ಬೆಂಗಳೂರು:ಮತದಾರರ ದತ್ತಾಂಶ ಕಳವು ಪ್ರಕರಣ ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ. ಚಿಲುಮೆ ಸಂಸ್ಥೆ, ಬಿಬಿಎಂಪಿ ಮೇಯರ್​ ಹಾಗೂ ಬಿಜೆಪಿ ವಿರುದ್ಧ ರಾಜ್ಯ ಚುನಾವಣಾ ಆಯೋಗಕ್ಕೆ ದೂರು ನೀಡಿದ ಕಾಂಗ್ರೆಸ್​ನ ಡಿಕೆಶಿ ಮತ್ತು ಸಿದ್ದರಾಮಯ್ಯ ನೇತೃತ್ವದ ನಿಯೋಗ, ದೂರಿನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಮತ್ತು ಅಶ್ವಥ ನಾರಾಯಣ ಅವರ ಹೆಸರನ್ನೂ ಉಲ್ಲೇಖಿಸಿದೆ. ಬಳಿಕ ಜಂಟಿ ಸುದ್ದಿಗೋಷ್ಠಿ ನಡೆಸಿದ ಕೈ ನಾಯಕರು ಸರ್ಕಾರವನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು.
ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಮಾತನಾಡಿ, ಮಧ್ಯಮಗಳು‌ ಈ ಪ್ರಕರಣವನ್ನು ಜನರ ಮುಂದೆ ತೆರದಿಟ್ಟಿವೆ. ಅವರಿಗೆ ಧನ್ಯವಾದ ತಿಳಿಸುತ್ತೇನೆ. ಇದು ಭಾರತದ ದೊಡ್ಡ ಹಗರಣ. ಇದರಿಂದ ಸಿಎಂ ಬೊಮ್ಮಾಯಿ ಮುಖವಾಡ ಕಳಚಿದೆ. ಸರ್ಕಾರವೇ ಈ ಹಗರಣದಲ್ಲಿ ಭಾಗಿಯಾಗಿದೆ ಎಂದು ಆಕ್ರೋಶ ಹೊರಹಾಕಿದರು.
ಚಿಲುಮೆ ಮತ್ತು ಹೊಂಬಾಳೆ ಸಂಸ್ಥೆ ಮೇಲೆ ಎಫ್​ಐಆರ್ ಆಗಿಲ್ಲ. ಬೆಂಗಳೂರು ವಿಧಾನಸಭಾ ಕ್ಷೇತ್ರಗಳ ದತ್ತಾಂಶ ಎಲ್ಲಿದೆ? ಸರ್ಕಾರ ಮತ್ತು ಬಿಜೆಪಿ ಉತ್ತರ ನೀಡುತ್ತಿಲ್ಲ. ಡಿಜಿಟಲ್ ಸಮೀಕ್ಷಾ ಡಾಟಾ ಏನಾಗಿದೆ? ಚಿಲುಮೆ ಸಂಸ್ಥೆಗೆ ಯಾರು ಫಂಡ್ ಮಾಡಿದ್ದಾರೆ? ಬಿಬಿಎಂಪಿಗೆ ಉಚಿತವಾಗಿ ಚಿಲುಮೆ ಕೆಲಸ ಮಾಡಿದೆ, ಈ ಸಂಸ್ಥೆ ನಡೆಸಲು ಯಾರು‌ ಫಂಡ್ ‌ಮಾಡುತ್ತಿದ್ದಾರೆ? ಉದ್ಯೋಗಿಗಳಿಗೆ ಸಂಬಳ ಯಾರು‌ ನೀಡುತ್ತಿದ್ದಾರೆ? ಇದಕ್ಕೆ ಸರ್ಕಾರವೇ ಉತ್ತರ ನೀಡಬೇಕು. ತನಿಖೆಯಿಂದ ಮಾತ್ರ ಸತ್ಯ ಹೊರಗೆ ಬರುತ್ತೆ ಎಂದು ಸುರ್ಜೇವಾಲ ಆಗ್ರಹಿಸಿದರು.
