಪಿ ಅಭ್ಯರ್ಥಿ ಮಂಜುಳಾ ಲಿಂಬಾವಳಿ

ಅಭಿವೃದ್ಧಿಗಾಗಿ ಮತ ನೀಡಿ: ಮಂಜುಳಾ ಲಿಂಬಾವಳಿ ಮನವಿ

ಮೋದಿ ಭಾಷಣ ಕೇಳಿದ ಮಂಜುಳಾ ಲಿಂಬಾವಳಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × four =
Remember me
