ರಾಮನಗರ:ವೋಟರ್ ಐಡಿ ಪ್ರಕರಣ ಬೆನ್ನಲ್ಲೇ ಕಾಂಗ್ರೆಸ್​ ವಿರುದ್ಧ ವೋಟರ್​ ಗೇಟ್​ ಆರೋಪ ಕೇಳಿಬಂದಿದ್ದು, ಮುಜುಗರಕ್ಕೀಡಾಗುವಂಥ ಪರಿಸ್ಥಿತಿ ಎದುರಾಗಿದೆ. ಏಕೆಂದರೆ ಕೆಪಿಸಿಸಿ ಅಧ್ಯಕ್ಷರ ವಿರುದ್ಧವೇ ಇಂಥದ್ದೊಂದು ಆರೋಪ ಕೇಳಿಬಂದಿದೆ.
ಕನಕಪುರ ವಿಧಾನಸಭಾ ಕ್ಷೇತ್ರದಲ್ಲಿ ಹಮ್ಮಿಕೊಳ್ಳಲಾಗಿರುವ ಕನಕೋತ್ಸವದಲ್ಲಿ ಅನಿವಾಸಿ ಕನಕಪುರ ಕ್ಷೇತ್ರದ ಮತದಾರರಿಗೆ ಸನ್ಮಾನ ಮಾಡಲು ಉದ್ದೇಶಿಸಲಾಗಿದ್ದು, ಅದಕ್ಕಾಗಿ ಕಾಂಗ್ರೆಸ್​ ಮಾಹಿತಿ ಕಲೆ ಹಾಕುತ್ತಿರುವುದು ಬಹಿರಂಗಗೊಂಡಿದೆ.
ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಅನಿವಾಸಿ ಕನಕಪುರ ಕ್ಷೇತ್ರದ ಮತದಾರರ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಮತದಾರರ ವೋಟರ್ ಐಡಿ, ಆಧಾರ್ ಸಂಖ್ಯೆ, ಮೊಬೈಲ್​ಫೋನ್​ ನಂಬರ್, ಜಾತಿ, ಉದ್ಯೋಗಗಳ ವಿವರಗಳನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕಲೆ ಹಾಕುತ್ತಿದ್ದಾರೆಂದು ಆರೋಪ ಕೇಳಿಬಂದಿದೆ.

ಖಾಸಗಿ ಮಾಹಿತಿಗಳನ್ನು ಕಲೆಹಾಕುವುದಾಗಲಿ, ಅದನ್ನು ನಿಮ್ಮ ಚುನಾವಣೆ ಅಥವಾ ನಿಮ್ಮ ಪ್ರಾಯೋಜಿತ ಕಾರ್ಯಕ್ರಮಗಳಿಗೆ ಬಳಸಿಕೊಳ್ಳುವುದು ನಾಚಿಕೆಗೇಡು ಹಾಗೂ ಅಪರಾಧವೆಂದು ಜೆಡಿಎಸ್ ಮುಖಂಡರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಮಾತ್ರವಲ್ಲ, ವೋಟರ್ ಗೇಟ್ ಪ್ರಕರಣದಲ್ಲಿ ಬೊಬ್ಬೆ ಹೊಡಿಯುತ್ತೀರಿ, ಆದರೆ ನೀವು ಖಾಸಗಿ ಮಾಹಿತಿ ಸಂಗ್ರಹ ಮಾಡುತ್ತಿರುವುದು ಅಪರಾಧವಲ್ಲವೇ? ಈ ಅಧಿಕಾರವನ್ನು ನಿಮಗೆ ನಿಮ್ಮ ಕಾರ್ಯಕರ್ತರಿಗೆ ಕೊಟ್ಟಿದ್ದು ಯಾರು? ಎಂದೂ ಅವರು ಪ್ರಶ್ನೆ ಮಾಡಿದ್ದಾರೆ.
ಗಂಡನ ಕಿರುಕುಳ: ದೇಶದಲ್ಲಿ ಕರ್ನಾಟಕವೇ ಪ್ರಥಮ; ಮದ್ಯವ್ಯಸನಿಗಳಿಂದಲೇ ಜಾಸ್ತಿ ಉಪಟಳ..

ಅಂಬಿ ಇಲ್ಲದ ನಾಲ್ಕು ವರುಷ; ಪತಿಯ ನೆನೆದು ಸುಮಲತಾ ಹೇಳಿದ್ದು ಹೀಗೆ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 4 =
Remember me