ಜಂಟಿ ಮಾಧ್ಯಮಗೋಷ್ಠಿ, ಕೆಪಿಸಿಸಿ ಕಚೇರಿ.https://t.co/rRRLIGjNS6
— Karnataka Congress (@INCKarnataka)November 19, 2022

ಡಿ.ಕೆ. ಶಿವಕುಮಾರ್ ಮಾತನಾಡಿ, 28 ಕ್ಷೇತ್ರಗಳಿಗೆ ಬಿಬಿಎಂಪಿ ಆದೇಶ ನೀಡಿದೆ. ಚಿಲುಮೆ ಸಂಸ್ಥೆಗೆ ಬಿಬಿಎಂಪಿ ಪತ್ರ ಬರೆದಿದೆ. ಬಿಎಲ್​ಒ ನೇಮಕ ಮಾಡಲು ಅವಕಾಶ ಕೊಟ್ಟಿದ್ದಾರೆ. ಅವಕಾಶ ಕೊಟ್ಟವರ ಮೇಲೆ ಎಫ್​ಐಆರ್ ಹಾಕಬೇಕು. ಅವರನ್ನು ಜಡ್ಜ್ ತಮ್ಮ ವಶಕ್ಕೆ ಪಡೆದು ‌ತನಿಖೆ ಮಾಡಬೇಕು. ಎಲ್ಲವೂ ಸಾರ್ವಜನಿಕರ ಮುಂದೆ ಬರಬೇಕು. ಹೈಕೋರ್ಟ್ ಸುಮೋಟೋ ಕೇಸ್ ಪಡೆದು ತನಿಖೆ ಮಾಡಬೇಕು ಎಂದು ಮನವಿ ಮಾಡಿದರು.
ಸಿದ್ದರಾಮಯ್ಯ ಮಾತನಾಡಿ, ಇದು ವೋಟರ್ ಗೇಟ್ ಪ್ರಕರಣ. ಬಹಳ ಅಪರೂಪ ಇಂತಹ ಪ್ರಕರಣ ನಡೆಯೋದು. ಸಿಎಂ ಬೊಮ್ಮಾಯಿ ಇದರಲ್ಲಿ ಪ್ರಮುಖ ಆರೋಪಿ. ಬೇರೆ ಯಾರದೋ ಮೇಲೆ ಕೇಸ್ ದಾಖಲಿಸಿದ್ರೆ ಆಗಲ್ಲ, ಸಿಎಂ ಬೊಮ್ಮಾಯಿ ಬೆಂಗಳೂರು ಉಸ್ತುವಾರಿ ಕೂಡ ಹೌದು. ಇದಕ್ಕೆ ಬೊಮ್ಮಾಯಿ ಅವರೇ ಉತ್ತರ ನೀಡಬೇಕು. ನನಗೆ ಸಂಬಂಧ ಇಲ್ಲ ಅಂತ ಸಿಎಂ ಹೇಳಲು ಬರಲ್ಲ. ಬರೀ ಸುಳ್ಳು ಹೇಳೋದೆ ಬೊಮ್ಮಾಯಿ ಕೆಲಸ. ಹಿಂದಿನ ಸರ್ಕಾರ ಮಾಡಿಲ್ವಾ ಅಂತಾರೆ, ಅವಾಗ ಇವರೇನು ಕಡ್ಲೆಪುರಿ-ಕಡಬು ತಿಂತಿದ್ರಾ? ಮಾನ ಮರ್ಯಾದೆ ಇದ್ರೆ ಸಿಎಂ ರಾಜೀನಾಮೆ ನೀಡಲಿ. ಕಾನೂನಿಗೆ ಗೌರವ ಇದ್ರೆ ಬಸವರಾಜ ಬೊಮ್ಮಾಯಿ ಅವರೇ ರಾಜೀನಾಮೆ ನೀಡಿ. ಕಾನೂನು ನಿಮ್ಮನ್ನು ಸುಮ್ಮನೆ ಬಿಡಲ್ಲ ಎಂದರು ಎಚ್ಚರಿಸಿದರು.
ತಮಿಳು ಮಕ್ಕಳ ಕನ್ನಡ ಪ್ರೀತಿ! ಸ್ವಗ್ರಾಮದಲ್ಲಿ ತಮಿಳು ಶಾಲೆ ಇದ್ದರೂ ಸರ್ಕಾರಿ ಕನ್ನಡ ಪ್ರಾಥಮಿಕ ಶಾಲೆಯಲ್ಲೇ ಓದುತ್ತಿದ್ದಾರೆ…

ಬಂಗಾರಪೇಟೆ ಪ್ರವೇಶಿಸಿದ ಪಂಚರತ್ನ ರಥಯಾತ್ರೆ: ರಾಗಿ ತೆನೆ ಕೊಟ್ಟು ಶುಭ ಕೋರಿದ ರೈತ ಮಹಿಳೆಯರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − 10 =
Remember me
